ಬೆಂಗಳೂರು, ಮಾರ್ಚ್ 26, ಮಾರ್ಚ್, 2026 (ಕರಾವಳಿ ಟೈಮ್ಸ್) : ಒಂದನೇ ತರಗತಿ ದಾಖಲಾತಿಗೆ ಆರು ವರ್ಷ ತುಂಬಿರಬೇಕೆಂಬ ಕಡ್ಡಾಯ ನಿಯಮದಲ್ಲಿ ಈ ವರ್ಷವೂ ರಾಜ್ಯ ಸರಕಾರ ವಿನಾಯಿತಿ ನೀಡಿದ್ದು, 60 ದಿನಗಳ ವಿನಾಯಿತಿ ನೀಡಿ ಮಹತ್ವದ ತೀರ್ಮಾನ ಕೈಗೊಂಡಿದೆ.
ವಿಧಾನಸಭೆಯಲ್ಲಿ ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ ಮಾಡಿದ್ದಾರೆ. ಒಂದನೇ ತರಗತಿಗೆ ದಾಖಲಾಗಲು ಆರು ವರ್ಷ ತುಂಬಿರಬೇಕೆಂಬ ನಿಯಮದಲ್ಲಿ 2026-27ನೇ ವರ್ಷದ ಶೈಕ್ಷಣಿಕ ವರ್ಷದಲ್ಲಿ 60 ದಿನಗಳ ಸಡಿಲಿಕೆ ಕೊಡುವ ತೀರ್ಮಾನ ಮಾಡಲಾಗಿದೆ ಎಂದಿದ್ದಾರೆ.
ಸರಕಾರದ ಈ ನಿರ್ಧಾರದಿಂದ 5 ವರ್ಷ 10 ತಿಂಗಳು ಅಥವಾ ಅದರ ಮೇಲೆ ವಯಸ್ಸಾಗಿರುವ ಮಕ್ಕಳೂ ಸಹ ಈ ವರ್ಷ ಒಂದನೇ ತರಗತಿಗೆ ದಾಖಲಾಗಬಹುದು. ಈ ಸಡಿಲಿಕೆ ಎಲ್‍ಕೆಜಿ, ಯುಕೆಜಿ, ಒಂದನೇ ತರಗತಿಗೆ ಅನ್ವಯವಾಗಲಿದೆ.
ವಯೋಮಿತಿ ಸಡಿಲಿಕೆಗೆ ಆಗ್ರಹಿಸಿ ಮಕ್ಕಳ ಪೆÇೀಷಕರು ಸರಕಾರವನ್ನು ಒತ್ತಾಯಿಸಿದ ಹಿನ್ನಲೆಯಲ್ಲಿ ಸರಕಾರ ಇದೀಗ ಈ ನಿರ್ಣಯ ಪ್ರಕಟಿಸಿದೆ. ಸರ್ಕಾರದ ನಿರ್ಧಾರದಿಂದ ಇದೀಗ ಮಕ್ಕಳ ಪೆÇೀಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಪ್ರತೀ ಬಾರಿಯೂ ಈ ಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಹೊಸದಾಗಿ ಕಾನೂನು ತಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ನಿರ್ಧರಿಸಿದೆ. ಇದುವರೆಗೆ ಎಲ್‍ಕೆಜಿ, ಯುಕೆಜಿಗೆ ರೆಗ್ಯುಲೇಟರಿ ನಿಯಮ ಇರಲಿಲ್ಲ. ಇದಕ್ಕಾಗಿ ಹೊಸ ಕಾನೂನು ತಂದು ಎಲ್‍ಕೆಜಿ, ಯುಕೆಜಿಯಲ್ಲೇ ದಾಖಲಾತಿಗೆ ವಯೋಮಿತಿ ನಿಗದಿ ಮಾಡಿ ಸ್ಪಷ್ಟತೆ ಕೊಡಲಾಗುವುದು. ಮುಂದಿನ ಅಧಿವೇಶನದಲ್ಲಿ ಈ ಸಂಬಂಧ ಮಸೂದೆ ಮಂಡನೆ ಮಾಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.











0 comments:
Post a Comment