ಗಣತಿ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮ ಕಡ್ಡಾಯ : ಗೈರು ಹಾಜರಾಗುವವರ ವಿರುದ್ದ ಶಿಸ್ತು ಕ್ರಮ - Karavali Times ಗಣತಿ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮ ಕಡ್ಡಾಯ : ಗೈರು ಹಾಜರಾಗುವವರ ವಿರುದ್ದ ಶಿಸ್ತು ಕ್ರಮ - Karavali Times

728x90

30 March 2026

ಗಣತಿ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮ ಕಡ್ಡಾಯ : ಗೈರು ಹಾಜರಾಗುವವರ ವಿರುದ್ದ ಶಿಸ್ತು ಕ್ರಮ

ಮಂಗಳೂರು, ಮಾರ್ಚ್ 30, ಮಾರ್ಚ್, 2026 (ಕರಾವಳಿ ಟೈಮ್ಸ್) : ಮಂಗಳೂರು ನಗರ ವ್ಯಾಪ್ತಿಯಲ್ಲಿ ಜನಗಣತಿ 2027 ಕಾರ್ಯವನ್ನು ನಡೆಸುವ ಉದ್ದೇಶದಿಂದ ಒಟ್ಟು 909 ಗಣತಿ ಸಿಬ್ಬಂದಿಗಳನ್ನು (enumerator) 7 ಚಾರ್ಜ್ ಅಧಿಕಾರಿಗಳ ಅಧೀನದಲ್ಲಿ ನೇಮಕ ಮಾಡಲಾಗಿದೆ.  ಇದಲ್ಲದೆ, ಸ್ವಯಂ ಗಣತಿ (Self  Enumeration) ಪ್ರಕ್ರಿಯೆ ಎಪ್ರಿಲ್ 1 ರಿಂದ 15ರವರೆಗೆ ನಡೆಯಲಿದೆ. ನಾಗರೀಕರು ಸುರಕ್ಷಿತ ಆನ್ ಲೈನ್ ಪೆÇೀರ್ಟಲ್ (www.sc.census.gov.in) ಮೂಲಕ ವೈಯಕ್ತಿಕವಾಗಿ ತಮ್ಮದೇ ಆದ ಮಾಹಿತಿಗಳನ್ನು ಭರ್ತಿ ಮಾಡಲು ಅನುಕೂಲ ಮಾಡಿಕೊಡಲಾಗಿದೆ. 

ಗಣತಿ ಸಿಬ್ಬಂದಿಗಳಿಗೆ ಕಡ್ಡಾಯ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕೆಲ ಗಣತಿ ಸಿಬ್ಬಂದಿಗಳು ಸಮಂಜಸವಲ್ಲದ ಕಾರಣಗಳನ್ನು ನೀಡುತ್ತಾ ತರಬೇತಿಗೆ ಗೈರು ಹಾಜರಾಗಿರುವುದು ಗಮನಕ್ಕೆ ಬಂದಿದೆ. ಭಾರತದ ಜನಗಣತಿ ಕಾರ್ಯದ  ಯಶಸ್ವಿ ಅನುಷ್ಠಾನಕ್ಕೆ ತರಬೇತಿ ಅತ್ಯಂತ ಮಹತ್ವದ್ದಾಗಿದ್ದು, ಇಂತಹ ಗೈರು ಹಾಜರಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸಂಬಂಧಿಸಿದ ಎಲ್ಲಾ ಗಣತಿ ಸಿಬ್ಬಂದಿಗಳು ತಮ್ಮ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಲು ಸಿದ್ಧರಾಗಿರಬೇಕು. ಎಲ್ಲಾ ಚಾರ್ಜ್ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ಗಣತಿ ಸಿಬ್ಬಂದಿಗಳ ಹಾಜರಾತಿಯನ್ನು ಖಚಿತಪಡಿಸಿ, ಅಗತ್ಯ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಭಾರತದ ಜನಗಣತಿ ಕಾಯಿದೆ, 1948 (Census Act, 1948) ಅದರಡಿ ಜಾರಿಯಲ್ಲಿರುವ ನಿಯಮಾವಳಿಗಳ ಪ್ರಕಾರ, ಗೈರು ಹಾಜರಾದ ಗಣತಿ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ. ಮುಂದಿನ ತರಬೇತಿಗೆ ಅವರು ಕಡ್ಡಾಯವಾಗಿ ಹಾಜರಾಗಬೇಕಾಗಿದ್ದು, ಪಾಲನೆ ಮಾಡದವರ ವಿರುದ್ಧ ಕಾನೂನು ಮತ್ತು ಶಿಸ್ತು ಕ್ರಮ ಕೈಗೊಳ್ಳಲಾಗುವುದು.

ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಸಂಬಂಧಿಸಿದವರು ಕಟ್ಟುನಿಟ್ಟಾಗಿ ಸೂಚನೆಗಳನ್ನು ಪಾಲಿಸುವಂತೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಗಣತಿ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮ ಕಡ್ಡಾಯ : ಗೈರು ಹಾಜರಾಗುವವರ ವಿರುದ್ದ ಶಿಸ್ತು ಕ್ರಮ Rating: 5 Reviewed By: karavali Times
Scroll to Top