ಬಿ.ಸಿ.ರೋಡಿನಲ್ಲಿ ಪೈಪ್ ಲೈನಿಗೆ ಹಾನಿ ಸಂಭವಿಸಿ ದಿನವಿಡೀ ಜೀವಜಲ ಪೋಲು - Karavali Times ಬಿ.ಸಿ.ರೋಡಿನಲ್ಲಿ ಪೈಪ್ ಲೈನಿಗೆ ಹಾನಿ ಸಂಭವಿಸಿ ದಿನವಿಡೀ ಜೀವಜಲ ಪೋಲು - Karavali Times

728x90

16 March 2026

ಬಿ.ಸಿ.ರೋಡಿನಲ್ಲಿ ಪೈಪ್ ಲೈನಿಗೆ ಹಾನಿ ಸಂಭವಿಸಿ ದಿನವಿಡೀ ಜೀವಜಲ ಪೋಲು

ಬಂಟ್ವಾಳ, ಮಾರ್ಚ್ 16, ಮಾರ್ಚ್, 2026 (ಕರಾವಳಿ ಟೈಮ್ಸ್) :  ಬಿ ಸಿ ರೋಡಿನ ತೋಟಗಾರಿಕಾ ಸಹಾಯಕ ನಿರ್ದೇಶಕರ ಕಚೇರಿ ಆವರಣದ ಹೊರಭಾಗದಲ್ಲಿ ಪುರಸಭಾ ಕುಡಿಯುವ ನೀರಿನ ಪೈಪ್ ಒಡೆದು ದಿನವಿಡೀ ಜೀವಜಲ ಪೋಲಾಗುತ್ತಿದ್ದ ದೃಶ್ಯ ಸೋಮವಾರ ಕಂಡು ಬಂದಿದೆ. 

ಇಲ್ಲಿನ ತೋಟಗಾರಿಕಾ ಇಲಾಖಾ ಕಚೇರಿಯ ಆವರಣದ ಹೊರಭಾಗದಲ್ಲಿ ಅನ್ನಪೂಣೇಶ್ವರಿ ನಗರ, ಪೊಲೀಸ್ ಲೇನ್ ಬಿ ಸಿ ರೋಡು ಎಂಬ ನಾಮಫಲಕ ಹೂಳಲಾಗಿದ್ದು, ಅದರ ಬುಡದಲ್ಲೇ ಈ ನೀರು ಪೋಲಾಗುತ್ತಿರುವ ದೃಶ್ಯ ಕಂಡು ಬಂದಿದೆ. ನಾಮಫಲಕ ಹುತು ಹಾಕುವ ಸಂದರ್ಭ ಇಲ್ಲಿನ ಪೈಪಿಗೆ ಹಾನಿ ಸಂಭವಿಸಿ ಈ ನೀರು ಪೋಲಾಗುತ್ತಿತ್ತೋ ಅಥವಾ ಇನ್ಯಾವುದೇ ಕಾರಣದಿಂದ ಪೈಪ್ ಲೈನಿಗೆ ಹಾನಿ ಸಂಭವಿಸಿದೆಯೋ ಎಂಬುದು ಸರಿಯಾಗಿ ತಿಳಿದು ಬಂದಿಲ್ಲ ಎಂದಿರುವ ಸ್ಥಳೀಯರು ಒಟ್ಟಿನಲ್ಲಿ ಸುಡು ಬೇಸಿಗೆಯಲ್ಲಿ ಜೀವಜಲ ಪೋಲಾಗುತ್ತಾ ಮೈಲುದ್ದ ಹರಿಯುತ್ತಿರುವುದು ಮಾತ್ರ ಕಂಡು ಬಂದಿದೆ ಎಂದು ತಿಳಿಸಿದ್ದಾರೆ. ಪೈಪಿಗೆ ಆಗಿರುವ ಹಾನಿಗೆ ಪರಿಹಾರ ಕಲ್ಪಿಸಿ ನೀರು ಪೋಲಾಗುತ್ತಿರುವುದನ್ನು ತಕ್ಷಣ ಸರಿಪಡಿಸುವಂತೆ ಸ್ಥಳೀಯರು ಪುರಸಭಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡಿನಲ್ಲಿ ಪೈಪ್ ಲೈನಿಗೆ ಹಾನಿ ಸಂಭವಿಸಿ ದಿನವಿಡೀ ಜೀವಜಲ ಪೋಲು Rating: 5 Reviewed By: karavali Times
Scroll to Top