ಆರಿಫ್ ಹತ್ಯಾ ತನಿಖೆ ಚುರುಕು, ಕೃತ್ಯದಲ್ಲಿ ನೇರ ಭಾಗಿಯಾದ ಆರು ಮಂದಿಯ ಗುರುತು ಪತ್ತೆ, ಆರೋಪಿಗಳಿಗೆ ಆಶ್ರಯ ನೀಡಿದವರ ಮೇಲೂ ಕ್ರಮ : ಕಮಿಷನರ್ ಸುಧೀರ್ ರೆಡ್ಡಿ - Karavali Times ಆರಿಫ್ ಹತ್ಯಾ ತನಿಖೆ ಚುರುಕು, ಕೃತ್ಯದಲ್ಲಿ ನೇರ ಭಾಗಿಯಾದ ಆರು ಮಂದಿಯ ಗುರುತು ಪತ್ತೆ, ಆರೋಪಿಗಳಿಗೆ ಆಶ್ರಯ ನೀಡಿದವರ ಮೇಲೂ ಕ್ರಮ : ಕಮಿಷನರ್ ಸುಧೀರ್ ರೆಡ್ಡಿ - Karavali Times

728x90

30 March 2026

ಆರಿಫ್ ಹತ್ಯಾ ತನಿಖೆ ಚುರುಕು, ಕೃತ್ಯದಲ್ಲಿ ನೇರ ಭಾಗಿಯಾದ ಆರು ಮಂದಿಯ ಗುರುತು ಪತ್ತೆ, ಆರೋಪಿಗಳಿಗೆ ಆಶ್ರಯ ನೀಡಿದವರ ಮೇಲೂ ಕ್ರಮ : ಕಮಿಷನರ್ ಸುಧೀರ್ ರೆಡ್ಡಿ

 ಮಂಗಳೂರು, ಮಾರ್ಚ್ 30, ಮಾರ್ಚ್, 2026 (ಕರಾವಳಿ ಟೈಮ್ಸ್) : ಉಳ್ಳಾಲ ಮೇಲ್ಸೇತುವೆ ಮೇಲೆ ನಡೆದ ಆರಿಫ್ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯದಲ್ಲಿ ನೇರ ಭಾಗಿಯಾಗಿರುವ ಆರು ಮಂದಿ ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ. 

ಈಗಾಗಲೇ ಹತ್ಯೆ ಪ್ರಕರಣದ ತನಿಖೆಯನ್ನು ಸಿಸಿಬಿ ಎಸಿಪಿ ತಂಡಕ್ಕೆ ಹಸ್ತಾಂತರಿಸಲಾಗಿದೆ. ಆರೋಪಿಗಳು ನಿರಂತರವಾಗಿ ಸ್ಥಳ ಬದಲಾವಣೆ ಮಾಡುತ್ತಿರುವುದರಿಂದ ಅವರ ಬಂಧನಕ್ಕೆ ಸಮಯವಾಕಾಶ ಬೇಕಾಗಿದೆ. ತನಿಖೆಯ ಸಂದರ್ಭ ಸಂಪೂರ್ಣ ಸಂಚು ಮತ್ತು ಕೃತ್ಯದಲ್ಲಿ ಇನ್ನಷ್ಟು ವ್ಯಕ್ತಿಗಳ ಪಾಲ್ಗೊಳ್ಳುವಿಕೆ ಕಂಡು ಬಂದಿದ್ದು, ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಹಾಗೂ ಅಡಗಿಕೊಳ್ಳಲು ಸಹಾಯ ಮಾಡಿದ ಶಂಕಿತರನ್ನು ಕೂಡಾ ವಿಚಾರಣೆಗೊಳಪಡಿಸಲಾಗುತ್ತಿದೆ. ಕೃತ್ಯದಲ್ಲಿ ಅವರ ಪಾತ್ರ ದೃಢಪಟ್ಟಲ್ಲಿ ಅವರನ್ನು ಕೂಡಾ ಬಂಧಿಸಲಾಗುವುದು. 

ಆರೋಪಿಗಳಿಗೆ ಯಾವುದೇ ರೀತಿಯ ಆಶ್ರಯ ನೀಡಿದ ಅಥವಾ ಸಹಾಯ ಮಾಡಿದವರು ಯಾರೇ ಇದ್ದರೂ ಅವರುಗಳು ಕೂಡಾ ಬಿ ಎನ್ ಎಸ್ ಪ್ರಕಾರ ಅವರುಗಳನ್ನು ಕೂಡಾ ಆರೋಪಿಗಳೆಂದು ಪರಿಗಣಿಸಿ ಅವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಮಿಷನರ್ ರೆಡ್ಡಿ ಎಚ್ಚರಿಸಿದ್ದಾರೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಆರಿಫ್ ಹತ್ಯಾ ತನಿಖೆ ಚುರುಕು, ಕೃತ್ಯದಲ್ಲಿ ನೇರ ಭಾಗಿಯಾದ ಆರು ಮಂದಿಯ ಗುರುತು ಪತ್ತೆ, ಆರೋಪಿಗಳಿಗೆ ಆಶ್ರಯ ನೀಡಿದವರ ಮೇಲೂ ಕ್ರಮ : ಕಮಿಷನರ್ ಸುಧೀರ್ ರೆಡ್ಡಿ Rating: 5 Reviewed By: karavali Times
Scroll to Top