ಇನ್ಸೂರೆನ್ಸ್ ಕ್ಯಾನ್ಸಲ್ ಮಾಡುವುದಾಗಿ ಪುತ್ತೂರು ವ್ಯಕ್ತಿಯಿಂದ ಒಟಿಪಿ ಪಡೆದು ಲಕ್ಷಾಂತರ ರೂಪಾಯಿ ವಂಚನೆ : ಮಹಾರಾಷ್ಟ್ರ ಮೂಲದ ವ್ಯಕ್ತಿಯ ಬಂಧನ - Karavali Times ಇನ್ಸೂರೆನ್ಸ್ ಕ್ಯಾನ್ಸಲ್ ಮಾಡುವುದಾಗಿ ಪುತ್ತೂರು ವ್ಯಕ್ತಿಯಿಂದ ಒಟಿಪಿ ಪಡೆದು ಲಕ್ಷಾಂತರ ರೂಪಾಯಿ ವಂಚನೆ : ಮಹಾರಾಷ್ಟ್ರ ಮೂಲದ ವ್ಯಕ್ತಿಯ ಬಂಧನ - Karavali Times

728x90

12 February 2026

ಇನ್ಸೂರೆನ್ಸ್ ಕ್ಯಾನ್ಸಲ್ ಮಾಡುವುದಾಗಿ ಪುತ್ತೂರು ವ್ಯಕ್ತಿಯಿಂದ ಒಟಿಪಿ ಪಡೆದು ಲಕ್ಷಾಂತರ ರೂಪಾಯಿ ವಂಚನೆ : ಮಹಾರಾಷ್ಟ್ರ ಮೂಲದ ವ್ಯಕ್ತಿಯ ಬಂಧನ

ಮಂಗಳೂರು, ಫೆಬ್ರವರಿ 12, 2026 (ಕರಾವಳಿ ಟೈಮ್ಸ್) : ಪುತ್ತೂರು ಯಶೋಧರ ಎಂಬವರಿಗೆ ಇನ್ಸೂರೆನ್ಸ್ ಕ್ಯಾನ್ಸಲ್ ಮಾಡಲು ಕ್ರೆಡಿಟ್ ನಂಬರ್ ಹಾಗೂ ಒಟಿಪಿ ಪಡೆದು ಲಕ್ಷಾಂತರ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿದ ಆರೋಪಿಯನ್ನು ಜಿಲ್ಲಾ ಸೈಬರ್ ಅಪರಾಧ ಠಾಣಾ ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ಮೂಲತಃ ಮಹಾರಾಷ್ಟ್ರ ಮೂಲದ, ಪ್ರಸ್ತುತ ಮಂಡ್ಯ ಕೃಷ್ಣರಾಜ ಪೇಟೆಯಲ್ಲಿ ವಾಸವಾಗಿರುವ ಅವಿನಾಶ್ ರಮೇಶ್ ಗೌಡ (24) ಎಂದು ಹೆಸರಿಸಲಾಗಿದೆ. 

ಆರೋಪಿ ಪುತ್ತೂರು ನಿವಾಸಿ ಯಶೋಧರ ಅವರಿಗೆ ವಿವಿಧ ಮೊಬೈಲ್ ಸಂಖ್ಯೆಗಳಿಂದ ಕರೆ ಮಾಡಿ, ತಾನು ಇನ್ಸೂರೆನ್ಸ್ ಕಂಪೆನಿಯಿಂದ ಕರೆ ಮಾಡುವುದಾಗಿ ತಿಳಿಸಿ, ಇನ್ಸೂರೆನ್ಸ್ ಮಾಡಿಸಿಕೊಡುವುದಾಗಿ ಹಾಗೂ ಆ ಬಗ್ಗೆ ಹಣ ಪಾವತಿಸುವಂತೆ ತಿಳಿಸಿರುತ್ತಾನೆ. ಈ ಬಗ್ಗೆ ಯಶೋಧರ ಅವರು ನಿರಾಕರಿಸಿರುತ್ತಾರೆ. ಬಳಿಕ ಆರೊಪಿಯು ಇನ್ಸುರೆನ್ಸ್ ಕ್ಯಾನ್ಸಲ್ ಮಾಡುವುದಾಗಿ ತಿಳಿಸಿ, ಯಶೋಧರ ಅವರ ಕ್ರೆಡಿಟ್ ಕಾರ್ಡ್ ನಂಬರ್ ಹಾಗೂ ಒಟಿಪಿ ಪಡೆದು, 2,37,036/- ರೂಪಾಯಿ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿರುತ್ತಾನೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 52/2025, ಕಲಂ 66(ಡಿ) ಐಟಿ ಆಕ್ಟ್ ಹಾಗೂ 318(4), 319(2) ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಸೈಬರ್ ಅಪರಾಧ ಠಾಣಾ ಪೊಲೀಸರು ಆರೋಪಿಯನ್ನು ಫೆ 11 ರಂದು ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ. ಬಂಧಿತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಇನ್ಸೂರೆನ್ಸ್ ಕ್ಯಾನ್ಸಲ್ ಮಾಡುವುದಾಗಿ ಪುತ್ತೂರು ವ್ಯಕ್ತಿಯಿಂದ ಒಟಿಪಿ ಪಡೆದು ಲಕ್ಷಾಂತರ ರೂಪಾಯಿ ವಂಚನೆ : ಮಹಾರಾಷ್ಟ್ರ ಮೂಲದ ವ್ಯಕ್ತಿಯ ಬಂಧನ Rating: 5 Reviewed By: karavali Times
Scroll to Top