ಗುಡ್ಡೆಅಂಗಡಿ : ಗ್ಯಾಸ್ ಪಂಪಿನಲ್ಲಿ ಹಠಾತ್ ದರ ಏರಿಕೆ ಬಿಸಿ, ಪಂಪಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಅಟೋ ಚಾಲಕರು - Karavali Times ಗುಡ್ಡೆಅಂಗಡಿ : ಗ್ಯಾಸ್ ಪಂಪಿನಲ್ಲಿ ಹಠಾತ್ ದರ ಏರಿಕೆ ಬಿಸಿ, ಪಂಪಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಅಟೋ ಚಾಲಕರು - Karavali Times

728x90

14 March 2026

ಗುಡ್ಡೆಅಂಗಡಿ : ಗ್ಯಾಸ್ ಪಂಪಿನಲ್ಲಿ ಹಠಾತ್ ದರ ಏರಿಕೆ ಬಿಸಿ, ಪಂಪಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಅಟೋ ಚಾಲಕರು

ಬಂಟ್ವಾಳ, ಮಾರ್ಚ್ 15, ಮಾರ್ಚ್, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಗ್ರಾಮದ ಮೆಲ್ಕಾರ್-ಗುಡ್ಡೆಅಂಗಡಿ ಎಂಬಲ್ಲಿ ಕಾರ್ಯಾಚರಿಸುತ್ತಿರುವ ಅಟೋ ಗ್ಯಾಸ್ ಪಂಪಿನಲ್ಲಿ ಹಠಾತ್ ದರ ಏರಿಕೆ ಮಾಡಲಾಗಿದ್ದು, ಇದನ್ನು ಖಂಡಿಸಿ ಇಲ್ಲಿನ ಅಟೋ ಚಾಲಕರು ಪಂಪಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರಲ್ಲದೆ ಪಂಪ್ ಮುಖ್ಯಸ್ಥರನ್ನು ಹಾಗೂ ಸಿಬ್ಬಂದಿಗಳನ್ನು ತರಾಟೆಗಳೆದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. 

ಶನಿವಾರ ಮುಂಜಾನೆ ಪಂಪಿಗೆ ಬಂದ ಅಟೋಗಳಿಗೆ ಮಾಮೂಲಿ ದರದಲ್ಲೇ ಸಿಬ್ಬಂದಿಗಳು ಗ್ಯಾಸ್ ತುಂಬಿಸಿದ್ದಾರೆ. ಆದರೆ ಬೆಳಿಗ್ಗೆ 10 ಗಂಟೆ ಬಳಿಕ ಹಠಾತ್ ಆಗಿ ಸುಮಾರು ಏಳೆಂಟು ರೂಪಾಯಿಗಳಷ್ಟು ದರ ಏರಿಸಿದ್ದು, ಪರಿಷ್ಕøತ ದರವನ್ನೇ ನೀಡುವಂತೆ ಅಟೋ ಚಾಲಕರನ್ನು ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಎಲ್ಲ ಕಡೆ 72 ರೂಪಾಯಿ ಮಾಮೂಲಿ ದರ ಇದ್ದರೆ, ಇಲ್ಲಿನ ಗ್ಯಾಸ್ ಪಂಪಿನಲ್ಲಿ ಏಕಾಏಕಿ 79.30 ರೂಪಾಯಿಗೆ ದರ ಏರಿಸಿದ್ದಾರೆ ಎಂದು ಅಟೋ ಚಾಲಕರು ಆರೋಪಿಸಿದ್ದಾರೆ. 

ಗ್ಯಾಸ್ ಪಂಪ್ ಮಾಲಕರು ಕೈಗೊಂಡ ಹಠಾತ್ ಹಗಲು ದರೋಡೆ ಕೃತ್ಯವನ್ನು ಖಂಡಿಸಿದ ಇಲ್ಲಿನ ಅಟೋ ಚಾಲಕರು ದಿಢೀರ್ ಪ್ರತಿಭಟನೆ ಕೈಗೊಂಡಿದ್ದಾರೆ. ನೂರಾರು ಸಂಖ್ಯೆಯಲ್ಲಿ ಸಮವಸ್ತ್ರದಲ್ಲೇ ಪಂಪಿಗೆ ಬಂದ ಅಟೋ ಚಾಲಕರು ಪಂಪಿನ ಮಾಲಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿರಲ್ಲದೆ ತಕ್ಷಣ ಏರಿಸಿದ ದರ ವಾಪಾಸು ಪಡೆದು ಹಿಂದಿನಿಂತಯೇ ದರ ವಿಧಿಸುವಂತೆ ಪಟ್ಟು ಹಿಡಿದಿದ್ದಾರೆ. 

ಹಠಾತ್ ಪ್ರತಿಭಟನೆ ಬಗ್ಗೆ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಪಂಪ್ ಮಾಲಕರ ಜೊತೆ ಮಾತುಕತೆ ನಡೆಸಿದರಲ್ಲದೆ ಪಂಪ್ ಬಂದ್ ಮಾಡಿಸಿ ಮಾಲಕರನ್ನು ಠಾಣೆಗೆ ಕರೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಗುಡ್ಡೆಅಂಗಡಿ : ಗ್ಯಾಸ್ ಪಂಪಿನಲ್ಲಿ ಹಠಾತ್ ದರ ಏರಿಕೆ ಬಿಸಿ, ಪಂಪಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಅಟೋ ಚಾಲಕರು Rating: 5 Reviewed By: karavali Times
Scroll to Top