ಬಂಟ್ವಾಳ, ಮಾರ್ಚ್ 01, 2026 (ಕರಾವಳಿ ಟೈಮ್ಸ್) : ಮಾನವೀಯ ಮೌಲ್ಯಗಳಿಲ್ಲದ ಜ್ಞಾನಕ್ಕೆ ಬೆಲೆಯಿಲ್ಲ. ಕೇವಲ ಪಠ್ಯಕ್ರಮವಷ್ಟೇ ಶಿಕ್ಷಣವಲ್ಲ. ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವುದೇ ಶಿಕ್ಷಣ ಎಂದು ಪುತ್ತೂರು ಸಂತ ಫಿಲೋಮಿನಾ ಕಾಲೇಜು ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ ಚಂದ್ರಶೇಖರ್ ಹೇಳಿದರು.
ಬಂಟ್ವಾಳ ಎಸ್ ವಿ ಎಸ್ ಕಾಲೇಜು ವಿಜ್ಞಾನ ಸಂಘ, ಐಐಸಿ ಹಾಗೂ ಐಕ್ಯುಎಸಿ ಇವುಗಳ ಜಂಟಿ ಆಶ್ರಯದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕøತ ಸರ್ ಸಿ ವಿ ರಾಮನ್ ಜನ್ಮದಿನದ ಅಂಗವಾಗಿ ನಡೆದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಪ್ರೊ ಎಂ ಡಿ ಮಂಚಿ ಮಾತನಾಡಿ, ವಿಜ್ಞಾನವೆಂದರೆ ತಾರ್ಕಿಕ ಜ್ಞಾನದೊಂದಿಗೆ ವಸ್ತುನಿಷ್ಠ ವಿಷಯವನ್ನು ಪ್ರತಿಪಾದಿಸುವುದಾಗಿದೆ. ನಮ್ಮ ಬದುಕಿನ ಪ್ರತಿಯೊಂದು ಹಂತದಲ್ಲಿಯೂ ವಿಜ್ಞಾನವು ಸೇರಿದೆ ಎಂದರು.
ವಿಜ್ಞಾನ ಸಂಘದ ಸಂಯೋಜಕ ಡಾ ವಿನಾಯಕ ಕೆ ಎಸ್ ಸ್ವಾಗತಿಸಿ, ಶ್ರೀಮತಿ ಶ್ರೀದೇವಿ ವಂದಿಸಿದರು. ಸುಪ್ರೀತ್ ಕಡಕೋಳ್ ಅತಿಥಿ ಪರಿಚಯ ಮಾಡಿದರು. ಕು ವೀಕ್ಷಿತಾ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ವಂದಿತ ಹಾಗೂ ನಿಧಿ ಪ್ರಾರ್ಥನೆ ನೆರವೇರಿಸಿದರು. ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
















0 comments:
Post a Comment