ಕಡಬ, ಮಾರ್ಚ್ 10, 2026 (ಕರಾವಳಿ ಟೈಮ್ಸ್) : ಬಾವಿ ಕಲ್ಲನ್ನು ಹುಡಿ ಮಾಡಲು ಸ್ಫೋಟಕ ಬಳಸಿದ ಪರಿಣಾಮ ಸಮೀಪದ ಮನೆಗಳು ಬಿರುಕು ಬಿಟ್ಟ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ರಾಮಕುಂಜ ಗ್ರಾಮದ ಕಂಪ ಎಂಬಲ್ಲಿ ಜಮೀನು ಹೊಂದಿರುವ ಆರೋಪಿ ಸೋಮಶೇಖರ್ ಎಂಬವರು ಜಮೀನಿನಲ್ಲಿ ಬಾವಿಯ ಕೆಲಸ ಮಾಡಿಸುತ್ತಿದ್ದು, ಈ ವೇಳೆ ಮತ್ತೋರ್ವ ಆರೋಪಿ ಕೋಡಿಂಬಾಳ ಗ್ರಾಮದ ಶಿವರಾಮ ಎಂಬವರಿಗೆ ಬಾವಿಯಲ್ಲಿರುವ ಕಲ್ಲನ್ನು ಹುಡಿಮಾಡಲು ಕೆಲಸ ವಹಿಸಿರುತ್ತಾರೆ.
ಮಾರ್ಚ್ 8 ರಂದು ಸದ್ರಿ ಶಿವರಾಮರವರು ಬಾವಿಯೊಳಗಿನ ಕಲ್ಲನ್ನು ಸ್ಪೋಟಕ ಬಳಸಿ ಹುಡಿಮಾಡಲು ಸಿದ್ದತೆ ನಡೆಸಿರುವುದು ಕಂಡುಬಂದಿದ್ದು, ಆ ವೇಳೆ ಅದೇ ಪರಿಸರದ ನಿವಾಸಿಗಳು ಕೆಲಸ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ, ಸಮೀಪ ಮನೆಗಳಿರುವುದರಿಂದ ಸೊತ್ತು ಮತ್ತು ಜೀವ ಹಾನಿ ಆಗಬಹುದಾದ್ದರಿಂದ ಸ್ಪೋಟ ನಡೆಸದಂತೆ ಶಿವರಾಮ ಅವರಿಗೆ ತಿಳಿಸಿ ಬಂದಿದ್ದರು. ಆದರೆ ಕೆಲವೇ ಹೊತ್ತಿನಲ್ಲಿ ಶಿವರಾಮ ಅವರು ಸ್ಪೋಟಕ ಬಳಸಿ ಸ್ಫೋಟ ನಡೆಸಿರುತ್ತಾರೆ. ಇದರಿಂದ ಸಮೀಪದ ಮನೆಯೊಂದರ ಕಟ್ಟಿಯ ಬಳಿ ಬಿರುಕು ಬಿಟ್ಟಿರುತ್ತದೆ ಎಂದು ಮಾ 8 ರಂದು ವರದಿಯಾದ ದೂರಿನ ಮೇರೆಗೆ, ಕಡಬ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












0 comments:
Post a Comment