ಮಂಗಳೂರು, ಫೆಬ್ರವರಿ 19, 2026 (ಕರಾವಳಿ ಟೈಮ್ಸ್) : ಕೊಲೆ ಪ್ರಕರಣದ ಆರೋಪಿಯ ಅಪರಾಧ ಸಾಬೀತಾಗಿ ನ್ಯಾಯಾಲಯ ಐದು ವರ್ಷಗಳ ಶಿಕ್ಷೆ ವಿಧಿಸಿ 25 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ತೀರ್ಪಿತ್ತಿದೆ.
ಶಿಕ್ಷೆಗೊಳಗಾದ ಆರೋಪಿಯನ್ನು ಕೇರಳ ರಾಜ್ಯದ, ಕಣ್ಣೂರು ಜಿಲ್ಲೆಯ ಕೂವೇರಿ, ಚಪ್ಪರಪಡವು ಮಡಂತಟ್ಟು-ನೀರ್ಪೇಲ್ಮನೆ ನಿವಾಸಿ ವರ್ಕಿ ಎಂಬವರ ಪುತ್ರ ಜಾನ್ಸನ್ ಎನ್ ವಿ ಅಲಿಯಾಸ್ ಬಿನೋಯ್ (53) ಎಂದು ಹೆಸರಿಸಲಾಗಿದೆ.
2023 ರ ಡಿಸೆಂಬರ್ 10 ರಂದು ಪಣಂಬೂರು ಪೆÇಲೀಸ್ ಠಾಣಾ ಸರಹದ್ದಿನ ಪಣಂಬೂರು ಗ್ರಾಮದ ತಣ್ಣೀರುಬಾವಿ ಟ್ರೀ ಪಾರ್ಕ್ ಬಳಿ ಇರುವ ಮೀನುಗಾರಿಕಾ ಬೋಟ್ ಗಳನ್ನು ತಯಾರಿಸುವ ಮತ್ತು ರಿಪೇರಿ ಮಾಡುವ ಮಂಗಳಾ ಬೋಟ್ ಯಾರ್ಡ್ ನಲ್ಲಿ ಕಬ್ಬಿಣದ ಕೆಲಸ ಮಾಡಿಕೊಂಡಿದ್ದ ಬಿನು ಜಿ ಮತ್ತು ಮರದ ಕೆಲಸ ಮಾಡಿಕೊಂಡಿದ್ದ ಜಾನ್ಸನ್ ಎನ್.ವಿ ಅಲಿಯಾಸ್ ಬಿನೋಯ್ ಎಂಬವರುಗಳ ನಡುವೆ ಕೆಲಸದ ನಂತರ ತಾವುಗಳು ತಂಗುವ ಶೆಡ್ ನಲ್ಲಿ ಇಬ್ಬರೂ ಹಣಕಾಸಿನ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಆರೋಪಿ ಜಾನ್ಸನ್ ಎನ್ ವಿ ಅಲಿಯಾಸ್ ಬಿನೋಯ್ ಎಂಬಾತನು ಬಿನುವಿನ ಎದೆಯ ಪಕ್ಕೆಗೆ ಕಬ್ಬಿಣದ ಉಳಿಯಿಂದ ಇರಿದು ಕೊಲೆ ಮಾಡಿದ್ದ. ಈ ಬಗ್ಗೆ ಪಣಂಬೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ಕೈಗೊಂಡು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಕಲಂ 302 ಐಪಿಸಿ ರಂತೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು. ನ್ಯಾಯಾಲಯದಲ್ಲಿ ಎಸ್.ಸಿ ನಂಬ್ರ 58/2024 ರಂತೆ ವಿಚಾರಣೆ ನಡೆದು, ಪ್ರಕರಣದ ಆರೋಪಿಗೆ ಕಲಂ 302 ಐಪಿಸಿ ಕಾಯ್ದೆಯಡಿಯಲ್ಲಿ 5 ವರ್ಷ ಸಾದಾ ಕಾರಾವಾಸ ಶಿಕ್ಷೆ ಮತ್ತು ಕಲಂ 304(2) ಐಪಿಸಿ ಕಾಯ್ದೆಯಡಿಯಲ್ಲಿ 25 ಸಾವಿರ ರೂಪಾಯಿ ದಂಡ ವಿಧಿಸಿದೆ.
ಪ್ರಕರಣದಲ್ಲಿ ಆರೋಪಿತನು ಜಾಮೀನು ಸಿಗದೆ ಸುಮಾರು 3 ವರ್ಷ 2 ತಿಂಗಳಿನಿಂದ ವಿಚಾರಣಾ ಬಂಧಿಯಾಗಿದ್ದ ಸಮಯದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿಯ ಅಪರಾಧ ಸಾಬೀತಾಗಿ ಶಿಕ್ಷೆಯಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಪಣಂಬೂರು ಪೆÇಲೀಸ್ ಠಾಣೆಯ ಆಗಿನ ಪ್ರಭಾರ ಪೆÇಲೀಸ್ ಇನ್ಸ್ ಪೆಕ್ಟರ್ ಸಂದೀಪ್ ಜಿ.ಎಸ್, ಬಜಪೆ ಪೆÇಲೀಸ್ ಠಾಣೆ ಅವರು ಭಾಗಶಃ ತನಿಖೆ ನಡೆಸಿ, ನಂತರ ಪಣಂಬೂರು ಇನ್ಸ್ ಪೆಕ್ಟರ್ ಮಂಜುನಾಥ ಎಂ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.












0 comments:
Post a Comment