ಭೂವ್ಯವಹಾರದ ಮನಸ್ತಾಪದ ಹಿನ್ನಲೆ : ಸ್ಕೂಟರಿಗೆ ಕಾರು ಡಿಕ್ಕಿ ಹೊಡೆದು ಕೊಲೆಯತ್ನ ನಡೆಸಿದ ಆರೋಪಿಯ ಬಂಧನ - Karavali Times ಭೂವ್ಯವಹಾರದ ಮನಸ್ತಾಪದ ಹಿನ್ನಲೆ : ಸ್ಕೂಟರಿಗೆ ಕಾರು ಡಿಕ್ಕಿ ಹೊಡೆದು ಕೊಲೆಯತ್ನ ನಡೆಸಿದ ಆರೋಪಿಯ ಬಂಧನ - Karavali Times

728x90

17 March 2026

ಭೂವ್ಯವಹಾರದ ಮನಸ್ತಾಪದ ಹಿನ್ನಲೆ : ಸ್ಕೂಟರಿಗೆ ಕಾರು ಡಿಕ್ಕಿ ಹೊಡೆದು ಕೊಲೆಯತ್ನ ನಡೆಸಿದ ಆರೋಪಿಯ ಬಂಧನ

ಮಂಗಳೂರು, ಮಾರ್ಚ್ 17, ಮಾರ್ಚ್, 2026 (ಕರಾವಳಿ ಟೈಮ್ಸ್) : ಭೂವ್ಯವಹಾರದಲ್ಲಿ ಮೋಸ ಮಾಡಿದ ಸಿಟ್ಟಿನಿಂದ ಕಾರು ಚಲಾಯಿಸಿದ ವ್ಯಕ್ತಿ ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ ಘಟನೆ ಮಂಗಳೂರು ಆರ್ಯ ಸಮಾಜ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. 

ಘಟನೆಯಿಂದ ಗಾಯಗೊಂಡ ವ್ಯಕ್ತಿಯನ್ನು ಮಲ್ಲಿಕಟ್ಟೆ ನಿವಾಸಿ ದಿವಂಗತ ಶಿವಪ್ಪ ಶೆಟ್ಟಿ ಎಂಬವರ ಪುತ್ರ ಮೋಹನ್ ದಾಸ್ ಶೆಟ್ಟಿ (56) ಎಂದು ಹೆಸರಿಸಲಾಗಿದ್ದು, ಆರೋಪಿಯನ್ನು ಫಳ್ನೀರು ನಿವಾಸಿ ಮುಹಮ್ಮದ್ ಶರೀಫ್ ಎಂದು ಹೆಸರಿಸಲಾಗಿದೆ. 

ಮೋಹನ್ ದಾಸ್ ಶೆಟ್ಟಿಗೂ ಆರೋಪಿ ಮಹಮ್ಮದ್ ಶರೀಫ್ ಮತ್ತು  ಆತನ ತಂದೆ  ಮಹಮ್ಮದ್ ಇಕ್ಬಾಲ್ ಅವರ ಮಧ್ಯೆ ಭೂ ವ್ಯವಹಾರವಿದ್ದು, ಸುರತ್ಕಲ್ ಖಾನ ಮತ್ತು ವಾಮಂಜೂರಿನಲ್ಲಿ ಆರೋಪಿ ಶರೀಫ್ ಸುಮಾರು 2 ಕೋಟಿ  ಹಣವನ್ನು  ಹೂಡಿಕೆ  ಮಾಡಿದ್ದಾನೆ. ಮೋಹನ್ ದಾಸ್ ಶೆಟ್ಟಿ ಆರೋಪಿಗೆ ಮೋಸ ಮಾಡಿದ ಸಿಟ್ಟಿನಿಂದ ಮಂಗಳವಾರ (ಮಾರ್ಚ್ 17 ರಂದು) ಬೆಳಿಗ್ಗೆ 11 ಗಂಟೆಗೆ  ಮಂಗಳೂರು ನಗರದ ಆರ್ಯ ಸಮಾಜ ರಸ್ತೆಯ ಬದಿಯಲ್ಲಿ ಮಾತುಕತೆ ನಡೆಸಿ, ಆರೋಪಿ ಮೋಹನ್ ದಾಸ್ ಶೆಟ್ಟಿಯ ಮೊಬೈಲ್ ಕಸಿದುಕೊಂಡಿರುತ್ತಾನೆ. ನಂತರ ಮೋಹನ್ ದಾಸ್ ತನ್ನ  ದ್ವಿಚಕ್ರ ವಾಹನ ಚಲಾಯಿಸಿಕೊಂಡು ಹೋಗುತ್ತಿರುವಾಗ ಆರೋಪಿಯು ಸಿಟ್ಟಿನಿಂದ ತನ್ನ ಇನೋವಾ ಕ್ರಿಸ್ಟಾ ಕಾರನ್ನು ಅತಿ ವೇಗವಾಗ ಚಲಾಯಿಸಿಕೊಂಡು ದ್ವಿಚಕ್ರ ವಾಹನಕ್ಕೆ  ಹಿಂಬದಿಯಿಂದ  ಗುದ್ದಿ ಕೊಲೆ ಮಾಡಲು ಪ್ರಯತ್ನಿಸಿರುವುದಾಗಿದೆ. ಈ ಬಗ್ಗೆ ಮಂಗಳೂರು ಪೂರ್ವ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಕರಣದ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಕೃತ್ಯವೆಸಗಿದ ಆರೋಪಿ ಮಹಮ್ಮದ್ ಶರೀಫ್ ಎಂಬಾತನನ್ನು  ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದಾಗಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಭೂವ್ಯವಹಾರದ ಮನಸ್ತಾಪದ ಹಿನ್ನಲೆ : ಸ್ಕೂಟರಿಗೆ ಕಾರು ಡಿಕ್ಕಿ ಹೊಡೆದು ಕೊಲೆಯತ್ನ ನಡೆಸಿದ ಆರೋಪಿಯ ಬಂಧನ Rating: 5 Reviewed By: karavali Times
Scroll to Top