![]() |
| ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿಯ ರಾಜ್ಯ ಕಾರ್ಯದರ್ಶಿ ಸಿದ್ದೀಕ್ ಸೂರ್ಯ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷ ಹನೀಫ್ ಬಗ್ಗುಮೂಲೆ |
ಬಂಟ್ವಾಳ, ಫೆಬ್ರವರಿ 02, 2026 (ಕರಾವಳಿ ಟೈಮ್ಸ್) : ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾಗಿ ಯುವ ಸಂಘಟಕ, ಯುವ ಉದ್ಯಮಿ, ಬಂಟ್ವಾಳ ತಾಲೂಕಿನ ಸೂರ್ಯ ನಿವಾಸಿ ಸಿದ್ದೀಕ್ ಸೂರ್ಯ ಹಾಗೂ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಬಕ ಸಮೀಪದ ಅಳಕೆಮಜಲು ನಿವಾಸಿ ಹನೀಫ್ ಬಗ್ಗುಮೂಲೆ ಅವರು ನೇಮಕಗೊಂಡಿದ್ದಾರೆ.
ಕಾಂಗ್ರೆಸ್ ಸಮಿತಿ ಹಾಗೂ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಬಗ್ಗೆ ದೇಶಾದ್ಯಂತ ಯುವ ಜನತೆ, ವಿದ್ಯಾರ್ಥಿ ಸಮೂಹ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡುವ ಸಲುವಾಗಿ ಈ ಪ್ರಚಾರ ಯಾತ್ರೆಯು ಪ್ರತೀ ವರ್ಷಕ್ಕೊಮ್ಮೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಸಂಚರಿಸುತ್ತದೆ. ಕೆಪಿಸಿಸಿ ಅಧೀನದಲ್ಲಿ ಒಳಪಡುವ ಈ ಸಮಿತಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಆರ್ ದೊರೈವೇಲ್ ಚೆಯರ್ ಮೆನ್ ಆಗಿರುತ್ತಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ್ ಶೆಟ್ಟಿ ಅವರ ಶಿಫಾರಸ್ಸಿನಂತೆ ಈ ನೇಮಕಾತಿ ನಡೆದಿದೆ.
ಸಿದ್ದೀಕ್ ಸೂರ್ಯ ಅವರು, ಅಲ್-ಅಮೀನ್ ಚಾರಿಟಿ ಗ್ರೂಪ್ ದಕ್ಷಿಣ ಕನ್ನಡ ಇದರ ಆಡಳಿತ ನಿರ್ದೇಶಕರಾಗಿ, ಪುತ್ತೂರು ಮಿಲಾದ್ ಸಮಿತಿ ಇದರ ಉಪಾಧ್ಯಕ್ಷರಾಗಿ, ಮುಸ್ಲಿಂ ಯುವಜನ ಪರಿಷತ್ ಇದರ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜಮುಖಿ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಪ್ರತಿ ವರ್ಷ ಆರೋಗ್ಯ ಶಿಬಿರಗಳಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸ್ಥಳೀಯ ಸರಕಾರಿ ಶಾಲೆಗಳಿಗೆ ಮೂಲಭೂತ ಅವಶ್ಯಕತೆಗಳಿಗೆ ಅನುಗುಣವಾಗಿ ಸಾಮಾಗ್ರಿಗಳನ್ನು ಒದಗಿಸುವ ಮೂಲಕ ಜನಾನುರಾಗಿಯಾಗಿದ್ದಾರೆ.
ಹನೀಫ್ ಬಗ್ಗುಮೂಲೆ ಅವರು ಜಿಲ್ಲಾ ಕಾಂಗ್ರೆಸ್ ಸೇವಾದಳದ ಕಾರ್ಯದರ್ಶಿಯಾಗಿ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿಯಾಗಿ, ವಿಟ್ಲ ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾಗಿ, ಕಬಕ ಸರಕಾರಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ, ಕಬಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಎಸ್ ಎಂ ಎ ಇದರ ಉಪಾಧ್ಯಕ್ಷರಾಗಿ, ಎಂಜೆಎಂ ಪ್ರಧಾನ ಕಾರ್ಯದರ್ಶಿಯಾಗಿ, ವಿ ಎಸ್ ಆರ್ ಆಂಗ್ಲ ಮಾಧ್ಯಮ ಶಾಲೆಯ ಕಾನೂನು ಸಲಹೆಗಾರರಾಗಿ, ಬಗ್ಗುಮೂಲೆ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥರಾಗಿ, ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.














0 comments:
Post a Comment