ಬಂಟ್ವಾಳ, ಫೆಬ್ರವರಿ 23, 2026 (ಕರಾವಳಿ ಟೈಮ್ಸ್) : ತೋಟದ ಕಾರ್ಮಿಕ ಕೆಲಸದ ಮಧ್ಯೆ ಉಪಹಾರ ಸೇವಿಸಿ ಕುಳಿತಿದ್ದ ವೇಳೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದು ಮೃತಪಟ್ಟ ಘಟನೆ ಕುಕ್ಕಿಪ್ಪಾಡಿ ಗ್ರಾಮದ ಅರಮನೆ ಎಂಬಲ್ಲಿ ಫೆ 22 ರಂದು ಬೆಳಿಗ್ಗೆ ಸಂಭವಿಸಿದೆ.
ಮೃತ ಕಾರ್ಮಿಕನನ್ನು ಪ್ರಶಾಂತ್ ಎಂದು ಹೆಸರಿಸಲಾಗಿದೆ. ಇವರು ಅರಮನೆ ನಿವಾಸಿ ರವೀಂದ್ರ ಎನ್ ಎಂಬವರ ತೋಟದಲ್ಲಿ ಕಲ್ಕುರಿ ನಿವಾಸಿ ಸದಾನಂದ ಎಂಬವರ ಜೊತೆ ಸೇರಿ ಕೆಲಸಕ್ಕೆಂದು ಹೋಗಿದ್ದು, ಫೆ 22 ರಂದು ಬೆಳಿಗ್ಗೆ ಕೆಲಸ ಮಾಡಿ ಉಪಾಹಾರ ಸೇವಿಸಿ ಕುಳಿತಿದ್ದಾಗ ಸುಮಾರು 10.45ರ ವೇಳೆಗೆ ಕುಳಿತಲ್ಲಿಂದ ಒಮ್ಮೆಲೆ ಎದೆನೋವೆಂದು ಹಿಂದಕ್ಕೆ ಬಿದ್ದಿದ್ದಾರೆ. ತಕ್ಷಣ ಜೊತೆಯಲ್ಲಿದ್ದ ಸದಾನಂದ ಅವರು ಇವರನ್ನು ಉಪಚರಿಸಿ ಬಳಿಕ ತೋಟದ ಮಾಲಕ ರವೀಂದ್ರ ಅವರ ಕಾರಿನಲ್ಲಿ ಸಿದ್ದಕಟ್ಟೆ ಅನಂತ ಪದ್ಮನಾಭ ಆಸ್ಪತ್ರೆಗೆ ಸಾಗಿಸಿದ ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೂಡಬಿದ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಪ್ರಶಾಂತ್ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರಣಯ್ ಕುಮಾರ್ ಎಂಬವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.















0 comments:
Post a Comment