ಮಂಗಳೂರು ಪೊಲೀಸರಿಂದ ಮುಂದುವರಿದ ಡ್ರಗ್ಸ್ ಕಾರ್ಯಾಚರಣೆ : ಮತ್ತೆ 6 ಮಂದಿ ಖಾಕಿ ಬಲೆಗೆ - Karavali Times ಮಂಗಳೂರು ಪೊಲೀಸರಿಂದ ಮುಂದುವರಿದ ಡ್ರಗ್ಸ್ ಕಾರ್ಯಾಚರಣೆ : ಮತ್ತೆ 6 ಮಂದಿ ಖಾಕಿ ಬಲೆಗೆ - Karavali Times

728x90

5 March 2026

ಮಂಗಳೂರು ಪೊಲೀಸರಿಂದ ಮುಂದುವರಿದ ಡ್ರಗ್ಸ್ ಕಾರ್ಯಾಚರಣೆ : ಮತ್ತೆ 6 ಮಂದಿ ಖಾಕಿ ಬಲೆಗೆ

ಮಂಗಳೂರು, ಮಾರ್ಚ್ 05, 2026 (ಕರಾವಳಿ ಟೈಮ್ಸ್) : ಮಂಗಳೂರು ದಕ್ಷಿಣ ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎನ್ ಡಿ ಪಿ ಎಸ್ ಕಾಯ್ದೆಗೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಒಟ್ಟು 6 ಮಂದಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. 

ಮಂಗಳೂರು ದಕ್ಷಿಣ ಠಾಣೆಗೆ ಸಂಬಂಧಿತ ಬಂಧಿತರನ್ನು ಮೂಲತಃ ಉಡುಪಿ ಜಿಲ್ಲೆಯ ಕೋಟೇಶ್ವರ ನಿವಾಸಿಗಳಾಗಿದ್ದು, ಪ್ರಸ್ತುತ ಮಂಗಳೂರಿನ ಪಾಂಡೇಶ್ವರದಲ್ಲಿ ವಾಸವಾಗಿರುವ ಹನೀಫ್ ಎಂಬವರ ಪುತ್ರ ಮೊಹಮ್ಮದ್ ಸಯ್ಯದ್ ಅಫ್ರಿದಿ (26), ಕೆ ಮೊಹಮ್ಮದ್ ಹನೀಫ್ ಎಂಬವರ ಪುತ್ರ ಅಹಮ್ಮದ್ ಅಲಿ ಅರ್ಶಾನ್ (22), ಮಂಗಳೂರು-ಬಲ್ಮಠ ನಿವಾಸಿ ಮನ್ಸೂರ್ ಸಾಗ್ ಎಂಬವರ ಪುತ್ರ ಮಕ್ಸೂದ್ ಸಾಗ್ (23), ಕೇರಳ ರಾಜ್ಯದ ಕೊಟ್ಟಾಯಂ ನಿವಾಸಿ ಜೋಸೆಫ್ ಸಿಎಂ ಎಂಬವರ ಪುತ್ರ ಫೆಲಿಕ್ಸ್ ಪಿ ಜೋಸೆಫ್ (20) ಎಂದು ಹೆಸರಿಸಲಾಗಿದ್ದು, ಇವರಿಂದ 53.87 ಗ್ರಾಂ ಎಂಡಿಎಂಎ, 103.20 ಗ್ರಾಂ ಹೈಡ್ರೋವಿಡ್ ಗಾಂಜಾ ಹಾಗೂ ಎಂ ಜಿ ಹೆಕ್ಟರ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. 

ಮಂಗಳೂರು ಉತ್ತರ ಪೆÇಲೀಸ್ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರನ್ನು ಮಂಗಳೂರು-ಕಂಕನಾಡಿ ನಿವಾಸಿ ದಿವಂಗತ ಡೈನ್ ರೋಚ್ ಎಂಬವರ ಪುತ್ರ ಎಡಲ್ ರೋಚ್ (33) ಹಾಗೂ ಕದ್ರಿ-ಮಲ್ಲಿಕಟ್ಟೆ ನಿವಾಸಿ ವಿಶಾಲ್ ಲಸ್ರಾದೋ ಎಂಬವರ ಪುತ್ರ ಆರೋನ್ ಲಸ್ರಾದೋ (18) ಎಂದು ಹೆಸರಿಸಲಾಗಿದ್ದು, ಇವರಿಂದ 60 ಗ್ರಾಂ ಹೈಡ್ರೋವಿಡ್ ಗಾಂಜಾ, 1 ಕೆಜಿ 155 ಗ್ರಾಂ ಗಾಂಜಾ ಹಾಗೂ ಮಾರುತಿ ಸ್ವಿಫ್ಟ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಮಾರ್ಚ್ 4 ರಂದು ಮಂಗಳೂರು ದಕ್ಷಿಣ ಪೆÇಲೀಸ್ ಠಾಣಾ ವ್ಯಾಪ್ತಿಯ  ಬದ್ರಿಯಾ ರಸ್ತೆಯ ಕ್ಲಾಸಿಕ್ ಕಂಫರ್ಟ್ ಲಾಡ್ಜಿನಲ್ಲಿ ರೂಮ್ ಮಾಡಿ ಕುಳಿತು ನಿಷೇದಿತ ಮಾದಕ ದ್ರವ್ಯ ಎಂಡಿಎಂಎ ಮತ್ತು ಹೈಡ್ರೋ ವೀಡ್ ಗಾಂಜಾವನ್ನು ಮಂಗಳೂರು ನಗರದ ಕಾಲೇಜ್ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ಮಾಡಿ 4 ಆರೋಪಿತರನ್ನು ದಸ್ತಗಿರಿ ಮಾಡಲಾಗಿರುತ್ತದೆ. 

