ಬಂಟ್ವಾಳ ಕುಲಾಲ ಟ್ರೋಫಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ : ಅಮ್ಟಾಡಿ ಪಚ್ಚು ಫ್ರೆಂಡ್ಸ್ ಚಾಂಪಿಯನ್, ಕದ್ರಿ ಕುಲಾಲ ಫ್ರೆಂಡ್ಸ್ ರನ್ನರ್ಸ್ - Karavali Times ಬಂಟ್ವಾಳ ಕುಲಾಲ ಟ್ರೋಫಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ : ಅಮ್ಟಾಡಿ ಪಚ್ಚು ಫ್ರೆಂಡ್ಸ್ ಚಾಂಪಿಯನ್, ಕದ್ರಿ ಕುಲಾಲ ಫ್ರೆಂಡ್ಸ್ ರನ್ನರ್ಸ್ - Karavali Times

728x90

9 February 2026

ಬಂಟ್ವಾಳ ಕುಲಾಲ ಟ್ರೋಫಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ : ಅಮ್ಟಾಡಿ ಪಚ್ಚು ಫ್ರೆಂಡ್ಸ್ ಚಾಂಪಿಯನ್, ಕದ್ರಿ ಕುಲಾಲ ಫ್ರೆಂಡ್ಸ್ ರನ್ನರ್ಸ್

ಬಂಟ್ವಾಳ, ಫೆಬ್ರವರಿ 09, 2026 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ವತಿಯಿಂದ ಕುಲಾಲ ಸೇವಾದಳ ಮತ್ತು ಮಹಿಳಾ ಘಟಕದ ಸಹಕಾರದೊಂದಿಗೆ ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕೆ ನಿಧಿ ಸಂಗ್ರಹ ಮಾಡುವ ಪ್ರಯುಕ್ತ ದಕ್ಷಿಣ ಕನ್ನಡ, ಕಾಸರಗೋಡು ಮತ್ತು ಕೊಡಗು ಜಿಲ್ಲೆಯ ಆಯ್ದ 36 ತಂಡಗಳ ‘ಕುಲಾಲ್ಸ್ ಟ್ರೋಫಿ-2026’ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಬಂಟ್ವಾಳ ಎಸ್ ವಿ ಎಸ್ ಪ್ರೌಢಶಾಲಾ ಮೈದಾನದಲ್ಲಿ ಫೆ 8 ರಂದು ನಡೆಯಿತು. 

ಕೂಟದಲ್ಲಿ ಅಮ್ಟಾಡಿಯ ಪಚ್ಚು ಫ್ರೆಂಡ್ಸ್ ಪ್ರಥಮ ಸ್ಥಾನ ಪಡೆದು ಕುಲಾಲ್ಸ್ ಟ್ರೋಫಿ ಎತ್ತಿ ಹಿಡಿಯಿತು. ಕದ್ರಿ ಕುಲಾಲ್ ಫ್ರೆಂಡ್ಸ್ ತಂಡ ರನ್ನರ್ಸ್ ಪ್ರಶಸ್ತಿ ಪಡೆಯಿತು. ಕಿರಣ್ ಉತ್ತಮ ದಾಂಡುಗಾರ, ಶ್ರವಣ್ ಪಂದ್ಯಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ, ಸೂರಜ್ ಉತ್ತಮ ದಾಳಿಗಾರ, ತೇಜಸ್ ಉತ್ತಮ ಕ್ಷೇತ್ರ ರಕ್ಷಕ ವೈಯುಕ್ತಿಕ ಪ್ರಶಸ್ತಿ ಪಡೆದುಕೊಂಡರೆ, ಕೊಡಗು ಕುಲಾಲ್ ಯೂತ್ ರಾಕರ್ಸ್ ತಂಡ ಉತ್ತಮ ಸಂಘಟನಾ ತಂಡ ಪ್ರಶಸ್ತಿ ಪಡೆಯಿತು.

ಸಚಿನ್, ನಿತಿನ್, ಶ್ರೀಕಾಂತ್, ಸದಾನಂದ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಸಮಾರೋಪ ಸಮಾರಂಭದಲ್ಲಿ ಮುಂಬಯಿ ಹೊಟೇಲ್ ಉದ್ಯಮಿ ದಿನಕರ ಭಂಜನ್ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದರು. ಸಂಘದ ಅಧ್ಯಕ್ಷ ಬಿ ರಮೇಶ್ ಸಾಲ್ಯಾನ್ ಸಂಚಯಗಿರಿ ಅಧ್ಯಕ್ಷತೆ ವಹಿಸಿದ್ದರು. ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಸಿ ಪೆರ್ನೆ, ಕೋಶಾಧಿಕಾರಿ ಸೋಮನಾಥ ಸಾಲ್ಯಾನ್, ಮಹಿಳಾ ಘಟಕದ ಅಧ್ಯಕ್ಷೆ ಆಶಾ ಗಿರಿಧರ, ಸಂಘದ ಉಪಾಧ್ಯಕ್ಷೆ ಜಲಜಾಕ್ಷಿ, ಸಮಿತಿ ಸದಸ್ಯರುಗಳಾದ ಮಚ್ಚೇಂದ್ರ ಸಾಲ್ಯಾನ್, ತಾರನಾಥ ಮೊಡಂಕಾಪು, ದೇವದಾಸ ಅಗ್ರಬೈಲು, ಜಯಂತ ವಗ್ಗ, ಗಣೇಶ್ ಬೆದ್ರಗುಡ್ಡೆ, ಯೋಗೀಶ ಮಿತ್ತಬೈಲು, ಸುರೇಶ್ ಕುಲಾಲ್, ಪ್ರೇಮ ಪೆÇಸಳ್ಳಿ, ಮೀನಾಕ್ಷಿ ಪದ್ಮನಾಭ, ರಾಘವೇಂದ್ರ ಕಾಮಾಜೆ, ಪ್ರೇಮನಾಥ ನೇರಂಬೋಳು, ರಮೇಶ್ ಸಾಲ್ಯಾನ್ ಕೈಕುಂಜೆ, ಮಹಿಳಾ ಘಟಕದ ಸದಸ್ಯರು ಮತ್ತು ಸೇವಾದಳದ ಸದಸ್ಯ ದರ್ಶನ್ ಮೊಡಂಕಾಪು ಮೊದಲಾದವರು ಭಾಗವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಯಾದವ ಕುಲಾಲ್ ಅಗ್ರಬೈಲು ಸ್ವಾಗತಿಸಿ, ಜಯಂತ್ ಅಗ್ರಬೈಲು ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಕುಲಾಲ ಟ್ರೋಫಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ : ಅಮ್ಟಾಡಿ ಪಚ್ಚು ಫ್ರೆಂಡ್ಸ್ ಚಾಂಪಿಯನ್, ಕದ್ರಿ ಕುಲಾಲ ಫ್ರೆಂಡ್ಸ್ ರನ್ನರ್ಸ್ Rating: 5 Reviewed By: karavali Times
Scroll to Top