ಅರಿಕ್ಕಾಡಿ ಟೋಲ್ ಪ್ಲಾಝಾ ಬಂದ್ ಹಿನ್ನಲೆಯಲ್ಲಿ ಕಾಸರಗೋಡು ಬಸ್ಸುಗಳಲ್ಲಿ ಪ್ರಯಾಣ ದರ ಕಡಿತ - Karavali Times ಅರಿಕ್ಕಾಡಿ ಟೋಲ್ ಪ್ಲಾಝಾ ಬಂದ್ ಹಿನ್ನಲೆಯಲ್ಲಿ ಕಾಸರಗೋಡು ಬಸ್ಸುಗಳಲ್ಲಿ ಪ್ರಯಾಣ ದರ ಕಡಿತ - Karavali Times

728x90

5 February 2026

ಅರಿಕ್ಕಾಡಿ ಟೋಲ್ ಪ್ಲಾಝಾ ಬಂದ್ ಹಿನ್ನಲೆಯಲ್ಲಿ ಕಾಸರಗೋಡು ಬಸ್ಸುಗಳಲ್ಲಿ ಪ್ರಯಾಣ ದರ ಕಡಿತ

ಮಂಗಳೂರು, ಫೆಬ್ರವರಿ 05, 2026 (ಕರಾವಳಿ ಟೈಮ್ಸ್) : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ಬರುವ ಕೇರಳ ರಾಜ್ಯದ ಆರಿಕ್ಕಾಡಿ (ಕೇರಳ ರಾಜ್ಯದ ಕುಂಬ್ಳೆ ಸಮೀಪದ ಸ್ಥಳದಲ್ಲಿ) ಎಂಬಲ್ಲಿ ನೂತನವಾಗಿ ಟೋಲ್ ಪ್ಲಾಜಾವನ್ನು ನಿರ್ಮಿಸಿದ್ದು, ಜನವರಿ 13 ರಿಂದ ಟೋಲ್ ಮೊತ್ತವು ಫಾಸ್ಟ್ರಾಗ್ ಮೂಲಕ ವಿಭಾಗದ ವಾಹನಗಳಲ್ಲಿ ಕಡಿತವಾಗುತ್ತಿತ್ತು. ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಫೆಬ್ರವರಿ 4 ರಿಂದ ಜಾರಿಗೆ ಬರುವಂತೆ ಟೋಲ್ ಶುಲ್ಕವನ್ನು ಹಿಂಪಡೆಯಲಾಗಿರುತ್ತದೆ.

ಅದರಂತೆ ವಿಭಾಗದಿಂದ ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ಕಾರ್ಯಾಚರಣೆಯಾಗುತ್ತಿದ್ದ ಸಾರಿಗೆಗಳಲ್ಲಿಯೂ ಸಹ ಪ್ರತಿ ಪ್ರಯಾಣಿಕರಿಗೆ ವಿಧಿಸುತ್ತಿದ್ದ ಟೋಲ್ ಶುಲ್ಕವನ್ನು ಫೆಬ್ರವರಿ 4 ರಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದ್ದು, ಈ ಹಿಂದಿನಂತೆ ಪ್ರಯಾಣದರಗಳನ್ನು ವಿಧಿಸಲಾಗುತ್ತಿದೆ ಎಂದು ಕೆ.ಎಸ್.ಆರ್.ಟಿ.ಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಅರಿಕ್ಕಾಡಿ ಟೋಲ್ ಪ್ಲಾಝಾ ಬಂದ್ ಹಿನ್ನಲೆಯಲ್ಲಿ ಕಾಸರಗೋಡು ಬಸ್ಸುಗಳಲ್ಲಿ ಪ್ರಯಾಣ ದರ ಕಡಿತ Rating: 5 Reviewed By: karavali Times
Scroll to Top