ಬಂಟ್ವಾಳ, ಮಾರ್ಚ್ 17, 2026 (ಕರಾವಳಿ ಟೈಮ್ಸ್) : ರಸ್ತೆ ವಿಚಾರದಲ್ಲಿ ಕುಟುಂಬ ಹಾಗೂ ಚರ್ಚ್ ನಡುವಿನ ತಕರಾರು ಬಿಗಡಾಯಿಸಿ ಪರಸ್ಪರ ಹಲ್ಲೆವರೆಗೂ ತಲುಪಿದ ಘಟನೆ ಚೇಳೂರಿನಲ್ಲಿ ಮಾರ್ಚ್ 14 ರಂದು ನಡೆದಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
ಉಳ್ಳಾಲ ತಾಲೂಕಿನ ಚೇಳೂರು ನಿವಾಸಿ ಡಯಾನಾ ಜೆಸ್ಟಿನ್ ಡಿಸೋಜಾ (51) ಎಂಬವರು ಈ ಬಗ್ಗೆ ಠಾಣೆಗೆ ದೂರು ನೀಡಿದ್ದು, ಇವರ ಮನೆಗೆ ಹೋಗುವ ರಸ್ತೆಯ ವಿಚಾರವಾಗಿ ಇವರಿಗೆ ಹಾಗೂ ಸ್ಥಳೀಯ ಚರ್ಚಿನ ನಡುವೆ ತಕರಾರಿದ್ದು, ಮಾರ್ಚ್ 14 ರಂದು ಸದ್ರಿ ಚರ್ಚಿಗೆ ಸಂಬಂಧಿಸಿದವರು ಜೆಸಿಬಿ ಮೂಲಕ ರಸ್ತೆಯ ಕೆಲಸ ಮಾಡಿ ಮನೆಗೆ ಹೋಗದಂತೆ ರಸ್ತೆ ಬಂದ್ ಮಾಡಿರುತ್ತಾರೆ. ಈ ಬಗ್ಗೆ ಜೆಸ್ಟಿನಾ ಹಾಗೂ ಅವರ ಮಕ್ಕಳು ಮನೆಗೆ ಹೋಗಲು ರಸ್ತೆ ಬಿಡಲು ಕೇಳಿಕೊಂಡಾಗ, ಆರೋಪಿಗಳಾದ ಜೆಸಿಂತಾ ಡಿಸೋಜಾ, ಜೆಸಿಂತಾ ಕ್ರಾಸ್ತಾ, ಅನಿಷಾ ಡಿಸೋಜಾ, ಹಿಲ್ಡಾ ಮೊಂತೇರೊ, ದೊರಾ ರೊಡ್ರಿಗಸ್, ಅಲೆನ್ ರೋಸ್ ಹಾಗೂ ಇತರರು ಸೇರಿ ಜೆಸ್ಟಿನಾ ಅವರಿಗೆ ಹಲ್ಲೆ ನಡೆಸಿ, ಅವ್ಯಾಚವಾಗಿ ಬೈದು ಜೀವಬೆದರಿಕೆ ಹಾಕಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ಜೆಸ್ಟಿನ್ ಅವರು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 37/2026, ಕಲಂ 189(2), 191(2), 115(2), 382, 351(2) ಆರ್/ಡಬ್ಲ್ಯು 190 ಬಿ ಎನ್ ಎಸ್ ಪ್ರಕರಣ ದಾಖಲಾಗಿದೆ.
ಸದ್ರಿ ಘಟನೆಗೆ ಸಂಬಂಧಿಸಿದಂತೆ, ಜೆಸಿಂತಾ ಡಿಸೋಜ ಅವರು ಪ್ರತಿದೂರು ನೀಡಿದ್ದು, ಮಾರ್ಚ್ 14 ರಂದು ಸಂಜೆ ರಸ್ತೆಯ ಕೆಲಸವನ್ನು ಜೆಸಿಬಿ ಮೂಲಕ ಮಾಡಿಸುತ್ತಿದ್ದಾಗ, ಡಯಾನ ಡಿಸೋಜ ಅವರು ಕೆಲಸಕ್ಕೆ ತಡೆಯೊಡ್ಡಿ ತನಗೆ ಹಲ್ಲೆ ನಡೆಸಿ ಅವ್ಯಾಚವಾಗಿ ಬೈದಿರುತ್ತಾರೆ ಹಾಗೂ ಮತ್ತೋರ್ವ ಆರೋಪಿ ವಿನಿಲ್ ಎಂಬಾತ ಅವ್ಯಾಚವಾಗಿ ಬೈದು ಜೀವಬೆದರಿಕೆ ಒಡ್ಡಿರುತ್ತಾನೆ. ಹಲ್ಲೆಯಿಂದ ಗಾಯಗೊಂಡ ಜೆಸಿಂತಾ ಡಿಸೋಜ ಅವರು ಕೂಡಾ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ನೀಡಿದ ಪ್ರತಿದೂರಿನಂತೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 38/2026, ಕಲಂ 352, 115(2), 118(1), 351(2), ಜೊತೆಗೆ 3(5) ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದ್ದು, ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












0 comments:
Post a Comment