ರಥಬೀದಿಯಲ್ಲಿ ಮನೆಗೆ ಅಬಕಾರಿ ಇಲಾಖಾಧಿಕಾರಿಗಳ ದಾಳಿ : ಮಾದಕ ವಸ್ತು ಪತ್ತೆ - Karavali Times ರಥಬೀದಿಯಲ್ಲಿ ಮನೆಗೆ ಅಬಕಾರಿ ಇಲಾಖಾಧಿಕಾರಿಗಳ ದಾಳಿ : ಮಾದಕ ವಸ್ತು ಪತ್ತೆ - Karavali Times

728x90

19 February 2026

ರಥಬೀದಿಯಲ್ಲಿ ಮನೆಗೆ ಅಬಕಾರಿ ಇಲಾಖಾಧಿಕಾರಿಗಳ ದಾಳಿ : ಮಾದಕ ವಸ್ತು ಪತ್ತೆ

ಮಂಗಳೂರು, ಫೆಬ್ರವರಿ 19, 2026 (ಕರಾವಳಿ ಟೈಮ್ಸ್) : ನಗರದ ರಥಬೀದಿಯಲ್ಲಿರುವ ಮನೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮಾದಕ ವಸ್ತುಗಳನ್ನು ವಶಪಡಿಸಿದ್ದಾರೆ. 

ಹಳೆ ಆರೋಪಿ ಮಹೇಶ್ ಶೆಟ್ಟಿ ವಾಸವಿದ್ದ ಮನೆಗೆ ಮಂಗಳೂರು ಉಪವಿಭಾಗ-1ರ ಉಪ ಅಧೀಕ್ಷಕಿ ಗಾಯತ್ರಿ ಸಿ ಎಚ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಆರೋಪಿ ಮಹೇಶ್ ಶೆಟ್ಟಿ ಮನೆಯಲ್ಲಿ 960 ಗ್ರಾಂ ಎಂ.ಡಿ.ಎಂ.ಎ ಹಾಗೂ 0.5 ಗ್ರಾಂ ಗಾಂಜಾ ಪತ್ತೆಯಾಗಿದೆ. ಗಾಂಜಾ ಸೇದಲು ಬಳಸುವ ಸಾಧನಗಳ ಜೊತೆ ಪ್ಯಾಕಿಂಗ್ ಮಾಡಿ ಮಾರಾಟ ಮಾಡಲು ಬಳಸುವ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಕವರುಗಳನ್ನು ಜಪ್ತುಮಾಡಿದ್ದು, ಮನೆಯಲ್ಲಿ  ಮಾದಕ ದ್ರವ್ಯ ಸೇವಿಸುತ್ತಿದ್ದ ಆರೋಪಿ ಅತಿಕ್ ಶೆಟ್ಟಿಯನ್ನು ಬಂಧಿಸಲಾಗಿದೆ. ಆರೋಪಿ ಮಹೇಶ್ ಶೆಟ್ಟಿ ತಲೆಮರೆಸಿಕೊಂಡಿದ್ದಾನೆ. ಎರಡನೇ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ  ಬಂಧನ ವಿಧಿಸಲಾಗಿದೆ. 

ಕಾರ್ಯಾಚರಣೆಯಲ್ಲಿ ಉಪನಿರೀಕ್ಷಕರಾದ ಪಿ ಹರೀಶ್, ಅಬ್ದುಲ್ ರಜಾಕ್, ಸುರೇಂದ್ರ ಹಾಗೂ ಪೇದೆಗಳಾದ ಶಿವಲಿಂಗಪ್ಪ ಶಿಂಗನಲ್ಲಿ, ಸಂದೀಪ್, ಕುಮಾರ್ ನೀಲ್ ನಾಯ್ಕ್, ದೇವರಾಜ್, ಹರೀಶ್, ಪ್ರಜ್ವಲ್, ಸಂಧ್ಯಾ, ವಿನೀತ ಪಾಲ್ಗೊಂಡಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ರಥಬೀದಿಯಲ್ಲಿ ಮನೆಗೆ ಅಬಕಾರಿ ಇಲಾಖಾಧಿಕಾರಿಗಳ ದಾಳಿ : ಮಾದಕ ವಸ್ತು ಪತ್ತೆ Rating: 5 Reviewed By: karavali Times
Scroll to Top