ಬೆಳ್ತಂಗಡಿ, ಫೆಬ್ರವರಿ 12, 2026 (ಕರಾವಳಿ ಟೈಮ್ಸ್) : ತಾಲೂಕಿನ ಬಳಂಜ ಗ್ರಾಮದ ಪರಾರಿ ಎಂಬಲ್ಲಿ ಬಳಂಜ- ನಾಲ್ಕೂರು ಸಾರ್ವಜನಿ£ಕ ರಸ್ತೆಯಲ್ಲಿ ಬಳಂಜ ಕಡೆಯಿಂದ ಕೆಎ70 2596 ನೋಂದಣಿ ಸಂಖ್ಯೆಯ ಟಿಪ್ಪರ್ ಲಾರಿ ಮತ್ತು ಕೆಎ21 ಎ8776 ನೋಂದಣಿ ಸಂಖ್ಯೆಯ ಪಿಕಪ್ ವಾಹನದಲ್ಲಿ ಶಾಲಾ ಮಕ್ಕಳನ್ನು ತುಂಬಿಸಿಕೊಂಡು ನಾಲ್ಕೂರು ಎಂಬಲ್ಲಿಯ ನರ್ಸರಿಗೆ ಅಧ್ಯಯನಕ್ಕೆ ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಬಳಂಜ ಗ್ರಾಮದ ನಿವಾಸಿ ಧರಣೇಂದ್ರ ಎಂಬವರು ನೀಡಿದ ದೂರಿನಂತೆ ವೇಣೂರು ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 14/2026 ಕಲಂ 281 ಬಿ ಎನ್ ಎಸ್ ಮತ್ತು ಕಲಂ 66 ಜೊತೆಗೆ 192(ಎ) ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋದ ಶಾಲೆಯವರ ಬಗ್ಗೆ ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಎಸ್ಪಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
12 February 2026
- Blogger Comments
- Facebook Comments
Subscribe to:
Post Comments (Atom)













0 comments:
Post a Comment