8ನೇ ಕೆಟಿಎ ಕಪ್ ರಾಜ್ಯ ಟ್ವೆಕಾಂಡೋ ಚಾಂಪಿಯನ್ ಶಿಪ್ : ದಕ್ಷಿಣ ಕನ್ನಡ ಜಿಲ್ಲೆಗೆ 2 ಚಿನ್ನ, 2 ಪದಕಗಳು - Karavali Times 8ನೇ ಕೆಟಿಎ ಕಪ್ ರಾಜ್ಯ ಟ್ವೆಕಾಂಡೋ ಚಾಂಪಿಯನ್ ಶಿಪ್ : ದಕ್ಷಿಣ ಕನ್ನಡ ಜಿಲ್ಲೆಗೆ 2 ಚಿನ್ನ, 2 ಪದಕಗಳು - Karavali Times

728x90

2 February 2026

8ನೇ ಕೆಟಿಎ ಕಪ್ ರಾಜ್ಯ ಟ್ವೆಕಾಂಡೋ ಚಾಂಪಿಯನ್ ಶಿಪ್ : ದಕ್ಷಿಣ ಕನ್ನಡ ಜಿಲ್ಲೆಗೆ 2 ಚಿನ್ನ, 2 ಪದಕಗಳು

ಮಂಗಳೂರು, ಫೆಬ್ರವರಿ 02, 2026 (ಕರಾವಳಿ ಟೈಮ್ಸ್) : ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಟ್ವೆಕಾಂಡೋ ಚಾಂಪಿಯನ್‍ಶಿಪ್-2026 (8ನೇ ಕೆಟಿಎ ಕಪ್) ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಟ್ವೆಕಾಂಡೋ ಕ್ರೀಡಾಪಟುಗಳು 2 ಚಿನ್ನ ಹಾಗೂ 2 ಬೆಳ್ಳಿ ಪದಕಗಳನ್ನು ಪಡೆದು ಸಾಧನೆ ಮೆರೆದಿದ್ದಾರೆ. 

12 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ರಫಾನ್ ರಹಮತುಲ್ಲಾ ಅಹ್ಮದ್ ಸುರತ್ಕಲ್ ಹಾಗೂ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ವಿಷ್ಣು ಇಡ್ಯಾ-ಸುರತ್ಕಲ್ ಅವರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ರಫಾನ್ ರಹ್ಮತುಲ್ಲಾ ಅಹ್ಮದ್ ಅವರು ರಹಮತುಲ್ಲಾ ಅಹ್ಮದ್ ಹಾಗೂ ಫಾತಿಮಾ ಫರ್ಝಾನಾ ದಂಪತಿಯ ಪುತ್ರ, ವಿಷ್ಣು ಅವರು ರವಿ ಹಾಗೂ ಜ್ಯೋತಿ ದಂಪತಿಯ ಪುತ್ರ. 

15 ವರ್ಷ ಮೇಲ್ಪಟ್ಟ ಬಾಲಕರ ವಿಭಾಗದಲ್ಲಿ ಆಯಾನ್ ಅಹ್ಮದ್ ಮಂಗಳೂರು ಹಾಗೂ 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಅವಂತಿಕಾ ಎಸ್ ಕುಳಾಯಿ-ಸುರತ್ಕಲ್ ಅವರು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಅಯಾನ್ ಅಹ್ಮದ್ ಅವರು ನಜೀಮ್ ಅಹ್ಮದ್-ಸುನೇನಾ ನಜೀಮ್ ಅವರ ಪುತ್ರ. ಅವಂತಿಕಾ ಅವರು ವಿನೋದ್ ಎಸ್-ಸುಮಾ ಕೆ ದಂಪತಿಯ ಪುತ್ರಿಯಾಗಿದ್ದಾಳೆ. 

ಪ್ರತಿಷ್ಠಿತ ಚಾಂಪಿಯನ್‍ಶಿಪ್ ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿಭಾವಂತ ಯುವ ಕ್ರೀಡಾಪಟುಗಳು ಭಾಗವಹಿಸಿ, ವಿವಿಧ ಜಿ4 ವಿಭಾಗಗಳಲ್ಲಿ ಸೆಣಸಾಟ ನಡೆಸಿದ್ದರು. ಜಿಲ್ಲೆಯ ಕ್ರೀಡಾಪಟು ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಟ್ವೇಕಾಂಡೋ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ತರಬೇತುದಾರ ಇಶಾಕ್ ಇಸ್ಮಾಯಿಲ್ ನಂದಾವರ ತರಬೇತಿ ನೀಡಿದ್ದು, ಅವರ ಪತ್ನಿ ದಕ್ಷಿಣ ಕನ್ನಡ ಟ್ವೆಕಾಂಡೋ ತಂಡದ ಫಿಸಿಯೋಥೆರಪಿಸ್ಟ್ ಶ್ರೀಮತಿ ಡಾ ಫಾತಿಮಾ ಭಾಷಿಯಾ (ಪಿಟಿ) ದೈಹಿಕ ಬೆಂಬಲ ನೀಡಿದ್ದಾರೆ. ಸುರತ್ಕಲ್ ಎಕ್ಸ್ ಟ್ರೀಮ್ ಫಿಟ್ ಅಂಡ್ ಫೈಟ್ ಕ್ಲಬ್ ಸಂಸ್ಥೆ ಇವರಿಗೆ ತರಬೇತಿ ಬೆಂಬಲ ನೀಡಿದೆ.

  • Blogger Comments
  • Facebook Comments

0 comments:

Post a Comment

Item Reviewed: 8ನೇ ಕೆಟಿಎ ಕಪ್ ರಾಜ್ಯ ಟ್ವೆಕಾಂಡೋ ಚಾಂಪಿಯನ್ ಶಿಪ್ : ದಕ್ಷಿಣ ಕನ್ನಡ ಜಿಲ್ಲೆಗೆ 2 ಚಿನ್ನ, 2 ಪದಕಗಳು Rating: 5 Reviewed By: karavali Times
Scroll to Top