ಬಂಟ್ವಾಳ, ಫೆಬ್ರವರಿ 23, 2026 (ಕರಾವಳಿ ಟೈಮ್ಸ್) : ನಿಗೂಢವಾಗಿ ನಾಪತ್ತೆಯಾಗಿದ್ದ ವಿಟ್ಲ ಪೆÇಲೀಸ್ ಠಾಣಾ ವ್ಯಾಪ್ತಿಯ ಗುರುಕುಲವೊಂದರಲ್ಲಿ ಸಂಸ್ಕøತ ಶಿಕ್ಷಣ ಪಡೆಯುತ್ತಿದ್ದ ಅಪ್ರಾಪ್ತ ಬಾಲಕಿಯ ಮೃತದೇಹ ಫೆ 23 ರಂದು ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ.
ಬಾಲಕಿಯು ಗುರುಕುಲವೊಂದರಲ್ಲಿ ಸಂಸ್ಕ್ರತ ಶಿಕ್ಷಣ ಪಡೆಯುತ್ತಿದ್ದು, ಫೆ 22 ರಂದು ಸಂಜೆ, ಸದ್ರಿ ಶಾಲೆಯಲ್ಲಿ ಪತ್ರವೊಂದನ್ನು ಬರೆದಿಟ್ಟು ನಾಪತ್ತೆಯಾಗಿದ್ದಳು. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಫೆ 23 ರಂದು ಬೆಳಿಗ್ಗೆ ಸದ್ರಿ ಬಾಲಕಿಯ ಮೃತದೇಹವು ಆಕೆ ಕಲಿಯುತ್ತಿದ್ದ ಗುರುಕುಲದ ಆವರಣದಲ್ಲಿರುವ ಕೆರೆಯಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಿಸಿಕೊಂಡಿರಿವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸದ್ರಿ ಬಾಲಕಿಯು ಬೆಂಗಳೂರು ಮೂಲದವರಾಗಿದ್ದು, ಕಳೆದ 5 ವರ್ಷಗಳಿಂದ ಗುರುಕುಲದಲ್ಲಿ ವಿಧ್ಯಾಭ್ಯಾಸ ಮಾಡಿಕೊಂಡಿದ್ದಳು. ಆಕೆಯ ಹೆತ್ತವರು ಪ್ರಸ್ತುತ ಆಕೆ ಕಲಿಯುತ್ತಿರುವ ಗುರುಕುಲದಲ್ಲಿ ಕೆಲಸ ಮಾಡಿಕೊಂಡಿದ್ದು, ಸದ್ರಿ ವಿದ್ಯಾ ಸಂಸ್ಥೆಯ ವಠಾರದಲ್ಲೇ ವಾಸವಾಗಿದ್ದಾರೆ. ಘಟನೆಗೆ ನಿಖರ ಕಾರಣ ಪೊಲೀಸ್ ತನಿಖೆಯ ಬಳಿಕವಷ್ಟೆ ತಿಳಿದು ಬರಬೇಕಿದೆ.















0 comments:
Post a Comment