ಗ್ಯಾರಂಟಿ ಯೋಜನೆ ಪಡೆಯುವವರ ಗ್ರಾಮ ಮಟ್ಟದ ಸರ್ವೆ ಕಾರ್ಯ ನಡೆಯಲಿದೆ : ಡಾ ಪುಷ್ಪಾ ಅಮರನಾಥ್ - Karavali Times ಗ್ಯಾರಂಟಿ ಯೋಜನೆ ಪಡೆಯುವವರ ಗ್ರಾಮ ಮಟ್ಟದ ಸರ್ವೆ ಕಾರ್ಯ ನಡೆಯಲಿದೆ : ಡಾ ಪುಷ್ಪಾ ಅಮರನಾಥ್ - Karavali Times

728x90

11 March 2026

ಗ್ಯಾರಂಟಿ ಯೋಜನೆ ಪಡೆಯುವವರ ಗ್ರಾಮ ಮಟ್ಟದ ಸರ್ವೆ ಕಾರ್ಯ ನಡೆಯಲಿದೆ : ಡಾ ಪುಷ್ಪಾ ಅಮರನಾಥ್

ಕಡಬ, ಮಾರ್ಚ್ 11, 2026 (ಕರಾವಳಿ ಟೈಮ್ಸ್) : ಗ್ಯಾರಂಟಿ ಯೋಜನೆ ಬಡವರ, ಮಧ್ಯಮ ವರ್ಗದವರ ಜೀವನಾಡಿ. ಅವರ ಜೀವನಕ್ಕೆ ಒಂದಷ್ಟು ಆಸರೆಯಾಗಿ ರಾಜ್ಯದಲ್ಲಿ ಅನುಷ್ಠಾನವಾಗಿದೆ ಎಂದು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷೆ ಡಾ. ಪುಷ್ಪ ಅಮರನಾಥ್ ಹೇಳಿದರು.

ಕಡಬ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಬಿಳಿನೆಲೆ ಗ್ರಾಮ ಪಂಚಾಯತ್ ಇವುಗಳ ಜಂಟಿ ಆಶ್ರಯದಲ್ಲಿ ಬಿಳಿನೆಲೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ನೋಂದಣಿಗೆ ಬಾಕಿ ಇರುವ ಮತ್ತು ತಿರಸ್ಕøತ ಅರ್ಜಿಗಳ ವಿಲೇವಾರಿ ಶಿಬಿರ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಮೂಲಕ ಶಿಕ್ಷಣ, ಮನೆಗೆ ಬೆಳಕು, ಮಹಿಳೆಯವರಿಗೆ ಉಚಿತ ಪ್ರಯಾಣ, ಹೊಟ್ಟೆ ತುಂಬಿಸುವ, ನಿರುದ್ಯೊಗಿಗಳಿಗೆ ಒಂದಿಷ್ಟು ಆಸರೆಯಾಗುವ ಕಾರ್ಯ ಆಗಿದೆ. ಗ್ಯಾರಂಟಿ ಯೋಜನೆಯನ್ನು ಪಡೆಯುತ್ತಿರುವವರ ಬಗ್ಗೆ ಗ್ರಾಮ ಮಟ್ಟದಿಂದ ಮಾಹಿತಿ ಪಡೆಯುವ ಸರ್ವೆ ಕಾರ್ಯ ಮುಂದಿನ ದಿನಗಳಲ್ಲಿ ನಡೆಯಲಿದೆ. ಅರ್ಹರಿಗೆ ಮಾತ್ರವೇ ಸಿಗಬೇಕಾದ ಗ್ಯಾರಂಟಿ ಯೋಜನೆಯನ್ನು ಉಳ್ಳವರು ಪಡೆಯುತ್ತಿದ್ದಾರೆಯೇ ಎಂಬ ಬಗ್ಗೆಯೂ ಸರ್ವೆಯಲ್ಲಿ ಮಾಹಿತಿ ಸಿಗಲಿದೆ ಎಂದರು.

