ಬೆಳ್ತಂಗಡಿ : ಮನೆಯಂಗಳದಲ್ಲಿದ್ದ ಪ್ಲಾಸ್ಟಿಕ್ ಕಟ್ಟು ಸ್ಫೋಟ : ಆಟವಾಡುತ್ತಿದ್ದ ಬಾಲಕಗೆ ಗಾಯ - Karavali Times ಬೆಳ್ತಂಗಡಿ : ಮನೆಯಂಗಳದಲ್ಲಿದ್ದ ಪ್ಲಾಸ್ಟಿಕ್ ಕಟ್ಟು ಸ್ಫೋಟ : ಆಟವಾಡುತ್ತಿದ್ದ ಬಾಲಕಗೆ ಗಾಯ - Karavali Times

728x90

19 February 2026

ಬೆಳ್ತಂಗಡಿ : ಮನೆಯಂಗಳದಲ್ಲಿದ್ದ ಪ್ಲಾಸ್ಟಿಕ್ ಕಟ್ಟು ಸ್ಫೋಟ : ಆಟವಾಡುತ್ತಿದ್ದ ಬಾಲಕಗೆ ಗಾಯ

 ಬೆಳ್ತಂಗಡಿ, ಫೆಬ್ರವರಿ 19, 2026 (ಕರಾವಳಿ ಟೈಮ್ಸ್) : ಮನೆಯಂಗಳದಲ್ಲಿ ಬಿದ್ದುಕೊಂಡಿದ್ದ ಕಟ್ಟು ಸ್ಪೋಟಗೊಂಡು ಆಟವಾಡುತ್ತಿದ್ದ ಬಾಲಕ ಗಾಯಗೊಂಡ ಘಟನೆ ಬೆಳ್ತಂಗಡಿಯಲ್ಲಿ ಫೆ 18 ರಂದು ಸಂಭವಿಸಿದೆ. 

ಈ ಬಗ್ಗೆ ಬೆಳ್ತಂಗಡಿ ನಿವಾಸಿ ಜಯಶ್ರೀ (38) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರ ಇಬ್ಬರು ಮಕ್ಕಳು ಮನೆಯಂಗಳದಲ್ಲಿ ಆಟವಾಡುತ್ತಿದ್ದಾಗ, ಅಂಗಳದಲ್ಲಿ ಚೆಂಡಿನಾಕಾರದ ಪ್ಲಾಸ್ಟಿಕ್ ಕಟ್ಟೊಂದು ಬಿದ್ದುಕೊಂಡಿತ್ತು. ಮಕ್ಕಳು ಸದ್ರಿ ಪ್ಲಾಸ್ಟಿಕ್ ಕಟ್ಟಿನಲ್ಲಿ ಆಟವಾಡುವ ವೇಳೆ, ಅದು ಸಿಡಿದು ಹೊಗೆ ಬಂದು ಕಲ್ಲಿನ ಚೂರುಗಳು ಓರ್ವ  ಕಾಲಿಗೆ ಸಣ್ಣಪುಟ್ಟ ಗಾಯವಾಗಿರುತ್ತದೆ. ಸ್ಪೋಟಕ ವಸ್ತುವನ್ನು ಪರಿಶೀಲಿಸಿ ಇತರರೊಂದಿಗೆ ವಿಚಾರಿಸಲಾಗಿ, ಸ್ಪೋಟಗೊಂಡ ವಸ್ತು ಯಾರೋ ಕಿಡಿಗೇಡಿಗಳು ಯಾವುದೋ ಕಾಡು ಪ್ರಾಣಿಗಳ ಬೇಟೆಗಾಗಿ ಇಟ್ಟಿರುವ ಸ್ಟೋಟಕವೆಂದು ಹಾಗೂ ಸದ್ರಿ ಸ್ಫೋಟಕವನ್ನು ನಾಯಿಗಳು ಮನೆಯಂಗಳಕ್ಕೆ ತಂದು ಹಾಕಿರುವ ಸಾಧ್ಯತೆ ಬಗ್ಗೆ ಶಂಕಿಸಲಾಗಿದೆ. 

ಗಾಯಾಳು ಬಾಲಕನನ್ನು ಚಿಕಿತ್ಸೆಗಾಗಿ ಸ್ಥಳೀಯ ಅಸ್ವತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಜಯಶ್ರೀ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬೆಳ್ತಂಗಡಿ : ಮನೆಯಂಗಳದಲ್ಲಿದ್ದ ಪ್ಲಾಸ್ಟಿಕ್ ಕಟ್ಟು ಸ್ಫೋಟ : ಆಟವಾಡುತ್ತಿದ್ದ ಬಾಲಕಗೆ ಗಾಯ Rating: 5 Reviewed By: karavali Times
Scroll to Top