ಉಳ್ಳಾಲ, ಫೆಬ್ರವರಿ 04, 2026 (ಕರಾವಳಿ ಟೈಮ್ಸ್) : ಉಳ್ಳಾಲ ಠಾಣಾ ಎನ್ ಡಿ ಪಿ ಎಸ್ ಪ್ರಕರಣದ ಆರೋಪಿ ಹಾಗೂ ಜೆ ಎಂ ಎಫ್ ಸಿ 2ನೇ ನ್ಯಾಯಾಲಯದ ಸಿಸಿ ಸಂಖ್ಯೆ 1757/13ನೇ ಪ್ರಕರಣದಲ್ಲಿ ತಲೆಮಾರಿಕೊಂಡಿದ್ದ ಆರೋಪಿ ಉಳ್ಳಾಲ-ಮುಕ್ಕಚ್ಚೇರಿ ತೋಯಿಬ್ ಮಸೀದಿ ಎದುರುಗಡೆಯ ಶಾಜ್ಮೀನ್ ಅಪಾರ್ಟ್ ಮೆಂಟ್ ರೂಂ ಸಂಖ್ಯೆ 7 ರ ನಿವಾಸಿ ಮೊಹಮ್ಮದ್ ಇಸ್ಮಾಯಿಲ್ ಅವರ ಪುತ್ರ ಮೊಹಮ್ಮದ್ ಸಂಶೀರ್ ಎಂಬಾತನನ್ನು ಫೆಬ್ರವರಿ 4 ರಂದು ಪತ್ತೆ ಹಚ್ಚಿದ ಉಳ್ಳಾಲ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈತನಿಗೆ ನ್ಯಾಯಾಲಯವು ಎಲ್ ಪಿ ಸಿ ವಾರಂಟ್ ಹೊರಡಿಸಿದ್ದು, 14 ವರ್ಷಗಳ ಬಳಿಕ ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆ.
4 February 2026
- Blogger Comments
- Facebook Comments
Subscribe to:
Post Comments (Atom)














0 comments:
Post a Comment