ಮಂಗಳೂರು, ಫೆಬ್ರವರಿ 23, 2026 (ಕರಾವಳಿ ಟೈಮ್ಸ್) : ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ 2026-29ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಚೆಯರ್ ಮೆನ್ ಸಿ ಎ ಶಾಂತಾರಾಮ ಶೆಟ್ಟಿ ನೇತೃತ್ವದ ತಂಡ ಎಲ್ಲ 10 ಸ್ಥಾನ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದರು. ಫೆ 23 ರಂದು ಸೋಮವಾರ ರೆಡ್ ಕ್ರಾಸ್ ಶತಮಾನೋತ್ಸವ ಕಟ್ಟಡದಲ್ಲಿ ಮತ ಎಣಿಕೆ ನಡೆಯಿತು.
ಸಿಎ ಶಾಂತಾರಾಮ ಶೆಟ್ಟಿ - 1005, ಡಾ. ಸುಮನ ಬಿ. - 876,
ಡಾ. ಸತೀಶ್ ರಾವ್ - 870, ಡಾ. ಬಿ. ಸಚ್ಚಿದಾನಂದ ರೈ - 868, ರಾಘವೇಂದ್ರ ರಾವ್ - 844,
ಪುಷ್ಪರಾಜ್ ಜೈನ್ - 835, ಪಿ.ಬಿ. ಹರಿಪ್ರಸಾದ್ ರೈ - 810,
ಯತೀಶ್ ಬೈಕಂಪಾಡಿ - 797, ಸಚೇತ್ ಸುವರ್ಣ - 762, ಗುರುದತ್ ಎಂ. ನಾಯಕ್ - 762 ಮತ ಗಳಿಸಿ ಜಯಶಾಲಿಗಳಾದರು.
ಆಡಳಿತ ಮಂಡಳಿಯ 10 ಸದಸ್ಯ ಸ್ಥಾನಕ್ಕೆ ಫೆ 22 ರಂದು ಚುನಾವಣೆ ನಡೆದಿತ್ತು. 3,654 ಮತದಾರರ ಪೈಕಿ 1388 ಮಂದಿ ಮತ ಚಲಾಯಿಸಿದ್ದರು. 24 ಮತ ಅಸಿಂಧುವಾಗಿತ್ತು. ಚುನಾವಣಾಧಿಕಾರಿಯಾಗಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಮಹೇಶ್ ಕುಮಾರ್ ಯು. ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ನಿವೃತ್ತ ಚುನಾವಣಾ ಉಪ ತಹಶೀಲ್ದಾರ್ ರಾಮಚಂದ್ರ ಬಿ. ಕಾರ್ಯನಿರ್ವಹಿಸಿದ್ದರು.















0 comments:
Post a Comment