ಬೆಳ್ತಂಗಡಿ, ಮಾರ್ಚ್ 17, 2026 (ಕರಾವಳಿ ಟೈಮ್ಸ್) : ಎಲೆಕ್ಟ್ರಿಕಲ್ ಸಂಸ್ಥೆಯ ಕಾರ್ಮಿಕನೋರ್ವ ವಿದ್ಯುತ್ ಕಂಬಗಳನ್ನು ಎತ್ತುವ ಸಂದರ್ಭ ಕಂಬ ಮೈಮೇಲೆ ಬಿದ್ದು ಮೃತಪಟ್ಟ ಘಟನೆ ಕೊಕ್ಕಡದಲ್ಲಿ ಮಾ 16 ರಂದು ಸಂಜೆ ವೇಳೆ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಇಲ್ಲಿನ ನಿವಾಸಿ ಶಿವಪ್ಪ (40) ಎಂದು ಹೆಸರಿಸಲಾಗಿದೆ. ಇವರು ಸುಮಾರು 6 ವರ್ಷಗಳಿಂದ ಸ್ಥಳೀಯ ನಿವಾಸಿ ಪುರುಷೋತ್ತಮ ಅವರ ಎಲೆಕ್ಟ್ರಿಕ್ ಸಂಸ್ಥೆಯಲ್ಲಿ ಕೂಲಿ ಮಾಡಿಕೊಂಡಿದ್ದು, ಮಾ 16 ರಂದು ಕೊಕ್ಕಡ ಗ್ರಾಮದ ಶ್ರೀರಾಮ ಭಜನಾ ಮಂದಿರದ ಬಳಿ ಕೆಲಸದ ವೇಳೆ ವಿದ್ಯುತ್ ಕಂಬಗಳನ್ನು ಎತ್ತುವ ಸಂದರ್ಭ ಕಂಬವು ಶಿವಪ್ಪ ಅವರ ಮೇಲೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಸಂಸ್ಥೆಯ ಮಾಲಿಕ ಕೆಲಸದ ವೇಳೆ ಭದ್ರತೆಗೆ ಬೇಕಾದ ಮುಂಜಾಗ್ರತಾ ವಹಿಸದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಮೃತರ ಸಂಬಂಧಿ ಕೊಕ್ಕಡ ನಿವಾಸಿ ರಂಜಿತ್ (23) ಅವರು ನೀಡಿದ ದೂರಿನಂತೆ ಈ ಬಗ್ಗೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












0 comments:
Post a Comment