ಮಂಗಳೂರು, ಫೆಬ್ರವರಿ 19, 2026 (ಕರಾವಳಿ ಟೈಮ್ಸ್) : ಮಂಗಳೂರು ನಗರ ಪೆÇಲೀಸ್ ಕಮಿಷನರೇಟ್ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ವಿವಿಧ ಸುಮಾರು 31 ಪ್ರಕರಣಗಳಲ್ಲಿ ಭಾಗಿಯಾಗಿ ಕಳೆದ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಮಂಗಳೂರು ಸಿಸಿಬಿ ಪೆÇಲೀಸರು ಖೆಡ್ಡಾಗೆ ಕೆಡಹುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಯನ್ನು ಮಂಗಳೂರು ತಾಲೂಕು, ಹಳೆಯಂಗಡಿ ಗ್ರಾಮದ, ಕೊಪ್ಪಳ ನಿವಾಸಿ ದಿವಂಗತ ಹಮ್ಮಬ್ಬ ಎಂಬವರ ಪುತ್ರ ಸಪ್ವಾನ್ ಹುಸೈನ್ ಅಲಿಯಾಸ್ ಹುಸೈನ್ ಅಲಿಯಾಸ್ ಸುಭಾಷ ಅಲಿಯಾಸ್ ರಾಜೀಕ್ ಅಲಿಯಾಸ್ ನಾಸೀರ್ (42) ಪ್ರಸ್ತುತ ಹೆಸರು ಉಮ್ಮರ್ ಮೊಹಮ್ಮದ್ ನಾಸಿರ್ ಬಿನ್ ಮೊಹಮ್ಮದ್ ಉಮ್ಮರ್ ಮೊಹಮ್ಮದ್ ಮೆಹಬೂಬ್ ಭಾಷಾ ಸ್ಟ್ರೀಟ್, ರಾಯಚೋಟಿ, ವೈ ಎಸ್ ಆರ್ ಜಿಲ್ಲೆ, ಆಂಧ್ರಪ್ರದೇಶ ಎಂದು ಹೆಸರಿಸಲಾಗಿದೆ.
ಈತನ ವಿರುದ್ದ ವಿವಿಧ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಕೊಲೆ, 4 ಕೊಲೆಯತ್ನ, 17 ಸುಲಿಗೆ/ ದರೋಡೆ, 1 ಅಪಹರಣ/ ಗ್ಯಾಂಗ್ ರೇಪ್, 5 ಪೊಲೀಸರ ಮೇಲೆ ಹಲ್ಲೆ ಪ್ರಕರಣ ಹಾಗೂ 2 ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು 31 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 2 ಪ್ರಕರಣಗಳಲ್ಲಿ ಶಿಕ್ಷೆ ಘೋಷಣೆಯಾಗಿದೆ. 13 ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದು, ಉಳಿದ 16 ಪ್ರಕರಣಗಳು ವಿಚಾರಣೆಗೆ ಬಾಕಿ ಇದೆ.
ಈತನ ವಿರುದ್ಧ ಮುಲ್ಕಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ 2008ರಲ್ಲಿ ದಾಖಲಾಗಿದ್ದ ಕಾರು ಚಾಲಕ ಪ್ರವೀಣ್ ಎಂಬವರ ಅಪಹರಣ, ದರೋಡೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ವಿಧಿಸಲ್ಪಟ್ಟಿದೆ. ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ 2008ರಲ್ಲಿ ನಡೆಸಿದ ದರೋಡೆ ಪ್ರಕರಣದಲ್ಲಿ 3 ವರ್ಷ ಶಿಕ್ಷೆ ವಿಧಿಸಲಾಗಿದೆ.
2017ರಲ್ಲಿ ಹನೀಫ್ ಮಲಾರ್ ಎಂಬಾತನ ಸಹಾಯದಿಂದ ಮೈಸೂರು ವಿಳಾಸದಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದ ಆರೋಪಿ ನಂತರ ಅದನ್ನು ರಾಯಚೋಟಿ (ಆಂಧ್ರಪ್ರದೇಶ) ವಿಳಾಸಕ್ಕೆ ಬದಲಾಯಿಸಿಕೊಂಡಿದ್ದನು. ಅಲ್ಲಿಯೇ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಂಡಿದ್ದನು. ಮುಜೀಬ್ ಎಂಬಾತನ ಮೂಲಕ ನಕಲಿ ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದನು. 2017ರಲ್ಲಿ ಸುರತ್ಕಲ್ ಠಾಣಾ ವ್ಯಾಪ್ತಿಯ ಲೆಪ್ಟಿ ಸಫ್ವಾನ್ ಅಪಹರಣ ಮತ್ತು ಕೊಲೆ ಪ್ರಕರಣದ ನಂತರ ತಲೆಮರೆಸಿಕೊಂಡಿದ್ದನು. ಬಳ್ಳಾರಿ ಕಾರಾಗೃಹದಲ್ಲಿದ್ದಾಗ ಪರಿಚಯವಾದ ಕೊಟ್ರೇಶಿ ಅಲಿಯಾಸ್ ಸೂಫಿಯಾನ್ ಮಾರ್ಗದರ್ಶನದ ಮೇರೆಗೆ ಆಂಧ್ರಪ್ರದೇಶದ ರಾಯಚೋಟಿಗೆ ತೆರಳಿ ಸುಮಾರು ಒಂದು ವರ್ಷ ಅಲ್ಲಿ ಶಂಶುದ್ದೀನ್ ಮುಕ್ಕ ಹಾಗೂ ಸೂಫಿಯಾನ್ ಜೊತೆ ಬೀದಿ ಬದಿ ಕ್ಯಾಂಟೀನ್ ನಡೆಸುತ್ತಿದ್ದನು. 2018ರಲ್ಲಿ ನಕಲಿ ಪಾಸ್ ಪೋರ್ಟ್ ಬಳಸಿ ಸೌದಿ ಅರೇಬಿಯಾಗೆ ತೆರಳಿ ಒಂದು ತಿಂಗಳು ಕೂಲಿ ಕೆಲಸ ಮಾಡಿದ್ದ ಈತ ನಂತರ ವೀಸಾವನ್ನು ಹೌಸ್ ಡ್ರೈವಿಂಗ್ ವೀಸಾಗೆ ಬದಲಾಯಿಸಿಕೊಂಡು ಅಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದನು. 8 ತಿಂಗಳ ನಂತರ ರಾಯಚೋಟಿಗೆ ವಾಪಸ್ಸು ಬಂದಿದ್ದನು.
ಆರೋಪಿಯನ್ನು ಇದೀಗ ಮಂಗಳೂರು ಸಿಸಿಬಿ ಪೆÇಲೀಸರು ಅಂದ್ರಪ್ರದೇಶ ರಾಯಚೋಟೆಯಿಂದ ವಶಕ್ಕೆ ಪಡೆದು ಮುಲ್ಕಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಈತನಿಗೆ ತಲೆಮರೆಸಿಕೊಳ್ಳಲು. ನಕಲಿ ದಾಖಲೆ, ಪಾಸ್ ಪೆÇೀರ್ಟ್ ತಯಾರಿಸಲು ಸಹಕರಿಸಿದ ಮತ್ತು ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಪತ್ತೆಮಾಡಿ ತನಿಖೆಗೆ ಒಳಪಡಿಸಲಾಗುವುದು ಹಾಗೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.












0 comments:
Post a Comment