ಸಂವಿಧಾನದಿಂದ ಮಹಿಳೆಯರಿಗೂ ಅಧಿಕಾರ ಸಿಕ್ಕಿದೆ. ವಿಧಾನ ಸಭೆ, ಸಂಸತ್ತಿಗೂ ಮಹಿಳೆಯರ ಪ್ರವೇಶ ಆಗಬೇಕಾಗಿದ್ದು, ಕೇಂದ್ರದ ಮಹಿಳಾ ಮೀಸಲಾತಿ ಕೇವಲ ಪತ್ರಕ್ಕೆ ಸೀಮಿತವಾಗಿದ್ದು, ಇದು ಆದಷ್ಟು ಬೇಗ ಅನುಷ್ಠಾನ ಆಗಬೇಕಿದೆ. ಮಹಿಳೆಯವರಿಗೂ ಮೀಸಲಾತಿ ಸಿಗುತ್ತದೆ ಎಂಬ ಆಶಯ ಇದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಅಧ್ಯಕ್ಷತೆ ವಹಿಸಿದ್ದರು. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಪುತ್ತೂರು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ್ ಶೆಟ್ಟಿ, ಸುಳ್ಯ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಿ.ಪಿ. ವರ್ಗೀಸ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಪ್ರಶಸ್ತಿ ಪುರಸ್ಕøತ ಶಿಕ್ಷಕ ಸತೀಶ್ ಭಟ್, ಬಿಳಿನೆಲೆ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷೆ ಶಾರದಾ ದಿನೇಶ್, ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮನ್ನಾ ಜಬೀನ್, ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಚೆಲುವ ರಂಗಪ್ಪ, ಅಭಿಲಾಷ್ ಪಿ.ಕೆ., ಅನುಷ್ಠಾನ ಸಮಿತಿ ಸದಸ್ಯರಾದ ಸತೀಶ್ ಪಿ., ದೀಕ್ಷಿತ್ ಡಿ.ಜಿ, ಉಷಾ ಅಂಚನ್, ಕೆ. ಮಾಧವ ಪೂಜಾರಿ, ಭವಾನಿ ಶಂಕರ್ ಬಿ., ಜಗದೀಶ್ ಕೆ, ಸೈಮನ್ ಸಿ.ಜೆ, ಎ.ಕೆ. ಬಶೀರ್, ಮಹಮ್ಮದ್ ಹನೀಫ್, ಹರಿಣಾಕ್ಷಿ, ಟಿ. ರಾಘವೇಂದ್ರ, ಗಂಗಾಧರ ಶೆಟ್ಟಿ, ಅವಿನಾಶ್ ಬಿ.ಎಸ್. ಗೌರೀಶ್ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿ, ಕಡಬ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಪ್ರಸ್ತಾವನೆಗೈದರು. ಪಿ.ಡಿ.ಒ ಚಂದ್ರಾವತಿ ವಂದಿಸಿದರು. ಶಿಕ್ಷಕ ಲೋಕನಾಥ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಯ ನೋಂದಾವಣಿಗೆ ಬಾಕಿ ಇರುವ ಮತ್ತು ತಿರಸ್ಕøತ ಅರ್ಜಿಗಳ ವಿಲೇವಾರಿ ಮಾಡಲಾಯಿತು. ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರನ್ನು, ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಹಾಗೂ ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

  • Blogger Comments
  • Facebook Comments

0 comments:

Post a Comment

Item Reviewed: ಗ್ಯಾರಂಟಿ ಯೋಜನೆ ಪಡೆಯುವವರ ಗ್ರಾಮ ಮಟ್ಟದ ಸರ್ವೆ ಕಾರ್ಯ ನಡೆಯಲಿದೆ : ಡಾ ಪುಷ್ಪಾ ಅಮರನಾಥ್ Rating: 5 Reviewed By: karavali Times
Scroll to Top