ಅಪ್ರಾಪ್ತ ಬಾಲಕಗೆ ಅಶ್ಲೀಲ ವೀಡಿಯೋ ತೋರಿಸಿ ಅಸಭ್ಯ ಕ್ರಿಯೆಗೆ ಪ್ರೇರಣೆ : ಆರೋಪಿ ಬಂಧಿಸಿದ ಕೊಣಾಜೆ ಪೊಲೀಸರು - Karavali Times ಅಪ್ರಾಪ್ತ ಬಾಲಕಗೆ ಅಶ್ಲೀಲ ವೀಡಿಯೋ ತೋರಿಸಿ ಅಸಭ್ಯ ಕ್ರಿಯೆಗೆ ಪ್ರೇರಣೆ : ಆರೋಪಿ ಬಂಧಿಸಿದ ಕೊಣಾಜೆ ಪೊಲೀಸರು - Karavali Times

728x90

18 March 2026

ಅಪ್ರಾಪ್ತ ಬಾಲಕಗೆ ಅಶ್ಲೀಲ ವೀಡಿಯೋ ತೋರಿಸಿ ಅಸಭ್ಯ ಕ್ರಿಯೆಗೆ ಪ್ರೇರಣೆ : ಆರೋಪಿ ಬಂಧಿಸಿದ ಕೊಣಾಜೆ ಪೊಲೀಸರು

ಮಂಗಳೂರು, ಮಾರ್ಚ್ 19, ಮಾರ್ಚ್, 2026 (ಕರಾವಳಿ ಟೈಮ್ಸ್) : 9 ವರ್ಷದ ಬಾಲಕನನ್ನು ಹಣ ಹಾಗೂ ತಿಂಡಿ ನೀಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ಕೋಟೆಕಾರು-ಮಡ್ಯಾರು ನಿವಾಸಿ ಮಂಜುನಾಥ ಎಂಬವರ ಪುತ್ರ, ಬಿಜೈ ಲಾಜಿಸ್ಟಿಕ್ ಎಂ ಎಸ್ ಸಿ ಉದ್ಯೋಗಿಯಾಗಿರುವ ಆಶೀಶ್ ಪೂಜಾರಿ (33) ಎಂದು ಹೆಸರಿಸಲಾಗಿದೆ, ಮಾರ್ಚ್ 18 ರಂದು ಆರೋಪಿಯು ಬಾಲಕನನ್ನು ಹಣ ಹಾಗೂ ತಿಂಡಿ ನೀಡುವ ನೆಪದಲ್ಲಿ ಕರೆದುಕೊಂಡು ಹೋಗಿ ಅಶ್ಲೀಲ ವಿಡಿಯೋ ತೋರಿಸಿ ಅಸಭ್ಯ ಕ್ರಿಯೆಗಳಿಗೆ ಪ್ರೇರೇಪಿಸಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಕೊಣಾಜೆ ಪೆÇಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯ ಸೆಕ್ಷನ್ 4, 6, 12 ಹಾಗೂ ಬಿ ಎನ್ ಎಸ್ ಕಾಯ್ದೆಯ ಸೆಕ್ಷನ್ 75ರಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಅಪ್ರಾಪ್ತ ಬಾಲಕಗೆ ಅಶ್ಲೀಲ ವೀಡಿಯೋ ತೋರಿಸಿ ಅಸಭ್ಯ ಕ್ರಿಯೆಗೆ ಪ್ರೇರಣೆ : ಆರೋಪಿ ಬಂಧಿಸಿದ ಕೊಣಾಜೆ ಪೊಲೀಸರು Rating: 5 Reviewed By: karavali Times
Scroll to Top