ಫಾಚ್ರ್ಯೂನರ್ ಕಾರಿನಲ್ಲಿ ಜಾನುವಾರು ಹಿಂಸಾತ್ಮಕ ಸಾಗಾಟ ಪ್ರಕರಣದ ಆರೋಪಿಗಳ ಬಂಧನ - Karavali Times ಫಾಚ್ರ್ಯೂನರ್ ಕಾರಿನಲ್ಲಿ ಜಾನುವಾರು ಹಿಂಸಾತ್ಮಕ ಸಾಗಾಟ ಪ್ರಕರಣದ ಆರೋಪಿಗಳ ಬಂಧನ - Karavali Times

728x90

20 March 2026

ಫಾಚ್ರ್ಯೂನರ್ ಕಾರಿನಲ್ಲಿ ಜಾನುವಾರು ಹಿಂಸಾತ್ಮಕ ಸಾಗಾಟ ಪ್ರಕರಣದ ಆರೋಪಿಗಳ ಬಂಧನ

ಮಂಗಳೂರು, ಮಾರ್ಚ್ 21, ಮಾರ್ಚ್, 2026 (ಕರಾವಳಿ ಟೈಮ್ಸ್) : ಬಜ್ಪೆ ಪೆÇಲೀಸ್ ಠಾಣಾ ವ್ಯಾಪ್ತಿಯ ಬಜ್ಪೆ ಗ್ರಾಮದ ಬಡಗ ಎಡಪದವು ಗ್ರಾಮದ ಸಾಸ್ತಾವು ಎಂಬಲ್ಲಿ ಮಾ 18 ರಂದು 4 ಜಾನುವಾರುಗಳನ್ನು ಡಿಎಲ್10 ಸಿಇ 6227 ನೋಂದಣಿ ಸಂಖ್ಯೆಯ ಫಾಚ್ರ್ಯೂನರ್ ಕಾರಿನಲ್ಲಿ ತುಂಬಿಕೊಂಡು ಕಳ್ಳತನ ಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣ ಬೇಧೀಸುವ ವೇಳೆ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಮಾ 19 ರಂದು ಪತ್ತೆ ಹಚ್ಚಿ ಬಂಧಿಸುವಲ್ಲಿ ಸಫಲರಾಗಿದ್ದಾರೆ. 

ಬಂಧಿತ ಆರೋಪಿಗಳನ್ನು ಮೂಲತಃ ಬಜ್ಪೆ ನಿವಾಸಿ, ಪ್ರಸ್ತುತ ಮಂಗಳೂರು-ಪೆರ್ಮುದೆ ಗ್ರಾಮದ ನಿವಾಸಿ ದಿವಂಗತ ನಿಜಾಮುದ್ದೀನ್ ಎಂಬವರ ಪುತ್ರ ನಿಸಾರ್ ಅಲಿಯಾಸ್ ನಿಸಾರುದ್ದೀನ್ ಅಲಿಯಾಸ್ ಪಾರಿವಾಳ ನಿಸಾರ್ (28) ಹಾಗೂ ಉಳಾಯಿಬೆಟ್ಟು ನಿವಾಸಿ ಕೆ ಬಾವಾ ಎಂಬವರ ಪುತ್ರ ಮೊಹಮ್ಮದ್ ಜಮಾಲುದ್ದೀನ್ ಅಲಿಯಾಸ್ ಜಮಾಲ್ (24) ಎಂದು ಹೆಸರಿಸಲಾಗಿದೆ. 

ಪ್ರಕರಣ ಬೇಧಿಸುವ ವೇಳೆ ಪೊಲೀಸರು ಒಟ್ಟು 8.42 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು. ಮಾರ್ಚ್ 18 ರಂದು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಾರಿನಲ್ಲಿ ಕಟ್ಟಿ ಹಾಕಿ ಮಾಂಸ ಮಾಡಲು ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಎ.ಸಿ.ಪಿ ಶ್ರೀಕಾಂತ್, ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಬಜಪೆ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಮತಿ ಲತಾ ಮತ್ತು ಸಿಬ್ಬಂದಿಗಳಾದ ರಾಜೇಶ್, ಚಿದಾನಂದ ಹಾಗೂ ಪ್ರಕಾಶ್ ಅವರು ಕಾರ್ಯಾಚರಣರ ನಡೆಸಿ 4 ದನಗಳಿದ್ದ ಫಾಚ್ರ್ಯೂನರ್ ಕಾರು, ತಲವಾರು, ಕಬ್ಬಿಣದ ರಾಡ್ ವಶಪಡಿಸಿಕೊಂಡಿದ್ದರು. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಫಾಚ್ರ್ಯೂನರ್ ಕಾರಿನಲ್ಲಿ ಜಾನುವಾರು ಹಿಂಸಾತ್ಮಕ ಸಾಗಾಟ ಪ್ರಕರಣದ ಆರೋಪಿಗಳ ಬಂಧನ Rating: 5 Reviewed By: karavali Times
Scroll to Top