ಕಲ್ಲಾಜೆ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ : ಸುಬ್ರಹ್ಮಣ್ಯ ಪೊಲೀಸರ ದಾಳಿ, ಲಕ್ಷಾಂತರ ಮೌಲ್ಯದ ಸೊತ್ತುಗಳ ವಶ - Karavali Times ಕಲ್ಲಾಜೆ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ : ಸುಬ್ರಹ್ಮಣ್ಯ ಪೊಲೀಸರ ದಾಳಿ, ಲಕ್ಷಾಂತರ ಮೌಲ್ಯದ ಸೊತ್ತುಗಳ ವಶ - Karavali Times

728x90

18 February 2026

ಕಲ್ಲಾಜೆ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ : ಸುಬ್ರಹ್ಮಣ್ಯ ಪೊಲೀಸರ ದಾಳಿ, ಲಕ್ಷಾಂತರ ಮೌಲ್ಯದ ಸೊತ್ತುಗಳ ವಶ

ಕಡಬ, ಫೆಬ್ರವರಿ 19, 2026 (ಕರಾವಳಿ ಟೈಮ್ಸ್) : ತಾಲೂಕಿನ ಐನೆಕಿದು ಗ್ರಾಮದ ಕಲ್ಲಾಜೆ ಎಂಬಲ್ಲಿನ ಹೊಳೆಯಲ್ಲಿ ಅಕ್ರಮವಾಗ ಹಿಟಾಚಿ ಬಳಸಿ ಮರಳುಗಾರಿಕೆ ನಡೆಸುತ್ತಿದ್ದ ಪ್ರಕರಣವನ್ನು ಸುಬ್ರಹ್ಮಣ್ಯ ಪೊಲೀಸರು ಫೆ 16 ರಂದು ಬೇಧಿಸಿದ್ದಾರೆ. 

ಸುಬ್ರಹ್ಮಣ್ಯ ಪೊಲೀಸ್ ಠಾಣಾ ಪಿಎಸ್ಸೈ ಆಂಜನೇಯ ರೆಡ್ಡಿ ನೇತೃತ್ವದ ಪೊಲೀಸರು ಈ ದಾಳಿ ಸಂಘಟಿಸಿದ್ದು, ಪೊಲೀಸ್ ದಾಳಿ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಕೃತ್ಯಕ್ಕೆ ಬಳಸುತ್ತಿದ್ದ ವಾಹನಗಳ ಸಹಿತ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ಸ್ಥಳದಲ್ಲಿದ್ದ ಟಾಟಾ ಹಿಟಾಚಿ, ಕೆಎ21 ಬಿ3929 ನೋಂದಣಿ ಸಂಖ್ಯೆಯ ಈಚರ್ ಟಿಪ್ಪರ್ ಹಾಗೂ ಕೆಎ20 ಡಿ7639 ನೋಂದಣಿ ಸಂಖ್ಯೆಯ ಟಿಪ್ಪರ್ ಲಾರಿಗಳ ಸಹಿತ ಸುಮಾರು 50 ಸಾವಿರ ರೂಪಾಯಿ ಮೌಲ್ಯದ 50 ಟನ್ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಾಹನಗಳ ಮೌಲ್ಯ 20 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕಲ್ಲಾಜೆ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ : ಸುಬ್ರಹ್ಮಣ್ಯ ಪೊಲೀಸರ ದಾಳಿ, ಲಕ್ಷಾಂತರ ಮೌಲ್ಯದ ಸೊತ್ತುಗಳ ವಶ Rating: 5 Reviewed By: karavali Times
Scroll to Top