ಬೆಂಗಳೂರು, ಮಾರ್ಚ್ 26, ಮಾರ್ಚ್, 2026 (ಕರಾವಳಿ ಟೈಮ್ಸ್) : ಮಾರ್ಚ್ 30 ರಂದು ಮಂಗಳವಾರ ನಡೆಯಬೇಕಿದ್ದ ಎಸ್ಸೆಸ್ಸೆಲ್ಸಿ ಹಿಂದಿ ಪರೀಕ್ಷೆ ಮಾರ್ಚ್ 31ರ ಮಂಗಳವಾರಕ್ಕೆ ಮಾಡಲಾಗಿದೆ ಎಂದು ಪರೀಕ್ಷಾ ಬೋರ್ಡ್ ಮಾಹಿತಿ ನೀಡಿದೆ.
ರಾಜ್ಯ ಸರಕಾರ ಮಹಾವೀರ ಜಯಂತಿ ರಜೆಯನ್ನು ಮಾರ್ಚ್ 31 ರ ಬದಲಾಗಿ ಮಾರ್ಚ್ 30ಕ್ಕೆ ಬದಲಾವಣೆ ಮಾಡಿರುವ ಹಿನ್ನಲೆಯಲ್ಲಿ ಈ ಪರೀಕ್ಷಾ ಬದಲಾವಣೆ ಮಾಡಲಾಗಿದೆ. ಈ ಮೊದಲು ಮಾ. 31ಕ್ಕೆ ಸರಕಾರಿ ರಜೆಯಿದ್ದರಿಂದ ಹಿಂದಿ ಪರೀಕ್ಷೆ ಮಾರ್ಚ 30ಕ್ಕೆ ನಿಗದಿಪಡಿಸಲಾಗಿತ್ತು. ಇದೀಗ ಸರ್ಕಾರ ಸರಕಾರಿ ರಜೆ ಪರಿಷ್ಕರಣೆ ಮಾಡಿದ್ದು, ಮಾರ್ಚ್ 31ರ ರಜೆಯನ್ನು ಮಾರ್ಚ್ 30ಕ್ಕೆ ಘೋಷಿಸಿದೆ. ಹೀಗಾಗಿ ಪರೀಕ್ಷಾ ದಿನಾಂಕವನ್ನು ಬದಲಿಸಿ, ಮಾ. 31ಕ್ಕೆ ನಡೆಸಲು ತೀರ್ಮಾನಿಸಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಬಗ್ಗೆ ಮಾಹಿತಿ ನೀಡಿದ್ದು, ಮಹಾವೀರ ಜಯಂತಿ ರಜೆ ಬದಲಾವಣೆ ಮಾಡಿರುವ ಹಿನ್ನಲೆಯಲ್ಲಿ ಎಸ್ಸೆಸ್ಸೆಲ್ಸಿ ಹಿಂದಿ ಪರೀಕ್ಷೆಯ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದೆ. ತಿಳಿಸಿದೆ.











0 comments:
Post a Comment