ಉಳ್ಳಾಲ ಪೊಲೀಸರ ಕಾರ್ಯಾಚರಣೆ : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ, ಓರ್ವ ಪರಾರಿ - Karavali Times ಉಳ್ಳಾಲ ಪೊಲೀಸರ ಕಾರ್ಯಾಚರಣೆ : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ, ಓರ್ವ ಪರಾರಿ - Karavali Times

728x90

12 March 2026

ಉಳ್ಳಾಲ ಪೊಲೀಸರ ಕಾರ್ಯಾಚರಣೆ : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ, ಓರ್ವ ಪರಾರಿ

ಮಂಗಳೂರು, ಮಾರ್ಚ್ 12, ಮಾರ್ಚ್, 2026 (ಕರಾವಳಿ ಟೈಮ್ಸ್) : ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಳ್ಳಾಲ ಠಾಣಾ ಪಿಎಸ್ಸೈ ಸಂತೋಷ್ ಕುಮಾರ್ ಡಿ ಅವರ ನೇತೃತ್ವದ ಪೊಲೀಸರು ಇಬ್ಬರನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ ಉಳ್ಳಾಲ-ಕೋಟೆಕಾರು ಗ್ರಾಮದಲ್ಲಿ ಮಾ 12 ರಂದು ನಡೆದಿದೆ. 

ಬಂಧಿತ ಆರೋಪಿಗಳನ್ನು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳ, ಕೈಕಂಬ-ಕೋಡಿಬಳಿ ಬಾಬಾ ರೋಡ್ ನಿವಾಸಿ ಶೈಖ್ ಅಬ್ದುಲ್ ಎಂಬವರ ಪುತ್ರ ಶೇಖ್ ಅರ್ಬಾಝ್ (29) ಹಾಗೂ ಕಾಸರಗೋಡು-ಉಪ್ಪಳ ಮಣಿಮುಂಡ ನಿವಾಸಿ ಸಾದಿಕ್ ಆಲ್ವಿನ್ ಎಂಬವರ ಪುತ್ರ ರಶೀದ್ ಆಲ್ವಿನ್ (27) ಎಂದು ಹೆಸರಿಸಲಾಗಿದ್ದು, ಅಲ್ತಾಫ್ ಎಂಬಾತ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಗಳಿಂದ 51,500/- ರೂಪಾಯಿ ಮೌಲ್ಯದ ನಿಷೇಧಿತ ಮಾದಕ ವಸ್ತುವಾದ 1 ಕೆಜಿ 110 ಗ್ರಾಂ ಗಾಂಜಾ, 520/- ರೂಪಾಯಿ ನಗದು, ರೆಡ್ ಮಿ ಹಾಗೂ ವಿವೋ ಕಂಪೆನಿಯ 2 ಮೊಬೈಲ್ ಫೋನ್ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 49/2026ರಂತೆ ಎನ್.ಡಿ.ಪಿ.ಎಸ್. ಕಾಯ್ದೆ 1985 ರ ಕಲಂ 8(ಸಿ), 20(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಉಳ್ಳಾಲ ಪೊಲೀಸರ ಕಾರ್ಯಾಚರಣೆ : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ, ಓರ್ವ ಪರಾರಿ Rating: 5 Reviewed By: karavali Times
Scroll to Top