ಅಕ್ರಮ ಕೋಳಿ ಅಂಕ ಸ್ಥಳಕ್ಕೆ ವೇಣೂರು ಪೊಲೀಸರ ದಾಳಿ : ಆರೋಪಿಗಳು ಪರಾರಿ - Karavali Times ಅಕ್ರಮ ಕೋಳಿ ಅಂಕ ಸ್ಥಳಕ್ಕೆ ವೇಣೂರು ಪೊಲೀಸರ ದಾಳಿ : ಆರೋಪಿಗಳು ಪರಾರಿ - Karavali Times

728x90

3 March 2026

ಅಕ್ರಮ ಕೋಳಿ ಅಂಕ ಸ್ಥಳಕ್ಕೆ ವೇಣೂರು ಪೊಲೀಸರ ದಾಳಿ : ಆರೋಪಿಗಳು ಪರಾರಿ

ಬೆಳ್ತಂಗಡಿ, ಮಾರ್ಚ್ 03, 2026 (ಕರಾವಳಿ ಟೈಮ್ಸ್) : ಸಾರ್ವಜನಿಕ ಗುಡ್ಡ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕದ ಸ್ಥಳಕ್ಕೆ ವೇಣೂರು ಪೊಲೀಸರು ದಾಳಿ ನಡೆಸಿದ ಘಟನೆ ಕೊಕ್ರಾಡಿ-ಎಳಂಬ ಎಂಬಲ್ಲಿ ಮಾ 3 ರಂದು ಮಧ್ಯಾಹ್ನ ನಡೆದಿದೆ. 

ವೇಣೂರು ಪೊಲೀಸ್ ಠಾಣಾ ಪಿಎಸ್ಸೈ ಅಕ್ಷಯ ಡವಗಿ ಅವರು ಸಿಬ್ಬಂದಿಗಳೊದಿಗೆ ರೌಂಡ್ಸ್ ಕರ್ತವ್ಯದಲ್ಲಿ, ಬೆಳ್ತಂಗಡಿ ತಾಲೂಕು ಸಾವ್ಯ ಗ್ರಾಮದ ಪಿಲಿಪಂಜರ ಎಂಬಲ್ಲಿ ಹೋಗುತ್ತಿದ್ದಾಗ, ಕೊಕ್ರಾಡಿ-ಎಳಂಬ ಸಾರ್ವಜನಿಕ ರಸ್ತೆ ಬದಿ ಸಾರ್ವಜನಿಕ ಗುಡ್ಡ ಪ್ರದೇಶದಲ್ಲಿ ಸುಮಾರು 7-8 ಜನ ಗುಂಪು ಸೇರಿ ಅಕ್ರಮವಾಗಿ ಕೋಳಿ ಅಂಕ ಎಂಬ ಜುಗಾರಿ ಆಟ ಆಡುತ್ತಿರುವುದು ಕಂಡುಬಂದಿದೆ. ಪೊಲೀಸರು ಸ್ಥಳಕ್ಕೆ ತೆರಳಿದಾಗ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳು ಓಡಿ ಪರಾರಿಯಾಗಿದ್ದಾರೆ. 

ಸ್ಥಳದಲ್ಲಿ ಕಟ್ಟಿ ಹಾಕಿದ್ದ ಮೂರು ಹುಂಜ ಕೋಳಿಗಳು ಮತ್ತು 2,100/- ರೂಪಾಯಿ ನಗದು ಹಣ  ಸ್ಥಳದಲ್ಲಿ ಪೊಲೀಸರಿಗೆ ದೊರೆತಿದೆ. ಪರಾರಿಯಾದ ಆರೋಪಿಗಳನ್ನು ಪ್ರಕಾಶ ಪೆರ್ಮುಡ, ಸಂಜೀವ ಕುತ್ಲೂರು, ಸುರೇಶ ಕುತ್ಲೂರು, ಸೇಸಪ್ಪ ಶೆಟ್ಟಿ ಸುಲ್ಕೇರಿ, ಜಯಚಂದ್ರ ರೈ ಕುತ್ಲೂರು ಹಾಗೂ ಇತರ ಮೂರು ಜನ ಎಂಬುದಾಗಿ ತಿಳಿದುಬಂದಿದೆ. ಈ ಬಗ್ಗೆ ವೇಣೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಕ್ರಮ ಕೋಳಿ ಅಂಕ ಸ್ಥಳಕ್ಕೆ ವೇಣೂರು ಪೊಲೀಸರ ದಾಳಿ : ಆರೋಪಿಗಳು ಪರಾರಿ Rating: 5 Reviewed By: karavali Times
Scroll to Top