ಮಂಗಳೂರು, ಫೆಬ್ರವರಿ 07, 2026 (ಕರಾವಳಿ ಟೈಮ್ಸ್) : ವಿಶೇಷ ಚೇತನರಿಗೆ ಅತ್ಯಾಧುನಿಕ ಎಲೆಕ್ಟ್ರಿಕ್ ವೀಲ್ ಚೆಯರ್ ಸಹಿತ ಅಗತ್ಯ ಸಾಧನಾ ಸಲಕರಣೆಗಳ ವಿತರಣಾ ಕಾರ್ಯಕ್ರಮವು ಮಂಗಳೂರು ಸಂಸದರ ಕಚೇರಿಯಲ್ಲಿ ಫೆ 7 ರಂದು ನಡೆಯಿತು.
ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ವಿಶೇಷ ಚೇತನ ಫಲಾನುಭವಿಗಳಿಗೆ ಅತ್ಯಾಧುನಿಕ ಎಲೆಕ್ಟ್ರಿಕ್ ವೀಲ್ ಚೇರ್‍ಗಳು ಹಾಗೂ ಇತರ ಸಾಧನಗಳನ್ನು ವಿತರಿಸಿದರು. ಮುಲ್ಕಿ-ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಉಪಸ್ಥಿತರಿದ್ದರು.
ಸಂಸದ ಕ್ಯಾ. ಚೌಟ ಅವರ ಮನವಿಗೆ ಸ್ಪಂದಿಸಿದ ಮಂಗಳೂರು ಎಂ ಎಸ್ ಇ ಜೆಡ್ ಲಿಮಿಟೆಡ್ ಸಂಸ್ಥೆಯು ತನ್ನ 2025-26ನೇ ಸಾಲಿನ ಸಿ ಎಸ್ ಆರ್ ಯೋಜನೆಯಡಿ ಈ ಉಪಯುಕ್ತ ಸಾಧನಗಳನ್ನು ಒದಗಿಸಿದೆ. ಅಂಗ ವೈಕಲ್ಯ ಹೊಂದಿರುವ ಫಲಾನುಭವಿಗಳ ದೈನಂದಿನ ಓಡಾಟಗಳಿಗೆ ಅನುಕೂಲ ಕಲ್ಪಿಸಲು ಒಟ್ಟು ಅತ್ಯಾಧುನಿಕ ಆರು ಎಲೆಕ್ಟ್ರಿಕ್ ವೀಲ್ ಚೇರ್‍ಗಳು, ಗಾಲಿ ಕುರ್ಚಿಯನ್ನು ಸ್ಕೂಟರ್ ಆಗಿ ಪರಿವರ್ತಿಸುವ ಒಂದು ‘ನಿಯೋ ಫ್ಲೈ ಮತ್ತು ನಿಯೋ ಬೋಲ್ಟ್’ ಸಾಧನ ಹಾಗೂ ಒಂದು ಅತ್ಯಾಧುನಿಕ ‘ಎಂಡೋಲೈಟ್ ಸೈಮ್ಸ್ ಪೆÇ್ರಸ್ಥೆಸಿಸ್’ (ಕೃತಕ ಕಾಲು) ಫಲಾನುಭವಿಗಳಿಗೆ ವಿತರಿಸಲಾಗಿದೆ.
ಈ ಸಂದರ್ಭ ಮಾತನಾಡಿದ ಸಂಸದರು, ವಿಶೇಷ ಚೇತನರು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕಲು ಇಂತಹ ಸಲಕರಣೆಗಳ ನೆರವು ಬಹಳ ಮುಖ್ಯವಾಗಿದೆ. ನಮ್ಮ ಮನವಿಯನ್ನು ಪುರಸ್ಕರಿಸಿ ಜಿಲ್ಲೆಯ ಫಲಾನುಭವಿಗಳಿಗೆ ಅತ್ಯುನ್ನತ ಗುಣಮಟ್ಟದ ಆಧುನಿಕ ಸಾಧನಗಳನ್ನು ಒದಗಿಸಿದ ಎಂ ಎಸ್ ಇ ಜೆಡ್ ಲಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಹಾಗೂ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಂ ಎಸ್ ಇ ಜೆಡ್ ಎಲ್ ಸಂಸ್ಥೆಯ ಸಿಇಓ ಸೂರ್ಯ ನಾರಾಯಣ್, ಹೆಡ್ ಆಪರೇಷನ್ಸ್ ಈಟಾ ಶ್ರೀನಿವಾಸಲು, ಪಣಿಭೂಷಣ್, ಯೋಗೀಶ್, ಜಯಪ್ರಕಾಶ್ ಸೂರಿಂಜೆ ಮೊದಲಾದವರು ಭಾಗವಹಿಸಿದ್ದರು.














0 comments:
Post a Comment