ಪುತ್ತೂರು : ವೈವಾಹಿಕ ಕಲಹದಿಂದ ಪತ್ನಿಯನ್ನು ಇರಿದು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ - Karavali Times ಪುತ್ತೂರು : ವೈವಾಹಿಕ ಕಲಹದಿಂದ ಪತ್ನಿಯನ್ನು ಇರಿದು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ - Karavali Times

728x90

20 March 2026

ಪುತ್ತೂರು : ವೈವಾಹಿಕ ಕಲಹದಿಂದ ಪತ್ನಿಯನ್ನು ಇರಿದು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ

ಪುತ್ತೂರು, ಮಾರ್ಚ್ 21, ಮಾರ್ಚ್, 2026 (ಕರಾವಳಿ ಟೈಮ್ಸ್) : ವೈವಾಹಿಕ ಕಲಹದಿಂದ ಪತ್ನಿಯನ್ನು ಕೊಲೆಗೈದ ಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಅರಿಯಡ್ಕ ಗ್ರಾಮದ ಗೋಳ್ತಿಲ ಎಂಬಲ್ಲಿ ಮಾ 20 ರಂದು ಬೆಳಿಗ್ಗೆ ಸಂಭವಿಸಿದೆ. 

ಮೃತ ಮಹಿಳೆಯನ್ನು ಸಾವಿತ್ರಿ (42) ಎಂದು ಹೆಸರಿಸಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ಪತಿಯನ್ನು ಬೈರಪ್ಪ ಎಂದು ಹೆಸರಿಸಲಾಗಿದೆ. ಪತಿ-ಪತ್ನಿ ಮಧ್ಯೆ ವೈವಾಹಿಕ ಕಲಹ ಇದೆಯೆಂದು ಹೇಳಲಾಗಿದ್ದು, ಶುಕ್ರವಾರ ಬೆಳಿಗ್ಗೆ ಗೋಳ್ತಿಲ ಎಂಬಲ್ಲಿನ ನಿವಾಸಿ ಚೈತನ್ಯ ಎಂಬವರ ಮನೆಯ ತೋಟದ ಕೆಲಸ ನಿರ್ವಹಿಸುತ್ತಿದ್ದ ಸಾವಿತ್ರಿ ಅವರನ್ನು ಪತಿ ಬೈರಪ್ಪ ಅವರು ಚೂರಿಯಿಂದ ತಿವಿದು ಕೊಲೆ ಮಾಡಿ ಬಳಿಕ ತಾನು ಕೂಡಾ ಚೂರಿಯಿಂದ ಕುತ್ತಿಗೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಆತನನ್ನು ಸ್ಥಳೀಯರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಮೃತ ಸಾವಿತ್ರಿ ಅವರ ತಂದೆ ತಿಪ್ಪ ಅವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು : ವೈವಾಹಿಕ ಕಲಹದಿಂದ ಪತ್ನಿಯನ್ನು ಇರಿದು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ Rating: 5 Reviewed By: karavali Times
Scroll to Top