ವಗ್ಗ : ನೀರು ಕೇಳುವ ನೆಪದಲ್ಲಿ ಮನೆಯಾಕೆಯ ಕರಿಮಣಿ ಸರ ಎಗರಿಸಿದ ದುಷ್ಕರ್ಮಿ - Karavali Times ವಗ್ಗ : ನೀರು ಕೇಳುವ ನೆಪದಲ್ಲಿ ಮನೆಯಾಕೆಯ ಕರಿಮಣಿ ಸರ ಎಗರಿಸಿದ ದುಷ್ಕರ್ಮಿ - Karavali Times

728x90

2 February 2026

ವಗ್ಗ : ನೀರು ಕೇಳುವ ನೆಪದಲ್ಲಿ ಮನೆಯಾಕೆಯ ಕರಿಮಣಿ ಸರ ಎಗರಿಸಿದ ದುಷ್ಕರ್ಮಿ

ಬಂಟ್ವಾಳ, ಫೆಬ್ರವರಿ 02, 2026 (ಕರಾವಳಿ ಟೈಮ್ಸ್) : ನೀರು ಕೇಳುವ ನೆಪದಲ್ಲಿ ಮನೆಗೆ ಅಕ್ರಮ ಪ್ರವೇಶಗೈದ ವ್ಯಕ್ತಿಯೋರ್ವ ಮಹಿಳೆಯ ಕರಿಮಣಿ ಸರ ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾದ ಘಟನೆ ಕಾವಳಪಡೂರು ಗ್ರಾಮದ ವಗ್ಗ ಎಂಬಲ್ಲಿ ಫೆಬ್ರವರಿ 1 ರಂದು ಸಂಭವಿಸಿದೆ. 

ಇಲ್ಲಿನ ನಿವಾಸಿ ಗಣೇಶ್ ಅವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಫೆಬ್ರವರಿ 1 ರಂದು ಸಂಜೆ 5.15ರ ವೇಳೆಗೆ ಇವರ ತಾಯಿ ಒಬ್ಬರೇ ಮನೆಯಲ್ಲಿ ಬೀಡಿ ಕಟ್ಟುತ್ತಿದ್ದ ವೇಳೆ ಅಕ್ರಮ ಪ್ರವೇಶ ಮಾಡಿದ ಅಪರಿಚಿತ ವ್ಯಕ್ತಿಯೋರ್ವ ಗಣೇಶ್ ಮನೆಯಲ್ಲಿ ಇಲ್ಲವೇ ಎಂದು ಕೇಳಿ ನಂತರ ಪಕ್ಕದ ಮನೆಯ ವಾಸು ಮೂಲ್ಯ ಅವರ ಹೆಸರು ಹೇಳಿ, ಪರಿಚಯಸ್ಥನಂತೆ ವರ್ತಿಸಿ, ಕುಡಿಯಲು ನೀರು ಕೇಳಿದ್ದು ತಾಯಿಯು ಅಲ್ಲೇ ಇದ್ದ ಬಾಟಿಲಿಯ ನೀರನ್ನು ಕುಡಿಯಲು ಕೊಟ್ಟಾಗ, ಅದು ಬೇಡ ನನಗೆ ಬಿಸಿ ನೀರು ಕೊಡಿ ಎಂದು ಕೇಳಿದ್ದಾನೆ. ಈ ಸಂದರ್ಭ ತಾಯಿ ನೀರು ತರಲೆಂದು ಅಡುಗೆ ಕೋಣೆ ಕಡೆಗೆ ಹೋದಾಗ ಅಪರಿಚಿತ ವ್ಯಕ್ತಿ ತಾಯಿಯವರನ್ನು ಹಿಂಬಾಲಿಸಿ ಊಟದ ಕೋಣೆಯಲ್ಲಿ ಅನಾರೋಗ್ಯಪೀಡಿತ ತಾಯಿಯವರನ್ನು ಹಿಡಿದು ಬಾಯಿಗೆ ಬಟ್ಟೆ ತುರುಕಿ, ಕೈಕಾಲುಗಳನ್ನು ಬಟ್ಟೆಯಿಂದ ಕಟ್ಟಿ ಹಾಕಿ, ನೆಲಕ್ಕೆ ಬೀಳಿಸಿ ತಾಯಿಯವರ ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ತಲೆಯ ಮೇಲಿನಿಂದ ತೆಗೆದು ಕಸಿದುಕೊಂಡಿದ್ದಾನೆ. ಬಳಿಕ ಮನೆಯ ಜಗಲಿಯಲ್ಲಿಟ್ಟಿದ್ದ ತಾಯಿಯ ನೋಕಿಯಾ ಕೀಪ್ಯಾಡ್ ಮೊಬೈಲ್ ಫೆÇೀನನ್ನು ಕಳವು ಮಾಡಿಕೊಂಡು ಹೋಗಿರುತ್ತಾನೆ. 

ಅಪರಿಚಿತ ವ್ಯಕ್ತಿ ಲಪಟಾಯಿಸಿದ 20 ಗ್ರಾಂ ಚಿನ್ನದ ಕರಿಮಣಿ ಸರದ ಮೌಲ್ಯ 1.90 ಸಾವಿರ ರೂಪಾಯಿಗಳು ಹಾಗೂ ನೋಕಿಯಾ ಕೀಪ್ಯಾಡ್ ಮೊಬೈಲ್ ಸೆಟ್ ಮೌಲ್ಯ 500/0 ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಗಣೇಶ್ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ವಗ್ಗ : ನೀರು ಕೇಳುವ ನೆಪದಲ್ಲಿ ಮನೆಯಾಕೆಯ ಕರಿಮಣಿ ಸರ ಎಗರಿಸಿದ ದುಷ್ಕರ್ಮಿ Rating: 5 Reviewed By: karavali Times
Scroll to Top