ಸಜಿಪಮಾಗಣೆಯ ನಾಲ್ಕೈತ್ತಾಯ ದೈವದ ಭಂಡಾರ ನಂದಾವರ ಮಸೀದಿ ಭೇಟಿಯ ವೀಡಿಯೋ ಸಕತ್ ವೈರಲ್ : ತುಳುನಾಡಿನ ಧಾರ್ಮಿಕ, ಮತೀಯ ಸೌಹಾರ್ದತೆ ಅಳಿಸಲಾಗದ್ದು ಎಂದ ನೆಟ್ಟಿಗರು - Karavali Times ಸಜಿಪಮಾಗಣೆಯ ನಾಲ್ಕೈತ್ತಾಯ ದೈವದ ಭಂಡಾರ ನಂದಾವರ ಮಸೀದಿ ಭೇಟಿಯ ವೀಡಿಯೋ ಸಕತ್ ವೈರಲ್ : ತುಳುನಾಡಿನ ಧಾರ್ಮಿಕ, ಮತೀಯ ಸೌಹಾರ್ದತೆ ಅಳಿಸಲಾಗದ್ದು ಎಂದ ನೆಟ್ಟಿಗರು - Karavali Times

728x90

18 March 2026

ಸಜಿಪಮಾಗಣೆಯ ನಾಲ್ಕೈತ್ತಾಯ ದೈವದ ಭಂಡಾರ ನಂದಾವರ ಮಸೀದಿ ಭೇಟಿಯ ವೀಡಿಯೋ ಸಕತ್ ವೈರಲ್ : ತುಳುನಾಡಿನ ಧಾರ್ಮಿಕ, ಮತೀಯ ಸೌಹಾರ್ದತೆ ಅಳಿಸಲಾಗದ್ದು ಎಂದ ನೆಟ್ಟಿಗರು

ಬಂಟ್ವಾಳ, ಮಾರ್ಚ್ 17, 2026 (ಕರಾವಳಿ ಟೈಮ್ಸ್) : ತುಳುನಾಡಿನ ಧಾರ್ಮಿಕ ಹಾಗೂ ಮತೀಯ ಸೌಹಾರ್ದತೆ ಎಂಬುದು ಅದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವಂತದ್ದು. ಬದಲಾದ ಕಾಲಘಟ್ಟದಲ್ಲಿ ಕೋಮುವಾದಿ, ಮತೀಯವಾದಿಗಳೆನಿಸಿಕೊಂಡವರು ಸಮಾಜದಲ್ಲಿ ಎಷ್ಟೆ ವಿಷ ಬೀಜಿ ಬಿತ್ತಿ ವಿಭಜಿಸಲು ಪ್ರಯತ್ನಿಸಿದರೂ ಈ ಸೌಹಾರ್ದತೆಯನ್ನು ಇಲ್ಲವಾಗಿಸಲು ಸಾಧ್ಯವಾಗಿಲ್ಲ. ಇದಕ್ಕೆ ಸ್ಪಷ್ಟ ಉದಾಹಣೆಯೊಂದು ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ನಂದಾವರದಲ್ಲಿ ಇಂದಿಗೂ ನಡೆದುಕೊಂಡು ಬರುತ್ತಿದೆ. 

ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಸಜಿಪ ಮಾಗಣೆಯ ನಾಲ್ಕೈತ್ತಾಯ ದೈವದ ಮೆಚ್ಚಿ ಪ್ರಯುಕ್ತ ದೈವದ ಭಂಡಾರವು ನಂದಾವರ ಜುಮಾ ಮಸೀದಿಗೆ ಬಂದು ಮಸೀದಿಯ 3 ಮೆಟ್ಟುಲು ಏರಿ ಅಲ್ಲಿ ಸೀಯಾಳ ಇಟ್ಟು ದೈವ ನುಡಿ ಕೊಟ್ಟು ಬಳಿಕ ಮಂಜದಗೋಳಿಯಲ್ಲಿ ನೇಮೋತ್ಸವ ನಡೆಯುವುದು ವಾಡಿಕೆ. ಈ ಸಂಪ್ರದಾಯ ಈ ಬಾರಿಯೂ ಸೋಮವಾರ ನಡೆದಿದೆ. ದೈವದ ಭಂಡಾರ ಹೊತ್ತ ಮೆರವಣಿಗೆ ರಾಜ ರಸ್ತೆಯಲ್ಲಿ ಸಾಗಿ ಬಂದು ನಂದಾವರ ಮಸೀದಿಗೆ ಬಂದು ಅಲ್ಲಿನ ಮೂರು ಮೆಟ್ಟಿಲು ಏರಿ ಸಂಪ್ರಯದಾಯದಂತೆ ಸೀಯಾಳ ಇಟ್ಟು ವಿಧಿ ವಿಧಾನ ನೆರವೇರಿಸಿ ಮರಳಿದೆ. ಊರಿನ ನೂರಾರು ಸಂಖ್ಯೆಯ ಹಿಂದೂ-ಮುಸ್ಲಿಂ ಸಮುದಾಯದ ಮಂದಿ ಈ ಸಂಪ್ರದಾಯಕ್ಕೆ ಸಾಕ್ಷಿಯಾಗಿದ್ದರು. 

