ಕಲ್ಲಡ್ಕ ಸರಕಾರಿ ಪ್ರಾಥಮಿಕ ಶಾಲೆಗೆ ಇಸ್ಕಾನ್ ಅಕ್ಷಯ ಪಾತ್ರೆ ಬಿಸಿಯೂಟ ಯೋಜನೆ ಮಂಜೂರು - Karavali Times ಕಲ್ಲಡ್ಕ ಸರಕಾರಿ ಪ್ರಾಥಮಿಕ ಶಾಲೆಗೆ ಇಸ್ಕಾನ್ ಅಕ್ಷಯ ಪಾತ್ರೆ ಬಿಸಿಯೂಟ ಯೋಜನೆ ಮಂಜೂರು - Karavali Times

728x90

25 February 2026

ಕಲ್ಲಡ್ಕ ಸರಕಾರಿ ಪ್ರಾಥಮಿಕ ಶಾಲೆಗೆ ಇಸ್ಕಾನ್ ಅಕ್ಷಯ ಪಾತ್ರೆ ಬಿಸಿಯೂಟ ಯೋಜನೆ ಮಂಜೂರು

ಬಂಟ್ವಾಳ, ಫೆಬ್ರವರಿ 25, 2026 (ಕರಾವಳಿ ಟೈಮ್ಸ್) : ಕಲ್ಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಸ್ಕಾನ್ ಅಕ್ಷಯ ಪಾತ್ರೆ ಬಿಸಿಯೂಟ ಯೋಜನೆ ಮಂಜೂರಾತಿಗೊಳಿಸಿ ಸರಕಾರ ಆದೇಶಿಸಿದೆ. ಶಾಲೆಯ ಮನವಿಯಂತೆ ಇತ್ತೀಚೆಗೆ ಶಿಕ್ಷಣ ಇಲಾಖೆ ಯೋಜನೆಯನ್ನು ಕಾರ್ಯಗತಗೊಳಿಸಿ ಇತ್ತೀಚೆಗೆ ಆದೇಶಿಸಿದೆ. 

ಬಂಟ್ವಾಳ ತಾ ಪಂ ಮಾಜಿ ಅಧ್ಯಕ್ಷ, ಶಾಲಾ ಹಿರಿಯ ವಿದ್ಯಾರ್ಥಿ ಕೆ ಪದ್ಮನಾಭ ರೈ ಹಾಗೂ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಮಧುಸೂಧನ್ ಐತಾಳ್ ಅವರು ಶಾಲಾ ವಿದ್ಯಾರ್ಥಿಗಳಿಗೆ ಊಟ ಬಡಿಸುವ ಮೂಲಕ ಯೋಜನೆಯನ್ನು ಉದ್ಘಾಟಿಸಿದರು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಅಬೂಬಕ್ಕರ್ ಅಶ್ರಫ್, ಎಸ್ ಡಿ ಎಂ ಸಿ ಉಪಾಧ್ಯಕ್ಷ ಚಂದನ್, ಸದಸ್ಯರುಗಳಾದ ಸುರೇಶ್ ನಾಯ್ಕ್, ನಜೀರ್, ವಜ್ರನಾಥ ಕಲ್ಲಡ್ಕ, ಇಸ್ಕಾನ್ ಪ್ರತಿನಿಧಿಗಳು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಕಲ್ಲಡ್ಕ ಸರಕಾರಿ ಪ್ರಾಥಮಿಕ ಶಾಲೆಗೆ ಇಸ್ಕಾನ್ ಅಕ್ಷಯ ಪಾತ್ರೆ ಬಿಸಿಯೂಟ ಯೋಜನೆ ಮಂಜೂರು Rating: 5 Reviewed By: karavali Times
Scroll to Top