ಮತ್ತೊಂದು ಪ್ರಕರಣದಲ್ಲಿ ಮಾರ್ಚ್ 4ರಂದು ಮಂಗಳೂರು ಉತ್ತರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ  ಗ್ರೀನ್ ಪಾರ್ಕ್ ಮೈದಾನ ಬಂದರ್ ಬಳಿಯಲ್ಲಿ ನಿಷೇದಿತ ಮಾದಕ ವಸ್ತುವಾದ ಹೈಡ್ರೋವಿಡ್ ಗಾಂಜಾ ಮತ್ತು ಗಾಂಜಾವನ್ನು ಮಂಗಳೂರು ನಗರದ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ.

ಮುಂಬೈ ನಿವಾಸಿ ಸಂದೀಪ್ ಶೆಟ್ಟಿ ದುಬೈನಲ್ಲಿ ಹೋಟೆಲ್ ಒಂದರಲ್ಲಿ ಮ್ಯಾನೇಜರ್ ಆಗಿದ್ದು, ನಿಷೇಧಿತ ಮಾದಕ ವಸ್ತುವಾದ ಹೈಡ್ರೋವಿಡ್ ಗಾಂಜಾವನ್ನು ಬೆಂಗಳೂರಿಗೆ ವಿಮಾನದ ಮುಖಾಂತರ ಸಾಗಾಟ ಮಾಡುತ್ತಿದ್ದಾನೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಸಾಗಾಟ ಮಾಡಲು ಎಡಲ್ ರೋಚ್ ಎಂಬಾತನನ್ನು ನೇಮಕ ಮಾಡಿಕೊಂಡಿದ್ದÀನು. ಎಡಲ್ ರೋಚ್ ಎಂಬಾತ ವಿಮಾನ ನಿಲ್ದಾಣದಿಂದ ಹೈಡ್ರೋವಿಡ್ ಗಾಂಜಾವನ್ನು  ಸಂದೀಪ್ ಶೆಟ್ಟಿ ಹೇಳಿದ ಸ್ಥಳಕ್ಕೆ ಸಾಗಿಸುವ ವ್ಯವಸ್ಥೆ ಮಾಡುತ್ತಿದ್ದನು. 

ಎಡಲ್ ರೋಚ್ ಮತ್ತು ಆರೋನ್ ವಿಶಾಲ್ ಲಾಸ್ರಾದೋ ಅವರು ಮಕ್ಸೂದ್ ಸಾಗ್ ಎಂಬಾತನ ಮೂಲಕ ಮೊಹಮ್ಮದ್ ಸಯ್ಯದ್ ಆಫ್ರೀದಿ ಮತ್ತು ಅಹಮ್ಮದ್ ಅಲಿ ಅರ್ಷಾನ್ ಅವರಿಗೆ ಬೆಂಗಳೂರಿನಲ್ಲಿ ಮಾದಕ ವಸ್ತುವನ್ನು ಪೂರೈಸಿರುತ್ತಾರೆ.  ಮೊಹಮ್ಮದ್ ಸಯ್ಯದ್ ಆಫ್ರೀದಿ ಮತ್ತು  ಅಹಮ್ಮದ್ ಅಲಿ ಅರ್ಷಾನ್ ಬೆಂಗಳೂರಿನಿಂದ ಗಾಂಜಾ, ಹೈಡ್ರೋವಿಡ್ ಮತ್ತು ಎಂ.ಡಿ.ಎಂ.ಎನ್ನು ತಮ್ಮ ಎಂ.ಜಿ ಹೆಕ್ಟರ್ ವಾಹನದಲ್ಲಿ ತೆಗೆದುಕೊಂಡು ಬಂದಿರುವುದಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದಾರೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಪೊಲೀಸರಿಂದ ಮುಂದುವರಿದ ಡ್ರಗ್ಸ್ ಕಾರ್ಯಾಚರಣೆ : ಮತ್ತೆ 6 ಮಂದಿ ಖಾಕಿ ಬಲೆಗೆ Rating: 5 Reviewed By: karavali Times
Scroll to Top