ಮೆಲ್ಕಾರ್ : ಬೈಕ್ ಡಿಕ್ಕಿ ಹೊಡೆದು ಒಡಿಸ್ಸಾ ಮೂಲದ ವ್ಯಕ್ತಿ ಗಂಭೀರ - Karavali Times ಮೆಲ್ಕಾರ್ : ಬೈಕ್ ಡಿಕ್ಕಿ ಹೊಡೆದು ಒಡಿಸ್ಸಾ ಮೂಲದ ವ್ಯಕ್ತಿ ಗಂಭೀರ - Karavali Times

728x90

31 March 2026

ಮೆಲ್ಕಾರ್ : ಬೈಕ್ ಡಿಕ್ಕಿ ಹೊಡೆದು ಒಡಿಸ್ಸಾ ಮೂಲದ ವ್ಯಕ್ತಿ ಗಂಭೀರ

ಬಂಟ್ವಾಳ, ಮಾರ್ಚ್ 31, 2026 (ಕರಾವಳಿ ಟೈಮ್ಸ್) : ಬೈಕ್ ಡಿಕ್ಕಿ ಹೊಡೆದು ಒಡಿಸ್ಸಾ ಮೂಲದ ವ್ಯಕ್ತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮೆಲ್ಕಾರ್ ಜಂಕ್ಷನ್ ಬಳಿ ಮಾ 29 ರಂದು ರಾತ್ರಿ ಸಂಭವಿಸಿದೆ. 

ಗಾಯಗೊಂಡವರನ್ನು ಬಸಂತ್ ಮಲ್ಲಿಕ್ ಎಂದು ಹೆಸರಿಸಲಾಗಿದೆ. ಇವರು ರಾತ್ರಿ 8.30ರ ವೇಳೆಗೆ ಮೆಲ್ಕಾರ್-ಮುಡಿಪು ರಾಜ್ಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಾರ್ನಬೈಲು ಕಡೆಯಿಂದ ಮಹಮ್ಮದ್ ಮಾಯಿಝ್ ಎಂಬವರು ಚಲಾಯಿಸಿಕೊಂಡು ಬಂದ ಬೈಕ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಅಪಘಾತದಿಂದ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡ ಬಸಂತ್ ಮಲ್ಲಿಕ್ ಅವರನ್ನು ಅವರ ಸ್ನೇಹಿತ ಕುಷಾ ಮಲ್ಲಿಕ್ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕೆಎಂಸಿ ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿ ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮೆಲ್ಕಾರ್ : ಬೈಕ್ ಡಿಕ್ಕಿ ಹೊಡೆದು ಒಡಿಸ್ಸಾ ಮೂಲದ ವ್ಯಕ್ತಿ ಗಂಭೀರ Rating: 5 Reviewed By: karavali Times
Scroll to Top