ನೆತ್ರಕೆರೆ : ನವೋದಯ ಮಿತ್ರ ಕಲಾ ವೃಂದ, ನೇತ್ರಾವತಿ ಮಾತೃ ಮಂಡಳಿ ವಾರ್ಷಿಕೋತ್ಸವ - Karavali Times ನೆತ್ರಕೆರೆ : ನವೋದಯ ಮಿತ್ರ ಕಲಾ ವೃಂದ, ನೇತ್ರಾವತಿ ಮಾತೃ ಮಂಡಳಿ ವಾರ್ಷಿಕೋತ್ಸವ - Karavali Times

728x90

9 February 2026

ನೆತ್ರಕೆರೆ : ನವೋದಯ ಮಿತ್ರ ಕಲಾ ವೃಂದ, ನೇತ್ರಾವತಿ ಮಾತೃ ಮಂಡಳಿ ವಾರ್ಷಿಕೋತ್ಸವ

ಬಂಟ್ವಾಳ, ಫೆಬ್ರವರಿ 09, 2026 (ಕರಾವಳಿ ಟೈಮ್ಸ್) : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನವೋದಯ ಮಿತ್ರ ಕಲಾ ವೃಂದ (ರಿ) ಮತ್ತು ನೇತ್ರಾವತಿ ಮಾತೃ ಮಂಡಳಿ, ನೆತ್ತರಕೆರೆ ಇದರ 39ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಫೆ 7 ರಂದು ನೆತ್ತರಕೆರೆ ಶಾಲಾ ವಠಾರದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಸಂದೇಶ್ ಶೆಟ್ಟಿ ಅರೆಬೆಟ್ಟು ಮಾತನಾಡಿ, ಜಗತ್ತಿಗೆ ಶಾಂತಿಯ ಸಂದೇಶ ಕೊಟ್ಟ ದೇಶ ಭಾರತ, ಹಿಂದೂ ಪದ ಕೇವಲ ಧರ್ಮಕ್ಕೆ ಸೀಮಿತವಲ್ಲ ಭಾರತೀಯರೆಲ್ಲರೂ ಹಿಂದೂಗಳು, ನಮ್ಮ ದೇಶ, ಸಮಾಜದೊಟ್ಟಿಗೆ ನಾವು ಇರದಿದ್ದರೆ ಬದುಕು ಸಾರ್ಥಕವಾಗಲಾರದು, ನಮ್ಮ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸಲು ಸಂಘಟನೆ ಅಗತ್ಯ ಎಂದರು. 

ಉದ್ಯಮಿ ಗೋಪಾಲಕೃಷ್ಣ ಶೆಟ್ಟಿ ಕೊಡ್ಮಾಣ್, ಆಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ನೆತ್ತರಕೆರೆ ಶಾಲಾ ಮುಖ್ಯ ಶಿಕ್ಷಕಿ ಸೆಲ್ವಿಯಾ ಬ್ರಿಗ್ಸ್, ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಗೋಪಾಲ್ ಕುಲಾಲ್ ಗೋವಿಂದೊಟ, ಸಂಘ ಅಧ್ಯಕ್ಷ ಜಗದೀಶ ಎನ್, ಗೌರವಾಧ್ಯಕ್ಷ ಪಿ ಸುಬ್ರಮಣ್ಯ ರಾವ್,ನೇತ್ರಾವತಿ ಮಾತೃ ಮಂಡಳಿಯ ಅಧ್ಯಕ್ಷೆ ಸುಶೀಲ ಶೇಖರ, ಸಂಚಾಲಕಿ ಲಲಿತಾ ಸುಂದರ ಮೊದಲಾದವರು ಭಾಗವಹಿಸಿದ್ದರು. 

ಇದೇ ವೇಳೆ ಸೇವಾ ದಕ್ಷತೆಗೆ ಮುಖ್ಯಮಂತ್ರಿಯಿಂದ ಬಂಗಾರ ಪದಕ ಪಡೆದ ಮಂಗಳೂರು ಸಿಸಿಬಿ ಘಟಕದ ಸುಧೀರ್ ಕುಮಾರ್ ಜಾರಂದಗುಡ್ಡೆ ಅವರನ್ನು ಅಭಿನಂದಿಸಲಾಯಿತು. ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಸ್ಮರಣಾರ್ಥ ಬಂಟ್ವಾಳ ತಾಲೂಕಿನ ಸರಕಾರಿ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹಧನ ನೀಡಲಾಯಿತು. ಬಾಳಗೋಕುಲದ ಮಾತಾಜಿ ಗೌತಮಿ ಅವರನ್ನು ಸನ್ಮಾನಿಸಲಾಯಿತು.

ನವೋದಯ ಮಿತ್ರಕಲಾ ವೃಂದದ  ಉಪಾಧ್ಯಕ್ಷ ಸಂತೋಷ್ ಕುಲಾಲ್ ನೆತ್ತರಕೆರೆ ಸ್ವಾಗತಿಸಿ, ಕಾರ್ಯದರ್ಶಿ ಮಹೇಶ್ ವರದಿ ವಾಚಿಸಿದರು, ಸಂಚಾಲಕ ದಾಮೋದರ ನೆತ್ತರಕೆರೆ ಸನ್ಮಾನಿತರನ್ನು ಪರಿಚಯಿಸಿದರು. ಕು ಸಿಂಚನ ಬಹುಮಾನಿತರ ಪಟ್ಟಿ ವಾಚಿಸಿ, ರಂಜಿತ್ ಹಾಗೂ ಕು ಸಿಂಧು ಸನ್ಮಾನಿತರ ಪಟ್ಟಿ ವಾಚಿಸಿದರು. ನೇತ್ರಾವತಿ ಮಾತೃ ಮಂಡಳಿಯ ಕೋಶಾಧಿಕಾರಿ ಜಯಂತಿ ವಿಶ್ವನಾಥ ವಂದಿಸಿ, ಕು ವರ್ಷ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಅನ್ನದಾನ, ಸಾಂಸ್ಕೃತಿಕ ನೃತ್ಯ ವೈವಿದ್ಯ, ಸಂಘದ ಕಲಾವಿದರ ಅಭಿನಯದ “ತಪ್ಪು ಎನ್ಯೂಡ್ಚಿ” ತುಳು ಹಾಸ್ಯಮಯ ನಾಟಕಗಳು ನಡೆಯಿತು. 

  • Blogger Comments
  • Facebook Comments

0 comments:

Post a Comment

Item Reviewed: ನೆತ್ರಕೆರೆ : ನವೋದಯ ಮಿತ್ರ ಕಲಾ ವೃಂದ, ನೇತ್ರಾವತಿ ಮಾತೃ ಮಂಡಳಿ ವಾರ್ಷಿಕೋತ್ಸವ Rating: 5 Reviewed By: karavali Times
Scroll to Top