ಬಂಟ್ವಾಳ, ಮಾರ್ಚ್ 23, 2026 (ಕರಾವಳಿ ಟೈಮ್ಸ್) : ಅಮ್ಮುಂಜೆ ಪಂಚಾಯತ್ ಪಿಡಿಒ ಅವರ ಆಕ್ಟಿವಾ ಹೋಂಡಾ ವಾಹನವನ್ನು ಕಳ್ಳರು ಕಳವುಗೈದ ಘಟನೆ ಬಿ ಸಿ ರೋಡು ಸಮೀಪದ ಪರ್ಲಿಯಾ ಪಿಡಬ್ಲ್ಯುಡಿ ವಸತಿ ಗೃಹದಲ್ಲಿ ಮಾ 15 ರಂದು ಬೆಳಕಿಗೆ ಬಂದಿದೆ.
ಇಲ್ಲಿನ ವಸತಿ ಗೃಹದಲ್ಲಿ ವಾಸವಾಗಿರುವ ಅಮುಂಜೆ ಗ್ರಾಮ ಪಂಚಾಯತ್ ಪಿಡಿಒ ಆಗಿರುವ ನಯನ ಕುಮಾರಿ ಎನ್ (38) ಅವರ ಆಕ್ಟಿವಾ ಹೋಂಡಾ ಕಳವಾಗಿದ್ದು, ಇವರ ಕೆಎ70 ಜೆ0595 ನೋಂದಣಿ ಸಂಖ್ಯೆಯ ಹೋಂಡಾ ಆಕ್ಟೀವಾ ಮನೆಯ ಎದುರಿನ ವಸತಿ ಗೃಹದ ಶೆಡ್ಡಿನಲ್ಲಿ ನಿಲ್ಲಿಸುತ್ತಿದ್ದು, ಮಾ 12 ರಂದು ತಾಯಿ ಮನೆಗೆ ಹೋಗಿದ್ದು, ಮಾ 14 ರಂದು ಸಂಜೆ 5 ಗಂಟೆಗೆ ವಸತಿ ಗೃಹಕ್ಕೆ ಬಂದು ನೋಡಿದಾಗ ಹೋಂಡಾ ಆಕ್ಟೀವಾ ಅಲ್ಲೇ ಇತ್ತು. ಮಾರ್ಚ್ 15 ರಂದು ಬೆಳಿಗ್ಗೆ 8 ಗಂಟೆಗೆ ಕರ್ತವ್ಯಕ್ಕೆ ಹೊರಡುವ ಸಮಯ ನೋಡುವಾಗ ಹೋಂಡಾ ಆಕ್ಟೀವಾ ಇದ್ದ ಜಾಗದಲ್ಲಿ ಇಲ್ಲದೇ ಕಾಣೆಯಾಗಿದೆ. ಕಳವಾದ ಹೋಂಡಾ ಆಕ್ಟೀವಾ ಅಂದಾಜು ಮೌಲ್ಯ 50 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












0 comments:
Post a Comment