ಮಂಗಳೂರು, ಮಾರ್ಚ್ 10, 2026 (ಕರಾವಳಿ ಟೈಮ್ಸ್) : ಕಾವೂರು ಉಲ್ಲಾಸ್ ನಗರದ ಮನೆಯಲ್ಲಿ ನಡೆದ ಚಿನ್ನ ಹಾಗೂ ಬೆಳ್ಳಿಯ ಆಭರಣ ಕಳವು ಪ್ರಕರಣ ಬೇಧಿಸಿದ ಕಾವೂರು ಪೊಲೀಸರು ಆರೋಪಿ ಸಹಿತ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕು, ಸಜಿಪನಡು ಗ್ರಾಮದ ದೇರಾಜೆ ನಿವಾಸಿ ದೊಂಬಯ್ಯ ಪೂಜಾರಿ ಅವರ ಪುತ್ರ ಅಶೋಕ (41) ಎಂದು ಹೆಸರಿಸಲಾಗಿದೆ. ಈತ ಮಾ 7 ರಂದು ಮದ್ಯಾಹ್ನ 12 ಗಂಟೆ ವೇಳೆಗೆ ಕಾವೂರು-ಉಲ್ಲಾಸ್ ನಗರದ ಮನೆಯೊಂದಕ್ಕೆ ಯಾರು ಇಲ್ಲದ ವೇಳೆ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿ ಸುಮಾರು 4.80 ಲಕ್ಷ ರೂಪಾಯಿ ಮೌಲ್ಯದ 39 ಗ್ರಾಂ ಚಿನ್ನಭಾರಣ ಹಾಗೂ 182 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳವುಗೈದಿದ್ದ. ಈ ಬಗ್ಗೆ ಕಾವೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಕಾವೂರು ಪೊಲೀಸರು ಆರೋಪಿಯನ್ನು 24 ಗಂಟೆ ಒಳಗೆ ಅಂದರೆ ಮಾರ್ಚ್ 8 ರಂದು ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ. ಆರೋಪಿಯಿಂದ ಕಳವು ಮಾಡಿರುವ ಎಲ್ಲಾ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುತ್ತಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪತ್ತೆ ಕಾರ್ಯಾಚರಣೆಯಲ್ಲಿ ಕಾವೂರು ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ರಾಘವೇಂದ್ರ ಎಂ ಬೈಂದೂರು, ಪಿಎಸ್ಸೈ ಮಲ್ಲಿಕಾರ್ಜುನ ಬಿರಾದಾರ ಹಾಗೂ ಸಿಬ್ಬಂದಿಗಳಾದ ದಿನೇಶ್, ಮಾಲತೇಶ್, ನಾಗರಾಜ್, ರಿಯಾಜ್ ಅವರು ಪಾಲ್ಗೊಂಡಿದ್ದರು.












0 comments:
Post a Comment