ಬಂಟ್ವಾಳ, ಮಾರ್ಚ್ 12, ಮಾರ್ಚ್, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರಿನಲ್ಲಿ ಪೈಪ್ ದುರಸ್ತಿ ಬಳಿಕ 2 ವಾರಗಳಿಂದ ಮುಚ್ಚದೆ ಹಾಗೇ ಬಿಟ್ಟಿದ್ದ ಗುಂಡಿಯನ್ನು ಕೊನೆಗೂ ಮುಚ್ಚುವ ಮೂಲಕ ಸ್ಥಳೀಯರ ಆತಂಕಕ್ಕೆ ತೆರೆ ಎಳೆದಿದೆ.
ಪರಿಸರವಾಸಿಗಳ ಬೇಡಿಕೆಗೆ ಸ್ಪಂದಿಸಿದ ಪುರಸಭಾ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು ಸಿಬ್ಬಂದಿಗಳ ಮೂಲಕ ಗುಂಡಿ ಮುಚ್ಚುವ ಕಾರ್ಯ ಕೈಗೊಂಡಿದ್ದಾರೆ. ಪೈಪ್ ದುರಸ್ತಿಯಾಗಿ 2 ವಾರಗಳಾದರೂ ತೋಡಿದ ಗುಂಡಿ ಮುಚ್ಚದೆ ಅಪಾಯ ಆಹ್ವಾನಿಸುತ್ತಿದ್ದ ಬಗ್ಗೆ ಬುಧವಾರ ಪತ್ರಿಕೆ ಸಚಿತ್ರ ವರದಿ ಪ್ರಕಟಿಸಿ ಪುರಸಭಾಧಿಕಾರಿಗಳನ್ನು ಎಚ್ಚರಿಸಿತ್ತು ಎಂಬುದು ಗಮನಾರ್ಹ.














0 comments:
Post a Comment