ಮಂಗಳೂರು, ಮಾರ್ಚ್ 19, ಮಾರ್ಚ್, 2026 (ಕರಾವಳಿ ಟೈಮ್ಸ್) : ಮಾದಕ ವಸ್ತು ಎಂಡಿಎಂಎ ಸೇವಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ತಲಪಾಡಿ ಕೆ ಸಿ ರೋಡ್ ಬಳಿ ಮಂಗಳವಾರ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನಿಶಾದ್ ಬಿನ್ ಅಬ್ದುಲ್ ಕರೀಂ ಹಾಗೂ ಅಹ್ಮದ್ ಇಮ್ರಾನ್ ಬಿನ್ ಅಬ್ದುಲ್ ಹಕೀಂ ಎಂದು ಹೆಸರಿಸಲಾಗಿದೆ. ಅಬಕಾರಿ ಉಪ ಅಧೀಕ್ಷಕಿ ಗಾಯತ್ರಿ ಸಿ ಎಚ್ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ದತ್ತಗುರು ಹಾಗೂ ಉಪ ನಿರೀಕ್ಷಕ ಹರೀಶ್ ಅವರು ಈ ದಾಳಿ ಸಂಘಟಿಸಿದ್ದಾರೆ.












0 comments:
Post a Comment