ಕುರ್-ಆನ್ ಸ್ಪರ್ಧೆ ಬಗ್ಗೆ ಪ್ರಚೋದನಕಾರಿ ಕಮೆಂಟ್ ಹಾಕಿದ ಮತ್ತೋರ್ವ ಆರೋಪಿ ಬಂಧಿಸಿದ ಕಂಕನಾಡಿ ಪೊಲೀಸರು - Karavali Times ಕುರ್-ಆನ್ ಸ್ಪರ್ಧೆ ಬಗ್ಗೆ ಪ್ರಚೋದನಕಾರಿ ಕಮೆಂಟ್ ಹಾಕಿದ ಮತ್ತೋರ್ವ ಆರೋಪಿ ಬಂಧಿಸಿದ ಕಂಕನಾಡಿ ಪೊಲೀಸರು - Karavali Times

728x90

28 March 2026

ಕುರ್-ಆನ್ ಸ್ಪರ್ಧೆ ಬಗ್ಗೆ ಪ್ರಚೋದನಕಾರಿ ಕಮೆಂಟ್ ಹಾಕಿದ ಮತ್ತೋರ್ವ ಆರೋಪಿ ಬಂಧಿಸಿದ ಕಂಕನಾಡಿ ಪೊಲೀಸರು

ಮಂಗಳೂರು, ಮಾರ್ಚ್ 28, ಮಾರ್ಚ್, 2026 (ಕರಾವಳಿ ಟೈಮ್ಸ್) : 2026ನೇ ಜನವರಿ ತಿಂಗಳಿನಲ್ಲಿ ಮಂಗಳೂರು ನಗರದ ಇಂಡಿಯಾನಾ ಕನ್ವೆನ್ಷನ್ ಸೆಂಟರಿನಲ್ಲಿ ನಡೆದ ಕಿರಾಅತ್ (ಕುರಾನ್ ಪಠಿಸುವ) ಸ್ಪರ್ದೆಯ ವಿಡಿಯೋ ಸಾಮಾಜಿಕ ಜಾಲತಾಣವಾದ ಉದಯವಾಣಿ ಫೇಸ್ ಬುಕ್ ಪುಟದಲ್ಲಿ ಪ್ರಸಾರವಾಗುತ್ತಿದ್ದಾಗ ಬಾಲು ರಾಜೇಂದ್ರ ಎಂಬ ಫೇಸ್ಬುಕ್ ಖಾತೆಯಲ್ಲಿ ಕೋಮು ಪ್ರಚೋದನಕಾರಿಯಾಗಿ ಕಮೆಂಟ್ ಹಾಕಿದ ಬಗ್ಗೆ ಕಂಕನಾಡಿ ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 15/2026 ಕಲಂ 196 ಬಿ.ಎನ್.ಎಸ್ ಮತ್ತು 66 ಐಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿತ್ತು. 

ಈ ಬಗ್ಗೆ ತನಿಖೆ ನಡೆಸಿದ ಕಂಕನಾಡಿ ಪೊಲೀಸರು ಬಾಲು ರಾಜೇಂದ್ರ ಎಂಬ ಫೇಸ್ ಬುಕ್ ಖಾತೆಯಿಂದ ಕೋಮು ಪ್ರಚೋದಕ ಕಮೆಂಟ್ ಹಾಕಿದ ವ್ಯಕ್ತಿಯು ಚಾಮರಾಜನಗರದ ನಿವಾಸಿ ಚಿಕ್ಕಮಾರ ಶೆಟ್ಟಿ ಎಂಬವರ ಪುತ್ರ  ರಾಜೇಂದ್ರ ಸಿ (48) ಎಂದು ತಿಳಿದು ಬಂದಿದ್ದು, ಮಾರ್ಚ್ 28 ರಂದು ಆರೋಪಿಯನ್ನು ಕಂಕನಾಡಿ ನಗರ ಪೆÇಲೀಸರು ದಸ್ತಗಿರಿ ಮಾಡಿದ್ದು, ಪ್ರಕರಣಕ್ಕೆ ಸಂಬಂದಿಸಿದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಕುರ್-ಆನ್ ಸ್ಪರ್ಧೆ ಬಗ್ಗೆ ಪ್ರಚೋದನಕಾರಿ ಕಮೆಂಟ್ ಹಾಕಿದ ಮತ್ತೋರ್ವ ಆರೋಪಿ ಬಂಧಿಸಿದ ಕಂಕನಾಡಿ ಪೊಲೀಸರು Rating: 5 Reviewed By: karavali Times
Scroll to Top