ಇರ್ವತ್ತೂರು : ಅಡಿಕೆ ಮರ ಕಡಿಯುವ ವೇಳೆ ಕುಸಿದು ಬಿದ್ದು ವ್ಯಕ್ತಿ ಮೃತ್ಯು - Karavali Times ಇರ್ವತ್ತೂರು : ಅಡಿಕೆ ಮರ ಕಡಿಯುವ ವೇಳೆ ಕುಸಿದು ಬಿದ್ದು ವ್ಯಕ್ತಿ ಮೃತ್ಯು - Karavali Times

728x90

31 March 2026

ಇರ್ವತ್ತೂರು : ಅಡಿಕೆ ಮರ ಕಡಿಯುವ ವೇಳೆ ಕುಸಿದು ಬಿದ್ದು ವ್ಯಕ್ತಿ ಮೃತ್ಯು

ಬಂಟ್ವಾಳ, ಮಾರ್ಚ್ 31, 2026 (ಕರಾವಳಿ ಟೈಮ್ಸ್) : ಅಡಿಕೆ ಮರ ಕಡಿಯುವ ಕೆಲಸ ಮಾಡುತ್ತಿದ್ದ ವ್ಯಕ್ತಿ ಏಕಾಏಕಿ ಕುಸಿದು ಬಿದ್ದು ಮೃತಪಟ್ಟ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮದ ಗುಮ್ಮಡಗುಡ್ಡೆ ಎಂಬಲ್ಲಿ ಮಾ 28 ರಂದು ಸಂಭವಿಸಿದೆ. 

ಮೃತರನ್ನು ಇಲ್ಲಿನ ಬೆಳ್ತಂಗಡಿ ತಾಲೂಕು, ಆರಂಬೋಡಿ ಗ್ರಾಮದ ನಿವಾಸಿ ಶಿವಣ್ಣ (45) ಎಂದು ಹೆಸರಿಸಲಾಗಿದೆ. ಇವರು ಬಂಟ್ವಾಳ ತಾಲೂಕು ಇರ್ವತ್ತೂರು ಗ್ರಾಮದ ಗುಮ್ಮಡಗುಡ್ಡೆ ಎಂಬಲ್ಲಿ ಆತೀಕ್ ಸಾಹೇಬ್ ಎಂಬವರ ಮನೆಯಲ್ಲಿ ಅಡಿಕೆ ಮರ ಕಡಿಯುವ ಕೆಲಸ ಮಾಡಿಕೊಂಡಿದ್ದವರು ಮಧ್ಯಾಹ್ಮ ಸಮಯ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೃತರ ಸಂಬಂಧಿ ವಿಠಲ ನಾರಾಯಣ ಶೆಟ್ಟಿ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಇರ್ವತ್ತೂರು : ಅಡಿಕೆ ಮರ ಕಡಿಯುವ ವೇಳೆ ಕುಸಿದು ಬಿದ್ದು ವ್ಯಕ್ತಿ ಮೃತ್ಯು Rating: 5 Reviewed By: karavali Times
Scroll to Top