ತುಳುನಾಡಿನ ಮಣ್ಣನಿನಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಾಮಾಜಿಕ, ಧಾರ್ಮಿಕ ಹಾಗೂ ಮತೀಯ ಸೌಹಾರ್ದತೆ ಇಲ್ಲಿನ ಮಣ್ಣಿನ ಗುಣ. ರಾಜಕೀಯ ಕಾರಣಗಳಿಗಾಗಿಯೋ ಅಥವಾ ಸ್ವಾರ್ಥ ಹಿತಾಸಕ್ತಿಗಾಗಿಯೋ ಯಾರೇ ಎಷ್ಟೆ ಹುಳಿ ಹಿಂಡಿದರೂ ಸಂಪ್ರದಾಯವನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ಅದು ಸಾಧ್ಯವಾಗುವುದೂ ಇಲ್ಲ. ಇದುವೆ ಇಲ್ಲಿನ ವಿಶೇಷತೆ. ಸಜಿಪ ಮಾಗಣೆಯ ದೈವದ ಭಂಡಾರ ನಂದಾವರದಂತಹ ಪ್ರಮುಖ ಮುಸ್ಲಿಂ ಬಾಹುಳ್ಯ ಇರುವ ಪ್ರದೇಶದ ಮಸೀದಿಗೆ ಸಾಗಿ ಬರುವ ಮತೀಯ ಸೌಹಾರ್ದತೆಯ ದೃಶ್ಯ ಇದೀಗ ಎಲ್ಲೆಡೆ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನ ಶಾಂತಿ-ಸೌಹಾರ್ದತೆ, ಮತೀಯ ಸಾಮರಸ್ಯದ ಬಗ್ಗೆ ನಿರಂತರ ಚರ್ಚೆ ನಡೆಸುವಂತಹ ಮಾತುಗಳು ಕೇಳಿ ಬರುತ್ತಿದೆ. 

  • Blogger Comments
  • Facebook Comments

1 comments:

  1. ಎಲ್ಲಾ ಓಕೆ.... ಹಿಂದಿನಿಂದ ಬಂದ ಸಂಪ್ರದಾಯವನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ ಅಂತನ್ನೋ ಮಾತನ್ನು ಒಪ್ಪೋಣ..... ಆದರೆ ನಂದಾವರದ
    ಮಸೀದಿ ನಿರ್ಮಾಣ ಆಗಿದ್ದು ಯಾವಾಗ? ಹಿಂದೆ ಆ ಜಾಗದಲ್ಲಿ ಏನಿತ್ತು? ನಂದಾವರ ಅರಸರ ಕಾಲದಲ್ಲಿ ಆ ಜಾಗದಲ್ಲಿ ಮಸೀದಿ ಇರಲಿಲ್ಲ.... ಆದರೆ ನಂದಾವರದ ದೈವ ಇತ್ತು ಅನ್ನೋದು ಕೂಡಾ ನಿಜ ಅಲ್ವಾ? ನಂದಾವರ ಹಳೆಯ ಕೋಟೆ ಇವತ್ತು ಏನಾಗಿದೆ... ಅದರ ಬಗ್ಗೆ ಯಾರಾದರೂ ಸಂಶೋಧನೆ ಮಾಡಿದ್ದಾರಾ?

    ReplyDelete

Item Reviewed: ಸಜಿಪಮಾಗಣೆಯ ನಾಲ್ಕೈತ್ತಾಯ ದೈವದ ಭಂಡಾರ ನಂದಾವರ ಮಸೀದಿ ಭೇಟಿಯ ವೀಡಿಯೋ ಸಕತ್ ವೈರಲ್ : ತುಳುನಾಡಿನ ಧಾರ್ಮಿಕ, ಮತೀಯ ಸೌಹಾರ್ದತೆ ಅಳಿಸಲಾಗದ್ದು ಎಂದ ನೆಟ್ಟಿಗರು Rating: 5 Reviewed By: karavali Times
Scroll to Top