ನೇರಳಕಟ್ಟೆ : ಲಕ್ಷಾಂತರ ಮೌಲ್ಯದ ಎಂಡಿಎಂಎ ಸಹಿತ ನಾಲ್ವರು ಖದೀಮರು ವಿಟ್ಲ ಪೊಲೀಸರ ಬಲೆಗೆ - Karavali Times ನೇರಳಕಟ್ಟೆ : ಲಕ್ಷಾಂತರ ಮೌಲ್ಯದ ಎಂಡಿಎಂಎ ಸಹಿತ ನಾಲ್ವರು ಖದೀಮರು ವಿಟ್ಲ ಪೊಲೀಸರ ಬಲೆಗೆ - Karavali Times

728x90

11 March 2026

ನೇರಳಕಟ್ಟೆ : ಲಕ್ಷಾಂತರ ಮೌಲ್ಯದ ಎಂಡಿಎಂಎ ಸಹಿತ ನಾಲ್ವರು ಖದೀಮರು ವಿಟ್ಲ ಪೊಲೀಸರ ಬಲೆಗೆ

ಬಂಟ್ವಾಳ, ಮಾರ್ಚ್ 11, 2026 (ಕರಾವಳಿ ಟೈಮ್ಸ್) : ಎಂಡಿಎಂಎ ಮಾದಕ ವಸ್ತು ಮನೆಯಲ್ಲೇ ದಾಸ್ತಾನಿಟ್ಟು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸರು ದಾಳಿ ನಡೆಸಿ ಎಂಡಿಎಂಎ ಸಹಿತ ನಾಲ್ವರನ್ನು ಬಂಧಿಸಿದ ಘಟನೆ ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ-ಇಂದಿರಾ ನಗರ ಎಂಬಲ್ಲಿ ನಡೆದಿದೆ. 

ಬಂಧಿತ ಆರೋಪಿಗಳನ್ನು ನೇರಳಕಟ್ಟೆ-ಭಗವಂತಕೋಡಿ ನಿವಾಸಿ ಅಶ್ರಫ್ ಜಿ (38), ಹಫೀಝ್ ಯಾನೆ  ಅಪ್ಪಿ, ಅಫ್ವಾನ್ ಹಾಗೂ ಅಶ್ರಫ್ ಎನ್ ಎ ಎಂದು ಹೆಸರಿಸಲಾಗಿದೆ. 

ನೇರಳಕಟ್ಟೆ ಇಂದಿರಾ ನಗರ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ಅಶ್ರಪ್ ಜಿ ಎಂಬಾತನು ತನ್ನ ಮನೆಯಲ್ಲಿ ಮಾದಕ ವಸ್ತುವಾದ ಎಂಡಿಎಂಎ ಸ್ವಾಧೀನದಲ್ಲಿಟ್ಟುಕೊಂಡು ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ, ವಿಟ್ಲ ಪೆÇಲೀಸ್ ಠಾಣಾ ಪಿಎಸೈ ರತ್ನ ಕುಮಾರ್ ಎಂ ಅವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. 

ಆರೋಪಿಗಳ ಜೊತೆ ಮನೆಯಲ್ಲಿದ್ದ 1,79,700/- ರೂಪಾಯಿ ಮೌಲ್ಯದ 17.97 ಗ್ರಾಂ ಎಂಡಿಎಂಎ ಮಾದಕವಸ್ತು, ಚೂರಿ ಹಾಗೂ ಇತರೆ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ನೇರಳಕಟ್ಟೆ : ಲಕ್ಷಾಂತರ ಮೌಲ್ಯದ ಎಂಡಿಎಂಎ ಸಹಿತ ನಾಲ್ವರು ಖದೀಮರು ವಿಟ್ಲ ಪೊಲೀಸರ ಬಲೆಗೆ Rating: 5 Reviewed By: karavali Times
Scroll to Top