ಫರಂಗಿಪೇಟೆ : ಎಟಿಎಂ ಕಳವಿಗೆ ಯತ್ನಿಸಿ ಕಳ್ಳತನಕ್ಕೆ ಯತ್ನ - Karavali Times ಫರಂಗಿಪೇಟೆ : ಎಟಿಎಂ ಕಳವಿಗೆ ಯತ್ನಿಸಿ ಕಳ್ಳತನಕ್ಕೆ ಯತ್ನ - Karavali Times

728x90

31 March 2026

ಫರಂಗಿಪೇಟೆ : ಎಟಿಎಂ ಕಳವಿಗೆ ಯತ್ನಿಸಿ ಕಳ್ಳತನಕ್ಕೆ ಯತ್ನ

ಬಂಟ್ವಾಳ, ಮಾರ್ಚ್ 31, 2026 (ಕರಾವಳಿ ಟೈಮ್ಸ್) : ಕೆನರಾ ಬ್ಯಾಂಕಿನ ಎಟಿಎಂ ಕೇಂದ್ರಕ್ಕೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿ ಯಂತ್ರಕ್ಕೆ ಹಾನಿಗೈದ ಘಟನೆ ಫರಂಗಿಫೇಟೆ ಎಂಬಲ್ಲಿ ಮಾ 29 ರಂದು ನಡೆದಿದೆ. 

ಈ ಬಗ್ಗೆ ಫರಂಗಿಪೇಟೆ ಕೆನರಾ ಬ್ಯಾಂಕ್ ಶಾಖಾ ಮ್ಯಾನೇಜರ್ ರಾಜೇಶ್ (55) ಅವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪುದು ಗ್ರಾಮದ ಫರಂಗಿಪೇಟೆ ಎಂಬಲ್ಲಿರುವ ಕೆನರಾ ಬ್ಯಾಂಕ್ ಶಾಖೆಯ ಪಕ್ಕದಲ್ಲಿರುವ ಎಟಿಎಂ ಕೇಂದ್ರ ಜಖಂಗೊಂಡಿದ್ದು, ಯಾರೋ ಕಳ್ಳತನಕ್ಕೆ ಯತ್ನಿಸಿರುವುದಾಗಿದೆ. ಎಟಿಎಂ ಜಖಂನಿಂದಾಗಿ ಸುಮಾರು 5 ಸಾವಿರ ರೂಪಾಯಿ ನಷ್ಟವಾಗಿದೆ. ಯಾರೋ ಕಳ್ಳರು ಹಣ ಕಳವಿಗೆ ಯತ್ನಿಸಿರುವಂತೆ ಕಂಡು ಬಂದಿದೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಫರಂಗಿಪೇಟೆ : ಎಟಿಎಂ ಕಳವಿಗೆ ಯತ್ನಿಸಿ ಕಳ್ಳತನಕ್ಕೆ ಯತ್ನ Rating: 5 Reviewed By: karavali Times
Scroll to Top