ಫೆಬ್ರವರಿ 7 ರಂದು ಕಾವಳಕಟ್ಟೆ ಅಲ್-ಖಾದಿಸ ದಶಮಾನೋತ್ಸವ ಹಾಗೂ ಪದವಿ ಪ್ರದಾನ - Karavali Times ಫೆಬ್ರವರಿ 7 ರಂದು ಕಾವಳಕಟ್ಟೆ ಅಲ್-ಖಾದಿಸ ದಶಮಾನೋತ್ಸವ ಹಾಗೂ ಪದವಿ ಪ್ರದಾನ - Karavali Times

728x90

5 February 2026

ಫೆಬ್ರವರಿ 7 ರಂದು ಕಾವಳಕಟ್ಟೆ ಅಲ್-ಖಾದಿಸ ದಶಮಾನೋತ್ಸವ ಹಾಗೂ ಪದವಿ ಪ್ರದಾನ

ಬಂಟ್ವಾಳ, ಫೆಬ್ರವರಿ 05, 2026 (ಕರಾವಳಿ ಟೈಮ್ಸ್) : ಕಾವಳಕಟ್ಟೆ ಹಝ್ರತ್ ಡಾ ಮುಹಮ್ಮದ್ ಫಾಝಿಲ್ ರಝ್ವಿ ಅವರ ನೇತೃತ್ವದಲ್ಲಿ ಕಳೆದ ಹತ್ತು ವರ್ಷಗಳಿಂದ ಕಾವಳಕಟ್ಟೆ ಖಾದಿಸಾ ಕ್ಯಾಂಪಸ್ಸಿನಲ್ಲಿ ಕಾರ್ಯಾಚರಿಸುತ್ತಿರುವ ಅಲ್-ಖಾದಿಸಾ ಎಜು ಅಕಾಡಮಿಯು ದಶಮಾನೋತ್ಸವ ಆಚರಿಸುತ್ತಿರುವ ಹಿನ್ನಲೆಯಲ್ಲಿ ಫೆಬ್ರವರಿ 7 ರಂದು ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಅಕಾಡಮಿಯ ಅಧೀನದಲ್ಲಿ ಇಸ್ಲಾಮಿಕ್ ದಅವಾ ಕಾಲೇಜು, ಇಂಗ್ಲಿಷ್ ಮೀಡಿಯಂ ಸ್ಕೂಲ್, ನರ್ಸರಿ ಶಾಲೆ, ಪ್ರೀ ದಅವಾ ವಸತಿ ಶಾಲೆ, ಅಲ್-ಖಾದಿಸಾ ಪಿಯು ಕಾಲೇಜು ಹಾಗೂ ಝಹ್-ರತುಲ್ ಖುರ್-ಆನ್ ಸಹಿತ ವಿವಿಧ ಕೋರ್ಸುಗಳನ್ನು ಕಲಿಸಲಾಗುತ್ತಿದೆ. ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 

ದಶಮಾನೋತ್ಸವದ ಅಂಗವಾಗಿ ಫೆಬ್ರವರಿ 5 ರಿಂದ 7ರವೆಗೆ ಶಾಲಾ ಪೆÇೀಷಕರ ಸಂಗಮ, ಮೊಹಲ್ಲಾ ಪ್ರತಿನಿಧಿ ಸಮಾವೇಶ, ಹಳೆ ವಿದ್ಯಾರ್ಥಿ ಸಂಗಮ, ಮಜ್ಲಿಸುಲ್ ಮಹಬ್ಬಃ ಸಹಿತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಫೆಬ್ರವರಿ 7 ಶನಿವಾರ ಸಂಜೆ ಸಮಾರೋಪ ಸಮಾರಂಭ ಹಾಗೂ ದಅವಾ ಕಾಲೇಜಿನಲ್ಲಿ ಶಿಕ್ಷಣ ಪೂರ್ಣಗೊಳಿಸಿದ ನಲ್ವತ್ತು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. 

ಇದೇ ವೇಳೆ ಡಾ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ಹಾಗೂ ಸಯ್ಯಿದ್ ಕುಂಬೋಳ್ ಅಟಕೋಯ ತಂಙಳ್ ಅವರ ನೇತೃತ್ವದಲ್ಲಿ ವಾರ್ಷಿಕ ಜಲಾಲಿಯ್ಯ ಆಧ್ಯಾತ್ಮಿಕ ಸಂಗಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಫೆಬ್ರವರಿ 7 ರಂದು ಕಾವಳಕಟ್ಟೆ ಅಲ್-ಖಾದಿಸ ದಶಮಾನೋತ್ಸವ ಹಾಗೂ ಪದವಿ ಪ್ರದಾನ Rating: 5 Reviewed By: karavali Times
Scroll to Top