ಅಕ್ರಮ ಜಾನುವಾರು ವಧಾ ಸ್ಥಳಕ್ಕೆ ಪಣಂಬೂರು ಪೊಲೀಸರ ದಾಳಿ : ಜಾನುವಾರು, ಮಾಂಸ ವಶಕ್ಕೆ, ಆರೋಪಿಗಳು ಪರಾರಿ - Karavali Times ಅಕ್ರಮ ಜಾನುವಾರು ವಧಾ ಸ್ಥಳಕ್ಕೆ ಪಣಂಬೂರು ಪೊಲೀಸರ ದಾಳಿ : ಜಾನುವಾರು, ಮಾಂಸ ವಶಕ್ಕೆ, ಆರೋಪಿಗಳು ಪರಾರಿ - Karavali Times

728x90

18 March 2026

ಅಕ್ರಮ ಜಾನುವಾರು ವಧಾ ಸ್ಥಳಕ್ಕೆ ಪಣಂಬೂರು ಪೊಲೀಸರ ದಾಳಿ : ಜಾನುವಾರು, ಮಾಂಸ ವಶಕ್ಕೆ, ಆರೋಪಿಗಳು ಪರಾರಿ

ಮಂಗಳೂರು, ಮಾರ್ಚ್ 19, ಮಾರ್ಚ್, 2026 (ಕರಾವಳಿ ಟೈಮ್ಸ್) : ಅಕ್ರಮ ಜಾನುವರು ವಧಾ ಕೇಂದ್ರಕ್ಕೆ ಪಣಂಬೂರು ಪೊಲೀಸರು ದಾಳಿ ನಡೆಸಿದ ಘಟನೆ ಕಸಬಾ ಬೆಂಗ್ರೆ ಗ್ರಾಮದ ಬದ್ರಿಯಾ ಜುಮಾ ಮಸೀದಿ ಬಳಿ ಮಾರ್ಚ್ 18 ರಂದು ನಡೆದಿದೆ. 

ಮಾ 18 ರಂದು ಬೆಳಿಗ್ಗೆ 9.15 ಗಂಟೆಗೆ ಮಂಗಳೂರು ತಾಲೂಕು ಕಸಬಾ ಬೆಂಗ್ರೆ ಗ್ರಾಮದ ಬದ್ರಿಯಾ ಜುಮ್ಮಾ ಮಸೀದಿಯ ಬಳಿ ಅಹಮ್ಮದ್ ಎಂಬವರ ಮನೆಯ ಹಿಂಭಾಗದಲ್ಲಿ ಫಲ್ಗುಣಿ ನದಿಯ ದಡದಲ್ಲಿ ನಿರ್ಮಿಸಿರುವ ಶೆಡ್ಡಿನಲ್ಲಿ ನಾಲ್ಕೈದು ಜನ ಸೇರಿಕೊಂಡು ಜಾನುವಾರುಗಳನ್ನು ಅಕ್ರಮವಾಗಿ ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯನ್ನಾಧರಿಸಿ ಎಸಿಪಿ ಶ್ರೀಕಾಂತ್, ಪೊಲೀಸ್ ಇನ್ಸ್ ಪೆಕ್ಟರ್ ಸಲೀಂ ಅಬ್ಬಾಸ್ ಅವರ ಮಾರ್ಗದರ್ಶನದಲ್ಲಿ ಪಣಂಬೂರು ಠಾಣಾ ಪಿಎಸ್ಸೈ ಶ್ರೀಮತಿ ಶ್ರೀಕಲಾ ಹಾಗೂ ಸಿಬ್ಬಂದಿಗಳು ಈ ದಾಳಿ ಸಂಘಟಿಸಿದ್ದಾರೆ. 

ದಾಳಿ ವೇಳೆ ಅಕ್ರಮವಾಗಿ ವಧೆ ಮಾಡಲು ಕಟ್ಟಿ ಹಾಕಿದ್ದ 9 ಜಾನುವಾರಗಳನ್ನು ಹಾಗೂ ವಧೆ ಮಾಡಿ ಮಾರಾಟ ಮಾಡಲು ಸಂಗ್ರಹಿಸಿದ್ದ 205 ಕೆಜಿ  ಮಾಂಸ ಮತ್ತು ವಧೆ ಮಾಡಲು ಉಪಯೋಗಿಸಿದ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಕಸಬಾ ಬೆಂಗ್ರೆ ನಿವಾಸಿ ಕಬೀರ್ ಅಲಿಯಾಸ್ ಪೆತ್ತ ಕಬೀರ್, ಜೋಕಟ್ಟೆ ನಿವಾಸಿ ಬದ್ರು ಅಲಿಯಾಸ್ ಬದ್ರುದ್ದೀನ್ ಹಾಗೂ ಇತರ 3 ಮಂದಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು ಆರೋಪಿಗಳ ಪತ್ತೆಗೆ ತಂಡವನ್ನು ರಚಿಸಿರುವ ಪೊಲೀಸರು ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪಣಂಬೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಕ್ರಮ ಜಾನುವಾರು ವಧಾ ಸ್ಥಳಕ್ಕೆ ಪಣಂಬೂರು ಪೊಲೀಸರ ದಾಳಿ : ಜಾನುವಾರು, ಮಾಂಸ ವಶಕ್ಕೆ, ಆರೋಪಿಗಳು ಪರಾರಿ Rating: 5 Reviewed By: karavali Times
Scroll to Top