ನೂತನವಾಗಿ ಘೋಷಿಸಲಾಗಿರುವ ಸಜಿಪನಡು ಹಾಗೂ ಮಾಣಿ ಪೊಲೀಸ್ ಠಾಣೆಗಳಿಗೆ ವ್ಯಾಪ್ತಿ ಸಂಯೋಜಿಸಿ ಪೊಲೀಸ್ ಇಲಾಖೆಯಿಂದ ಸರಕಾರಕ್ಕೆ ಪ್ರಸ್ತಾವನೆ - Karavali Times ನೂತನವಾಗಿ ಘೋಷಿಸಲಾಗಿರುವ ಸಜಿಪನಡು ಹಾಗೂ ಮಾಣಿ ಪೊಲೀಸ್ ಠಾಣೆಗಳಿಗೆ ವ್ಯಾಪ್ತಿ ಸಂಯೋಜಿಸಿ ಪೊಲೀಸ್ ಇಲಾಖೆಯಿಂದ ಸರಕಾರಕ್ಕೆ ಪ್ರಸ್ತಾವನೆ - Karavali Times

728x90

6 March 2026

ನೂತನವಾಗಿ ಘೋಷಿಸಲಾಗಿರುವ ಸಜಿಪನಡು ಹಾಗೂ ಮಾಣಿ ಪೊಲೀಸ್ ಠಾಣೆಗಳಿಗೆ ವ್ಯಾಪ್ತಿ ಸಂಯೋಜಿಸಿ ಪೊಲೀಸ್ ಇಲಾಖೆಯಿಂದ ಸರಕಾರಕ್ಕೆ ಪ್ರಸ್ತಾವನೆ

ಬಂಟ್ವಾಳ, ಮಾರ್ಚ್ 06, 2026 (ಕರಾವಳಿ ಟೈಮ್ಸ್) : ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟಿನಲ್ಲಿ ರಾಜ್ಯದಲ್ಲಿ ಒಟ್ಟು 12 ಹೊಸ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ಘೋಷಣೆ ಮಾಡಿದ್ದಾರೆ. ಈ ಪೈಕಿ  ದಕ್ಷಿಣ ಕನ್ನಡ ಪೊಲೀಸ್ ವ್ಯಾಪ್ತಿಯ ಉಳ್ಳಾಲ ವಿಧಾನಸಭಾ ಕ್ಷೇತ್ರದ ಸಜಿಪನಡು ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಾಣಿಯಲ್ಲಿ ಎರಡು ನೂತನ ಪೊಲೀಸ್ ಠಾಣೆಗಳನ್ನು ಘೋಷಿಸಲಾಗಿದೆ. 

ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ 2 ಪೊಲೀಸ್ ಠಾಣೆಗಳ ವ್ಯಾಪ್ತಿ ಪ್ರದೇಶವನ್ನು ಸಂಯೋಜಿಸಿ ಪೊಲೀಸ್ ಇಲಾಖೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 

ಸಜಿಪನಡು ಪೊಲೀಸ್ ಠಾಣೆಯು ಮಂಚಿ, ಇರಾ, ಸಜಿಪನಡು, ಸಜಿಪಪಡು, ಚೇಳೂರು, ಬೋಳಂತೂರು, ವೀರಕಂಭ, ಕೊಳ್ನಾಡು, ಸಾಲೆತ್ತೂರು, ಸಜಿಪಮೂಡ ಹಾಗೂ ಸಜಿಪಮುನ್ನೂರು ವ್ಯಾಪ್ತಿಯನ್ನು ಒಳಗೊಂಡಿದೆ. 

ಮಾಣಿ ಪೊಲೀಸ್ ಠಾಣೆಯು ಶಂಭೂರು, ಬರಿಮಾರು, ಕಡೆಶೀವಾಲಯ, ನೆಟ್ಲಮಡ್ನೂರು, ಅನಂತಾಡಿ, ಇಡ್ಕಿದು, ಮಾಣಿ, ಪೆರಾಜೆ, ಬಾಳ್ತಿಲ, ಗೋಳ್ತಮಜಲು, ಕೊಡಿಪ್ಪಾಡಿ, ಕಬಕ, ಕೆದಿಲ ವ್ಯಾಪ್ತಿಯನ್ನು ಒಳಗೊಳ್ಳಲಿದೆ ಎಂದು ಜಿಲ್ಲಾ ಎಸ್ಪಿ ಅವರು ಮಾಹಿತಿ ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ನೂತನವಾಗಿ ಘೋಷಿಸಲಾಗಿರುವ ಸಜಿಪನಡು ಹಾಗೂ ಮಾಣಿ ಪೊಲೀಸ್ ಠಾಣೆಗಳಿಗೆ ವ್ಯಾಪ್ತಿ ಸಂಯೋಜಿಸಿ ಪೊಲೀಸ್ ಇಲಾಖೆಯಿಂದ ಸರಕಾರಕ್ಕೆ ಪ್ರಸ್ತಾವನೆ Rating: 5 Reviewed By: karavali Times
Scroll to Top